ಹುಡುಕಿ

ರಫಾ ಪ್ರದೇಶ ಬಿಟ್ಟು ತೆರಳುವಂತೆ ಪ್ಯಾಲೆಸ್ತಿಯನ್ನರಿಗೆ ಸೂಚಿಸಿದ ಇಸ್ರೇಲ್

ಪವಿತ್ರ ನಾಡಿನಲ್ಲಿ ಯುಧ್ಧದ ಯಾತನೆಯು ಮುಂದುವರೆಯುತ್ತಿರುವ ಹೊತ್ತಿನಲ್ಲೇ, ಇಸ್ರೇಲ್ ದೇಶವು ಪ್ಯಾಲೆಸ್ತೀಯನ್ನರಿಗೆ ರಫಾ ಪ್ರದೇಶವನ್ನು ಬಿಟ್ಟು ತೆರಳುವಂತೆ ಸೂಚಿಸಿದೆ.

ವರದಿ: ನೇಥನ್ ಮೊರ್ಲೆ, ಅಜಯ್ ಕುಮಾರ್

ಇಸ್ರೇಲ್ ಸೇನೆಯು ದಕ್ಷಿಣಾ ಗಾಜಾದ ರಫಾ ನಗರದಲ್ಲಿರುವ ಪ್ಯಾಲೆಸ್ತೀಯನ್ನರಿಗೆ ಮಾನವೀಯ ನೆರವು ಪ್ರದೇಶಗಳಿಗೆ ಹೋಗುವಂತೆ ಸೂಚಿಸಿದೆ. ಈ ಸೂಚನೆಯ ಅರ್ಥ ಈ ಪ್ರದೇಶದ ಮೇಲೆ ದಾಳಿ ನಡೆಯಲಿದೆ ಎಂಬುದಾಗಿದೆ.

ನಗರದಲ್ಲಿ ಮಿಲಿಟರಿ ಕಾರ್ಯಾಚರಣೆ ಆರಂಭಿಸುವುದನ್ನು ಯೋಜಿಸಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಮಿಲಿಟರಿ ತಡರಾತ್ರಿ ಈ ಪ್ರದೇಶವನ್ನು ಬಿಟ್ಟು ತೆರಳಲು ನಾಗರೀಕರಿಗೆ ಮೇಲಿನಿಂದ ಭಿತ್ತಿಪತ್ರಗಳನ್ನು ಚೆಲ್ಲಿದೆ. 

ಇಸ್ರೇಲ್ ರಕ್ಷಣಾ ಸಚಿವರ ಪ್ರಕಾರ ರಫಾ ನಗರದಲ್ಲಿರುವ ಹಮಾಸ್ ಬಂಡುಕೋರರ ಮೇಲೆ ದಾಳಿಯ ಅವಶ್ಯಕತೆ ಇದೆ. ಆದರೆ, ಇಲ್ಲಿನ ಸಾವಿರಾರು ನಾಗರೀಕರ ಸುರಕ್ಷತೆಯ ಕುರಿತು ಅಂತರಾಷ್ಟ್ರೀಯ ಸಮುದಾಯವು ಕಳವಳ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.

ಇದೇ ವೇಳೆ ರಫಾ ನಗರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸುಮಾರು ಹನ್ನೆರಡು ಜನರು ಮೃತ ಹೊಂದಿದ್ದು, ಹಮಾಸ್ ನಡೆಸಿದ ಪ್ರತಿ ದಾಳಿಯಲ್ಲಿ ಮೂವರು ಇಸ್ರೇಲಿ ಸೈನಿಕರ ಹತ್ಯೆಯಾಗಿದೆ. 

ಗಾಜಾದಲ್ಲಿ ಕದನ ವಿರಾಮ, ಶಾಂತಿ ಸ್ಥಾಪನೆಯ ಕುರಿತು ವಾರಾಂತ್ಯದಲ್ಲಿ ಮಾತುಕತೆಗಳು ನಡೆದ ಬೆನ್ನಲ್ಲೇ ಈ ದಾಳಿಗಳು ಸಂಭವಿಸಿವೆ. 

06 ಮೇ 2024, 15:04