ಹುಡುಕಿ

ಹೈಟಿ ದೇಶದ ಉನ್ನತ ಸಮಿತಿಯು ಪ್ರಧಾನಮಂತ್ರಿಯನ್ನು ಆರಿಸಿದೆ

ಐಟಿ ದೇಶದ ಉನ್ನತ ಸಮಿತಿಯು ಅಂತಿಮವಾಗಿ ಪ್ರಧಾನಮಂತ್ರಿಯನ್ನು ಹೆಸರಿಸಿದೆ. ದೇಶವನ್ನು ಧೂಳಿನಿಂದ ಮತ್ತೆ ಕಟ್ಟುವುದು ನೂತನ ಪ್ರಧಾನ ಮಂತ್ರಿಗಳ ಪ್ರಮುಖ ಜವಾಬ್ದಾರಿಯಾಗಿದೆ.

ವರದಿ: ಜೇಮ್ಸ್ ಬ್ಲೀಯರ್ಸ್, ಅಜಯ್ ಕುಮಾರ್

ಹೈಟಿ ದೇಶದ ನೂತನ ಪ್ರಧಾನ ಮಂತ್ರಿಯಾದ ಗ್ಯಾರಿ ಕೊನಿಲ್ ಅವರು ಸಮಿತಿಯು ತಮ್ಮನ್ನು ಪ್ರಧಾನಮಂತ್ರಿಯನ್ನಾಗಿ ನೇಮಿಸಿದ್ದಕ್ಕೆ ಧನ್ಯವಾದಗಳು ತಿಳಿಸಿದ್ದಾರೆ ಹಾಗೂ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಪ್ರಧಾನ ಮಂತ್ರಿ ಆಗುವುದು ಎಂದರೆ ದೊಡ್ಡ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡಂತೆ ಎಂದು ಹೇಳಿರುವ ಅವರು, ಹೈಟಿ ದೇಶದ ಉತ್ತಮ ಭವಿಷ್ಯಕ್ಕಾಗಿ ಕೆಲಸ ಮಾಡುವಂತೆ ಶ್ರಮಿಸುವುದಾಗಿ ಹೇಳಿದ್ದಾರೆ.

ಪ್ರಸ್ತುತ ಹೈಟಿ ದೇಶದಲ್ಲಿ ಅರಾಜಕತೆ ಇದ್ದು, ಇಡೀ ದೇಶವನ್ನು ಬೀದಿ ರೌಡಿಗಳು ಅಕ್ರಮಿಸಿಕೊಂಡಿದ್ದಾರೆ. ಇವರು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ರೌಡಿಸಂ, ಅಪಹರಣ, ಹಣಕ್ಕಾಗಿ ಕೊಲೆ ಮುಂತಾದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ದೇಶವನ್ನು ಅವ್ಯವಸ್ಥೆಗೆ ದೂಡಿದ್ದಾರೆ. ಕೊಲಂಬಿಯನ್ ಕೊಲೆಗಾರರು 2021 ರಲ್ಲಿ ಆರ್ ಟಿ ದೇಶದ ಅಂದಿನ ಪ್ರಧಾನ ಮಂತ್ರಿ ಜುವನೆಲ್ ಮೊಯ್ಸೆ ಅವರನ್ನು ಹತ್ಯೆ ಮಾಡಿದರು. ಅದಾದ ನಂತರ ಇಡೀ ದೇಶವು ಈ ರೌಡಿಗಳ ಪಾಲಾಗಿ, ಅವರು ದೇಶದಾದ್ಯಂತ ಹಬ್ಬಿಕೊಂಡಿದ್ದಾರೆ.

ಪ್ರಧಾನ ಮಂತ್ರಿ ಹುದ್ದೆಯ ಅಧಿಕಾರವನ್ನು ಸ್ವೀಕರಿಸುವುದಕ್ಕಾಗಿ ಗ್ಯಾರಿ ಅವರು ತಮ್ಮ ಯೂನಿಸೆಫ್ ಪ್ರಾಂತೀಯ ನಿರ್ದೇಶಕ ಸ್ಥಾನವನ್ನು ತ್ಯಜಿಸಿದ್ದಾರೆ. ಇವರು ಕಳೆದ ಬಾರಿ 2011ರಲ್ಲಿ ಒಂದು ವರ್ಷಗಳ ಕಾಲ ಹೈಟಿ ದೇಶದ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ಯಾರಿ, ಚೀಫ್ ಆಫ್ ಸ್ಟಾಫ್ ಆಗಿ ಕಾರ್ಯನಿರ್ವಹಿಸಿದ್ದರು.

ನೂತನ ಪ್ರಧಾನ ಮಂತ್ರಿ ಗ್ಯಾರಿ ಅವರು ಧೈರ್ಯ ಬಗ್ಗೆ ಮನ್ನುಗಬೇಕಿದೆ. ಅವರು ತಮ್ಮ ಸಮಿತಿಯೊಂದಿಗೆ ಹೈಟಿ ದೇಶವನ್ನು ಪ್ರಜಾಸತ್ತಾತ್ಮಕವಾಗಿಸುವಲ್ಲಿ ಹಾಗೂ ಅಪರಾಧಿಕ ಚಟುವಟಿಕೆಗಳಿಂದ ಮುಕ್ತವಾಗಿಸುವಲ್ಲಿ ಸತತ ಪರಿಶ್ರಮದಿಂದ ಕಾರ್ಯನಿರ್ವಹಿಸಬೇಕಿದೆ. ಇನ್ನೆರಡು ವರ್ಷಗಳಲ್ಲಿ ಹೈಟಿ ದೇಶದ ಅಧ್ಯಕ್ಷರ ಚುನಾವಣೆಯನ್ನು ನಡೆಸಲು ಅವರು ಸಿದ್ಧರಾಗಬೇಕಿದೆ.

30 ಮೇ 2024, 17:44