ಹುಡುಕಿ

+ Parolin: Ucraina? Prima condizione � mettere fine aggressione + + Parolin: Ucraina? Prima condizione � mettere fine aggressione +  (ANSA)

ಜುಲೈ ತಿಂಗಳಲ್ಲಿ ಉಕ್ರೇನ್ ದೇಶಕ್ಕೆ ಭೇಟಿ ನೀಡಲಿರುವ ಕಾರ್ಡಿನಲ್ ಪರೋಲಿನ್

ಉಕ್ರೇನ್ ದೇಶದಲ್ಲಿ ಲ್ಯಾಟಿನ್ ಧರ್ಮಸಭೆಯ ಕಥೋಲಿಕರು ಪುಣ್ಯಯಾತ್ರೆಯನ್ನು ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಜುಲೈ ತಿಂಗಳಲ್ಲಿ ಉಕ್ರೇನ್ ದೇಶಕ್ಕೆ ಭೇಟಿ ನೀಡಲಿದ್ದಾರೆ.

ವರದಿಳ ವ್ಯಾಟಿಕನ್ ನ್ಯೂಸ್

ಉಕ್ರೇನ್ ದೇಶದಲ್ಲಿ ಲ್ಯಾಟಿನ್ ಧರ್ಮಸಭೆಯ ಕಥೋಲಿಕರು ಪುಣ್ಯಯಾತ್ರೆಯನ್ನು ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಜುಲೈ ತಿಂಗಳಲ್ಲಿ ಉಕ್ರೇನ್ ದೇಶಕ್ಕೆ ಭೇಟಿ ನೀಡಲಿದ್ದಾರೆ. ಈ ಆಚರಣೆಗೆ ಪೋಪ್ ಫ್ರಾನ್ಸಿಸ್ ಅವರು ತಮ್ಮ ಪ್ರತಿನಿಧಿಯನ್ನಾಗಿ ಕಾರ್ಡಿನಲ್ ಪರೋಲಿನ್ ಅವರನ್ನು ನೇಮಿಸಿದ್ದಾರೆ.

ಉಕ್ರೇನ್ ದೇಶದ ಬೆರ್ಡಿಚೀವ್ ಎಂಬಲ್ಲಿನ ಕಾರ್ಮೆಲ್ ಮಾತೆಯ ರಾಷ್ಟ್ರೀಯ ಪುಣ್ಯಕ್ಷೇತ್ರಕ್ಕೆ ವಾರ್ಷಿಕ ಸುಮಾರು ೪೦೦೦ಕ್ಕೂ ಅಧಿಕ ಯಾತ್ರಿಕರು ಭೇಟಿ ನೀಡಲಿದ್ದು, ಇದನ್ನು ಕಾರ್ಮೆಲೈಟ್ ಸಭೆಯ ಧರ್ಮಗುರುಗಳು ಉಸ್ತುವಾರಿಗಳಾಗಿ ನಿರ್ವಹಿಸುತ್ತಾ ಬಂದಿದ್ದಾರೆ. 

ಈ ಚರ್ಚು ಸುರಂಗವನ್ನು ಹೊಂದಿದ್ದು, ಬಾಂಬ್ ದಾಳಿಯ ಸಂದರ್ಭದಲ್ಲಿ ಈ ಸುರಂಗದಲ್ಲಿ ಅವಿತು ರಕ್ಷಣೆ ಪಡೆಯಲು ಈ ಸುರಂಗವನ್ನು ಕಾರ್ಮೆಲೈಟ್ ಗುರುಗಳು ತೆರೆಯುತ್ತಾರೆ. 

18 May 2024, 17:17