ಹುಡುಕಿ

2023.02.18 Armi nucleari e missili

ಪವಿತ್ರ ಪೀಠ: ಪರಮಾಣು ನಿರೋಧ ಒಂದು ಭ್ರಮೆ

ನ್ಯೂಯಾರ್ಕ್ ನಗರದಲ್ಲಿ ವಿಶ್ವಸಂಸ್ಥೆಯ ನಿಶ್ಯಸ್ತ್ರ ಆಯೋಗವನ್ನು ಉದ್ದೇಶಿಸಿ ಮಾತನಾಡುತ್ತಾ ವಿಶ್ವಸಂಸ್ಥೆಗೆ ವ್ಯಾಟಿಕನ್ನಿನ ಶಾಶ್ವತ ವೀಕ್ಷಕರು, ಪರಮಾಣು ನಿಶ್ಯಸ್ತ್ರ ಎಂಬುದು ಒಂದು ಭ್ರಮೆ ಎಂದು ಪುನರುಚ್ಚರಿಸಿ, ಪರಮಾಣು ನಿಶಸ್ತ್ರಕ್ಕಾಗಿ ಎಲ್ಲರನ್ನೂ ಒಳಗೊಳ್ಳುವಂತಹ ಅಂತರಾಷ್ಟ್ರೀಯ ಒಪ್ಪಂದವನ್ನು ರೂಪಿಸಬೇಕೆಂದು ಹಾಗೂ ಆ ಮೂಲಕ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯನ್ನು ನಿಷೇಧಿಸಬೇಕೆಂದು ಕೋರುತ್ತಾರೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

"ಜಗತ್ತಿನಾದ್ಯಂತ ಹೆಚ್ಚುತ್ತಿರುವ ಸಂಘರ್ಷಗಳು, ಮಿಲಿಟರಿ ವೆಚ್ಚಗಳ ನಡುವೆ ಪವಿತ್ರ ಪೀಠವು ಮತ್ತೊಮ್ಮೆ ಶಾಂತಿಯ ಭ್ರಮೆಯನ್ನು ಸೂಚಿಸುವ ಪರಮಾಣು ನಿರೋಧ ಕ್ರಿಯೆಯ ನಿರಾಕರಣೆಯನ್ನು ಪುನರುಚ್ಚರಿಸಿದೆ. ಸಂಘರ್ಷವನ್ನು ತಡೆಗಟ್ಟುವುದರ ಬದಲು, ಶಸ್ತ್ರಾಸ್ತ್ರಗಳ ಬಳಕೆ ಹಾಗೂ ಅವುಗಳ ಲಭ್ಯತೆಯು, ಅದರ ಬಳಕೆಯನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ, ಅವುಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಇದು ಅಪನಂಬಿಕೆಯನ್ನು ಸೃಷ್ಟಿಸಿ, ಸಂಪನ್ಮೂಲಗಳನ್ನು ಬೇರೆಡೆಗೆ ವರ್ಗಾಯಿಸುತ್ತದೆ" ಎಂದು ವಿಶ್ವಸಂಸ್ಥೆಗೆ ವ್ಯಾಟಿಕನ್ನಿನ ಶಾಶ್ವತ ವೀಕ್ಷಕರಾಗಿರುವ ಮಹಾಧರ್ಮಾಧ್ಯಕ್ಷ ಗ್ಯಾಬ್ರಿಯೇಲ್ ಕಾಚಿಯ ಹೇಳಿದ್ದಾರೆ.

ವಿಶ್ವಸಂಸ್ಥೆಯ ನಿಶ್ಯಸ್ತ್ರ ಆಯೋಗಕ್ಕೆ ಸೋಮವಾರ ನೀಡಿದ ಹೇಳಿಕೆಯಲ್ಲಿ, ವ್ಯಾಟಿಕನ್ ರಾಯಭಾರಿಯು "ಶಸ್ತ್ರಾಸ್ತ್ರಗಳ ಪ್ರಸರಣ, ದಾಸ್ತಾನು ಮತ್ತು ಬಳಕೆ, ನಿಶ್ಯ ಸ್ತ್ರೀಕರಣವನ್ನು ನೈತಿಕ ಕರ್ತವ್ಯವನ್ನಾಗಿ ಮಾಡುತ್ತದೆ ಎಂದು ಪುನರುಚ್ಚರಿಸಿದರು. ವಿಶ್ವದ ರಾಷ್ಟ್ರಗಳು ಒಂದು ಕುಟುಂಬವಾಗಿವೆ. ಈ ಮಹಾನ್ ಕುಟುಂಬದ ಎಲ್ಲಾ ಸದಸ್ಯರು ಭಯದ ಕೇಂದ್ರ ಬಿಂದುವಿನಿಂದ ಭರವಸೆಯ ಕೇಂದ್ರ ಬಿಂದುವಿಗೆ ಚಲಿಸಬೇಕಿದೆ. ವಿಶ್ವದಲ್ಲಿ ನಿರಂತರ ಶಾಂತಿಯನ್ನು ರೂಪಿಸಲು ಇದೊಂದೇ ಆಧಾರವಾಗಿದೆ" ಎಂದು ಹೇಳುತ್ತಾರೆ.

"ನಿಶ್ಯಸ್ತ್ರ ನಿರೋಧ ಎಂಬ ಭ್ರಮಾಕಲ್ಪನೆಯನ್ನು, ಅಸಮರ್ಥನೀಯವಾದುದನ್ನು ಸಮರ್ಥಿಸಲು ಅಂದರೆ, ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವುದನ್ನು ಸಮರ್ಥಿಸಲು ಬಳಸಿಕೊಳ್ಳಲಾಗುತ್ತಿದೆ. ಪರಮಾಣು ಶಸ್ತ್ರಾಸ್ತ್ರಗಳು ಮಾನವೀಯ ಹಾಗೂ ಪಾರಿಸರಿಕ ದುಷ್ಪರಿಣಾಮಗಳನ್ನು ಉಂಟುಮಾಡುತ್ತವೆ. ಈ ಶಸ್ತ್ರಾಸ್ತ್ರಗಳಿಗೆ ಯುದ್ಧ ಮಾಡುತ್ತಿರುವವರು ಯಾರು ಹಾಗೂ ಯುದ್ಧ ಮಾಡದೆ ಇರುವವರು ಯಾರು ಎಂಬ ವ್ಯತ್ಯಾಸವು ತಿಳಿಯುವುದಿಲ್ಲ." ಎಂದು ಮಹಾಧರ್ಮಾಧ್ಯಕ್ಷ ಗ್ಯಾಬ್ರಿಯೇಲ್ ಕಾಚಿಯ ಹೇಳಿದರು.

ತಮ್ಮ ಭಾಷಣದ ಕೊನೆಯಲ್ಲಿ ಮಹಾಧರ್ಮಾಧ್ಯಕ್ಷ ಗ್ಯಾಬ್ರಿಯೇಲ್ ಕಾಚಿಯ ಅವರು ಪವಿತ್ರ ಪೀಠದ 'ಶಸ್ತ್ರಾಸ್ತ್ರಗಳನ್ನು ನಿಶಬ್ದಗೊಳಿಸಬೇಕು' ಎಂಬ ಕರೆಯನ್ನು ಪುನರುಚ್ಚರಿಸಿದರು. ಮುಂದುವರೆದು ಮಾತನಾಡಿದ ಅವರು, ಕ್ರಮೇಣ ಆದರೆ ಸಂಪೂರ್ಣ ನಿಶ್ಯಸ್ತ್ರೀಕರಣದ ಹಾದಿಯನ್ನು ಎಲ್ಲರೂ ದೃಢವಾಗಿ ಅನುಸರಿಸಬೇಕು ಎಂದು ಒತ್ತಾಯಿಸಿದರು. ಶಾಂತಿಯು ಶಸ್ತ್ರಾಸ್ತ್ರಗಳಿಂದ ದೊರಕುವುದಿಲ್ಲ, ಬದಲಿಗೆ, ತಾಳ್ಮೆಯಿಂದ ಆಲಿಸಿ, ಸಂಭಾಷಿಸಿ ಹಾಗೂ ಪರಸ್ಪರ ಸಹಕಾರದ ಮೂಲಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಂಡ ನಂತರ ಅದು ಎಲ್ಲರಿಗೂ ಸಿಗುವ ಸಾಧನವಾಗಿದೆ ಎಂದರು.

03 April 2024, 16:31