ಪೋಪ್ ಫ್ರಾನ್ಸಿಸ್: ಶಾಂತಿಗಾಗಿ ಪ್ರಾರ್ಥಿಸಿ, ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಹೊಸ ಬದ್ಧತೆಗಾಗಿ ಶ್ರಮಿಸಬೇಕು
ಟ್ರಿಯೆಸ್ತೆಯಲ್ಲಿ ಪೋಪ್ ಫ್ರಾನ್ಸಿಸ್ ಐವತ್ತನೇ ಕಥೋಲಿಕ ಸಾಮಾಜಿಕ ವಾರದ ಆಚರಣೆಯ ಕೊನೆಯ ದಿನ ತಮ್ಮ ಕೊನೆಯ ಪ್ರಭೋದನೆಯನ್ನು ನೀಡಿದ್ದಾರೆ. ಮತ್ತೊಮ್ಮೆ ಶಾಂತಿಗಾಗಿ ಪ್ರಾರ್ಥಿಸುವಂತೆ ಕರೆ ನೀಡಿದ್ದಾರೆ.
ವರದಿ: ತದ್ದೆಯೂಸ್ ಜೋನ್ಸ್, ಅಜಯ್ ಕುಮಾರ್
ಇಟಾಲಿಯನ್ ಕಥೋಲಿಕ ಸಾಮಾಜಿಕ ವಾರ ಆಚರಣೆಯ ಕೊನೆಯ ದಿನದಂದು ಪೋಪ್ ಫ್ರಾನ್ಸಿಸ್ ಅವರು ಭಾನುವಾರ ಇಟಲಿಯ ಟ್ರಿಯೆಸ್ತೆ ಎಂಬಲ್ಲಿಗೆ ಪಯಣಿಸಿದರು. ಟ್ರಿಯೆಸ್ತೆಯಲ್ಲಿ ಪೋಪ್ ಫ್ರಾನ್ಸಿಸ್ ಐವತ್ತನೇ ಕಥೋಲಿಕ ಸಾಮಾಜಿಕ ವಾರದ ಆಚರಣೆಯ ಕೊನೆಯ ದಿನ ತಮ್ಮ ಕೊನೆಯ ಪ್ರಭೋದನೆಯನ್ನು ನೀಡಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಟ್ರಿಯೆಸ್ತೆಯ ಜನತೆಗೆ ಅವರ ಸ್ವಾಗತಕ್ಕಾಗಿ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದೇ ವೇಳೆ ಅವರು ಮತ್ತೊಮ್ಮೆ ವಿಶ್ವ ಶಾಂತಿಗಾಗಿ ಮನವಿ ಮಾಡಿದ್ದು, ಎಲ್ಲರೂ ಸಹ ಶಾಂತಿಗಾಗಿ ಪ್ರಾರ್ಥಿಸಿ, ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಹೊಸ ಬದ್ಧತೆಗಾಗಿ ಶ್ರಮಿಸಬೇಕು ಎಂದು ಹೇಳಿದ್ದಾರೆ.
ಎಲ್ಲರೂ ಸಹ ಯಾವುದೇ ಸನ್ನಿವೇಷ ಹಾಗೂ ಸಂದರ್ಭದಲ್ಲಿ ಧೈರ್ಯದಿಂದ ಹಾಗೂ ವಿಶ್ವಾಸದಿಂದ ಇರಬೇಕು ಎಂದು ಪ್ರೋತ್ಸಾಹವನ್ನು ನೀಡಿದರು.
07 ಜುಲೈ 2024, 16:23