ಹುಡುಕಿ

ಕುಕಿ ಪಾಲಿಸಿ
ನ್ಯಾವಿಗೇಷನ್‌ ಅನ್ನು ಸುಲಭವಾಗಿಸಲು ವ್ಯಾಟಿಕನ್‌ ನ್ಯೂಸ್‌ ಸುದ್ದಿತಾಣವು ತಾಂತ್ರಿಕ ಹಾಗೂ ಅದೇ ರೀತಿಯ ಕುಕಿಗಳನ್ನು ಬಳಸುತ್ತದೆ ಹಾಗೂ ಸೇವೆಗಳನ್ನು ಖಾತರಿಪಡಿಸುತ್ತದೆ. ಮುಂದುವರೆದು, ಥರ್ಡ್‌ ಪಾರ್ಟಿಗಳ ತಾಂತ್ರಿಕ ಹಾಗೂ ವಿಶ್ಲೇಷಣಾತ್ಮಕ ಕುಕಿಗಳನ್ನು ಸಹ ಬಳಸಿಕೊಳ್ಳಬಹುದು. ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ. ಇದನ್ನು ಮುಚ್ಚುವ ಮೂಲಕ ನೀವು ಕುಕಿಗಳ ಬಳಕೆಗೆ ಒಪ್ಪುತ್ತೀರಿ.
ಒಪ್ಪಿಕೊಳ್ಳುತ್ತೇನೆ

ದೈವಕರಿಗಾಗಿ ಪ್ರಾರ್ಥಿಸುವಂತೆ ಧಾರ್ಮಿಕ ಗುರುಗಳು ಹಾಗೂ ಭಗಿನಿಯರಿಗೆ ವಿಶ್ವಗುರು ಫ್ರಾನ್ಸಿಸ್ ಕರೆ

ಜುಲೈ ತಿಂಗಳಲ್ಲಿ ವಿವಿಧ ಧಾರ್ಮಿಕ ಸಭೆಗಳ ಗುರುಗಳು ಹಾಗೂ ಭಗಿನಿಯರನ್ನು ಭೇಟಿ ಮಾಡಿದ ವಿಶ್ವಗುರು ಫ್ರಾನ್ಸಿಸ್ ಅವರು, ದೈವ ಕರೆಗಳಿಗಾಗಿ ಪ್ರಾರ್ಥಿಸುವಂತೆ ಕರೆ ನೀಡಿದ್ದಾರೆ.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

ಸಾಧಾರಣವಾಗಿ ಗುರು ಫ್ರಾನ್ಸಿಸ್ ಅವರು ಜುಲೈ ತಿಂಗಳಲ್ಲಿ ತಮ್ಮ ವಾರ್ಷಿಕ ವಿರಾಮವನ್ನು ಪಡೆದುಕೊಳ್ಳಲಿದ್ದು, ಯಾವುದೇ ಸಭೆಗಳನ್ನು ಅಥವಾ ಭೇಟಿಗಳನ್ನು ಹಮ್ಮಿಕೊಳ್ಳುವುದಿಲ್ಲ. ಆದರೆ ಇಂದು ಅವರು ವ್ಯಾಟಿಕನ್ ನಗರದಲ್ಲಿ ಹಲವು ಧಾರ್ಮಿಕ ಸಭೆಗಳ ಗುರುಗಳು ಹಾಗೂ ಭಗಿನಿಯರನ್ನು ಭೇಟಿ ಮಾಡಿ ಸಮಾಲೋಚನೆಯನ್ನು ನಡೆಸಿದರು.

ಕ್ರೈಸ್ತ ಕುಟುಂಬಗಳು ಹೆಚ್ಚಾಗಿ ಮಕ್ಕಳನ್ನು ಹೊಂದಬೇಕು ಏಕೆಂದರೆ ಆಗ ಮಾತ್ರ ಧಾರ್ಮಿಕ ಸಭೆಗಳಿಗೆ ದೈವ ಕರೆಗಳು ಸಿಗಲು ಸಾಧ್ಯವಾಗುತ್ತದೆ. ನಿಮ್ಮ ಸಭೆಗಳ ಭವಿಷ್ಯಕ್ಕಾಗಿ ಹೆಚ್ಚು ಮಕ್ಕಳ ಅಗತ್ಯವಿದೆ ಎಂದು ಅವರು ಧಾರ್ಮಿಕ ಸಹೋದರ ಸಹೋದರಿಯರಿಗೆ ಹೇಳಿದರು.

ಮುಂದುವರೆದು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ನಿಮ್ಮ ಸಭೆಗಳ ಸ್ಥಾಪಕರ ಕನಸುಗಳನ್ನು ಹಾಗೂ ಆದರ್ಶಗಳನ್ನು ನಿಮ್ಮ ಮೂಲ ಉದ್ದೇಶವನ್ನಾಗಿಸಿಕೊಂಡು ಮುಂದುವರಿಸಬೇಕೆಂದು ಕರೆ ನೀಡಿದರು. ದೈವ ಕರೆ ಎಂಬುದು ಬದುಕಿನಲ್ಲಿ ದೇವರು ನೀಡುವ ವಿಶಿಷ್ಟ ವರದಾನ ಎಂದು ಸಹ ಅವರು ಹೇಳಿದರು.

15 July 2024, 18:58
Prev
December 2024
SuMoTuWeThFrSa
1234567
891011121314
15161718192021
22232425262728
293031    
Next
January 2025
SuMoTuWeThFrSa
   1234
567891011
12131415161718
19202122232425
262728293031