ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪೋಪ್: ನಿಮ್ಮ ಬದ್ಧತೆ ಹಾಗೂ ವಿಶ್ವಾಸಕ್ಕೆ ನೈಜವಾಗಿರಿ
ಚಿಕಾಗೋದ ಲಯೋಲ ಯೂನಿವರ್ಸಿಟಿ ಆಯೋಜಿಸಿದ್ದ ನೇರಪ್ರಸಾರದಲ್ಲಿ ಪಾಲ್ಗೊಂಡು ಮಾತನಾಡಿದ ಪೋಪ್ ಫ್ರಾನ್ಸಿಸ್, ವಿದ್ಯಾರ್ಥಿಗಳಿಗೆ ತಮ್ಮ ವಿಶ್ವಾಸ ಹಾಗೂ ಬದ್ಧತೆಗೆ ನೈಜವಾಗಿರುವಂತೆ ಕರೆ ನೀಡಿದರು.
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್
"ಬಿಲ್ಡಿಂಗ್ ಬ್ರಿಜಸ್ ಅಕ್ರಾಸ್ ಏಷಿಯಾ ಪೆಸಿಫಿಕ್" ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿಕಾಗೋದ ಲಯೋಲ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೊಂದಿಗೆ ಪೋಪ್ ಫ್ರಾನ್ಸಿಸ್ ಅವರು ನೇರ ಪ್ರಸಾರದ ಮೂಲಕ ಸಂವಾದವನ್ನು ನಡೆಸಿದರು.
ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ತಮ್ಮ ವಿಶ್ವಾಸ ಹಾಗೂ ಬದ್ಧತೆಗೆ ನೈಜವಾಗಿರುವಂತೆ ಕರೆ ನೀಡಿದರು. ನಿಮ್ಮ ಬಲಹೀನತೆಯಲ್ಲಿ ನಿಮಗೆ ಸಹಾಯಕ್ಕಾಗಿ ಇತರರನ್ನು ಕೇಳಿ. ಹೀಗೆ ಇತರರ ಸಹಾಯವನ್ನು ಪಡೆಯವುದು ತಪ್ಪಲ್ಲ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಇದೇ ವೇಳೆ ಅವರು "ಹೆಣ್ಣು ಮಕ್ಕಳ ತ್ಯಾಗ ಹಾಗೂ ಶ್ರೇಷ್ಟತೆಯನ್ನು ಮರೆಯಬಾರದು" ಎಂದು ಹೇಳಿದರು.
20 ಜೂನ್ 2024, 18:36