ಐಕ್ಯತೆ ಕರ್ತವ್ಯವಾಗಿದೆ: ಸಿರೋಮಲಬಾರ್ ಭಕ್ತಾಧಿಗಳಿಗೆ ಕಿವಿಮಾತು ಹೇಳಿದ ಪೋಪ್ ಫ್ರಾನ್ಸಿಸ್
ವರದಿ: ಜೋಸೆಫ್ ಟಲ್ಲೋಚ್, ಅಜಯ್ ಕುಮಾರ್
ಸೋಮವಾರ ಬೆಳಿಗ್ಗೆ ಪೋಪ್ ಫ್ರಾನ್ಸಿಸ್ ಅವರು ಕೇರಳದ ಸಿರೋ-ಮಲಬಾರ್ ಧರ್ಮಸಭೆಯ ಮೇಜರ್ ಆರ್ಚ್'ಬಿಷಪ್ ಮಾರ್ ರಫಾಯಿಲ್ ಥಟ್ಟಿಲ್ ಅವರನ್ನು ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿದರು.
ಮೇಜರ್ ಆರ್ಚ್'ಬಿಷಪ್ ಥಟ್ಟಿಲ್ ಅವರೊಂದಿಗೆ ಮಾತನಾಡಿದ ಪೋಪ್ ಫ್ರಾನ್ಸಿಸ್, ಕೇರಳದ ಸಿರೋ-ಮಲಬಾರ್ ಧರ್ಮಸಭೆಯ ಆದಿ ಇತಿಹಾಸದಿಂದ ಈವರೆಗಿನ ದೈವರಾಧನಾವಿಧಿಯ ಸಂಘರ್ಷದ ಕುರಿತು ಮಾತುಕತೆಯನ್ನು ನಡೆಸಿದರು.
"ಕೇರಳದ ಧರ್ಮಸಭೆ ಅಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಹೆಸರು ಮಾಡಿದೆ. ಕೇರಳದ ಕಥೋಲಿಕರನ್ನು ಯೂರೋಪಿಯನ್ ಮಿಷನರಿಗಳು ಯುರೋಪಿಯನ್ ಸಂಪ್ರದಾಯದಂತೆ ಬದಲಾಯಿಸಲು ಪ್ರಯತ್ನಪಟ್ಟರೂ ಸಹ ಅವರು ತಮ್ಮ ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದರು ಮಾತ್ರವಲ್ಲದೆ, ಅದೇ ರೀತಿಯಲ್ಲಿ ವಿಶ್ವಾಸದಲ್ಲಿ ಬೆಳವಣಿಗೆಯನ್ನು ಹೊಂದಿದರು. ಅಲ್ಲಿನ ಸಂಸ್ಕೃತಿ ಹಾಗೂ ಸಂಪ್ರದಾಯದ ಇತಿಹಾಸವನ್ನು ತಿಳಿಯದ ಹಲವರು ಈ ಜನತೆಯ ಮೇಲೆ ಹೇಳಲಾಗದ ಕೃತ್ಯಗಳನ್ನು ಮಾಡಿದರು. ಇತಿಹಾಸಕ್ಕೆ ಸಂಪರ್ಕವನ್ನು ಬೆಸೆಯುವ ನಿಟ್ಟಿನಲ್ಲಿ ಹಾಗೂ ಸಮಯದಲ್ಲಿ ಸಿರೋಮಲಬಾರ್ ಧರ್ಮಸಭೆಯು ಅತ್ಯಂತ ಪ್ರಮುಖವಾಗಿದೆ" ಎಂದು ಪೋಪ್ ನುಡಿದರು.
ಪ್ರಸ್ತುತ ನಡೆಯುತ್ತಿರುವ ಧೈವಾರಾಧನಾ ವಿಧಿಯ ಕುರಿತ ಕಲಹ ಹಾಗೂ ಸಂಘರ್ಷದ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್, ಈ ವಿಷಮ ಕಾಲಘಟ್ಟದಲ್ಲಿ ಐಕ್ಯತೆಯಿಂದ ಇರುವುದು ಅತ್ಯಂತ ಜರೂರಾಗಿದೆ ಎಂದು ಹೇಳಿದ್ದಾರೆ. "ನಮ್ಮ ವಿಭಜನೆಯ ಸಮಯದಲ್ಲಿ ನಮ್ಮೊಳಗೆ ಬರಲು ಪ್ರಯತ್ನಿಸುವ ಸೈತಾನನು, ಕ್ರಿಸ್ತರ ಐಕ್ಯತೆಯಿಂದ ನಮ್ಮನ್ನು ಬೇರ್ಪಡಿಸಲು ಪ್ರಯತ್ನಸುತ್ತಾನೆ" ಎಂದು ನುಡಿದಿದ್ದಾರೆ.
ಯೇಸುವಿನ ಪುನರುತ್ಥಾನವನ್ನು ಸಂಶಯಿಸಿದ ಸಂತ ತೋಮಾಸರ ಕುರಿತು ಚಿಂತನೆಯನ್ನು ನಡೆಸುವ ಮೂಲಕ ಪೋಪ್ ಫ್ರಾನ್ಸಿಸ್ ತಮ್ಮ ಮಾತುಕತೆಯನ್ನು ಮುಕ್ತಾಯಗೊಳಿಸಿದರು.