ಪೋಪ್: ಧರ್ಮಕೇಂದ್ರದ ಗುರುಗಳು ಸಿನೊಡಾಲಿಟಿಯ ಮಿಶನರಿಗಳಾಗಬೇಕು
ವರದಿ: ಸಿಸ್ಟರ್ ಫ‌್ರಾನ್ಸೀನ್-ಮರೀ ಕೂಪರ್, ಐಎಸ್ಎಸ್ಎಂ
ಕಳೆದ ವಾರ ರೋಮ್ ನಗರದಲ್ಲಿ ನಡೆದ ಧರ್ಮಕೇಂದ್ರದ ಗುರಗಳ ಸಿನೋಡ್ ಸಭೆಯ ನಂತರ ವ್ಯಾಟಿಕನ್ನಿನ ಮಾಧ್ಯಮ ಕಚೇರಿಯು ಪೋಪ್ ಫ್ರಾನ್ಸಿಸರು ಸಹಿ ಹಾಕಿರುವ ಮ್ಯಾಂಡೇಟ್ ಅನ್ನು ಬಿಡುಗಡೆಗೊಳಿಸಿದೆ.
ಬಿಷಪ್ಪರುಗಳ ಎರಡನೇ ಸುತ್ತಿನ ಸಿನೋಡ್ ಆರಂಭವಾಗುವ ಹೊತ್ತಿನಲ್ಲಿ ಆ ಕುರಿತು ಸಹಾಯ ಮಾಡಬೇಕೆಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗುರುಗಳಿಗೆ ಪೋಪ್ ಫ್ರಾನ್ಸಿಸ್ ತಮ್ಮ ಆದೇಶದಲ್ಲಿ ಹೇಳಿದ್ದಾರೆ. ಕಳೆದ ವಾರ ರೋಮ್ ನಗರದಲ್ಲಿ ನಡೆದ ಸಭೆಯ ಪ್ರಾಮುಖ್ಯತೆಯನ್ನು ತಿಳಿಸಿದ ಪೋಪ್, ಇದಷ್ಟೇ ಸಾಕಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
"ಸಿನೋಡ್ ಪ್ರಕ್ರಿಯೆಯಲ್ಲಿ ಹೆಚ್ಚು ಗುರುಗಳು ಭಾಗವಹಿಸಬೇಕು ಎಂದು ನಾವಂದುಕೊಂಡರೆ, ನಾವು ಇನ್ನೂ ಹೆಚ್ಚಿನ ಕೆಲಸವನ್ನು ಮಾಡಬೇಕು" ಎಂದು ಪೋಪ್ ಹೇಳಿದ್ದಾರೆ. "ಹಾಗಾಗಿ ನೀವು ನಿಮ್ಮ ತಾಯ್ನಾಡಿಗೆ ಹೋದ ನಂತರ ನಿಮ್ಮ ಸಹವರ್ತಿ ಗುರುಗಳಿಗೆ ಸಿನೊಡಾಲಿಟಿಯ ಸೇವಾಕರ್ತರಾಗಬೇಕೆಂದು" ಕರೆ ನೀಡಿದರು.
"ಧರ್ಮಕೇಂದ್ರ ಪಾಲನಾ ಸೇವೆಯನ್ನು ಮತ್ತಷ್ಟು ಸಿನೋಡಲ್ ಕ್ರಿಯೆ ಅಂದರೆ ಆಲಿಸುವ ಧರ್ಮಸಭೆಯ ಕ್ರಿಯೆಯನ್ನಾಗಿಸಲು ಧರ್ಮಕೇಂದ್ರದ ಗುರುಗಳು ಚಿಂತನೆಯನ್ನು ನಡೆಸಬೇಕು ಹಾಗೂ ತಮ್ಮ ಸಹವರ್ತಿ ಗುರುಗಳೊಂದಿಗೆ ಈ ಕುರಿತು ಮಾತನಾಡಬೇಕು" ಎಂದು ಹೇಳಿದ್ದಾರೆ.
"ನಿಮ್ಮ ಧರ್ಮಕ್ಷೇತ್ರಗಳಲ್ಲಿ ಇದನ್ನು ನೀವು ಮಾಡಬೇಕು. ನಿಮ್ಮ ಧರ್ಮಾಧ್ಯಕ್ಷರಿಗೆ ಹೇಳಿ ಇದು ಪೋಪ್ ನೀಡಿರುವ ಕೆಲಸ ಎಂಬುದಾಗಿ" ಎಂದು ಧರ್ಮಕೇಂದ್ರದ ಗುರುಗಳ ಸಭೆಯಲ್ಲಿ ಭಾಗವಹಿಸಿದ ಗುರುಗಳಿಗೆ ಹೇಳಿದ್ದಾರೆ.
"ನಾನು ವಿಶ್ವದ ಎಲ್ಲಾ ಧರ್ಮಕೇಂದ್ರದ ಗುರುಗಳಿಗೆ ಪತ್ರವನ್ನು ಬರೆದಿದ್ದೇನೆ. ಅವರಿಗೆ ನಿಮ್ಮನ್ನು ಸಿನೋಡಲ್ ಪ್ರಕ್ರಿಯೆಯ ಸೇವಾಕಾರ್ಯಕರ್ತರಾಗಿ ಪರಿಚಯಿಸುತ್ತಿದ್ದೇನೆ" ಎಂದು ಹೇಳಿ, ತಮ್ಮ ಮಾತನ್ನು ಕೊನೆಗೊಳಿಸಿದರು.