ಡೊಮಿನಿಕನ್ ರಿಪಬ್ಲಿಕ್ ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್
ಡೊಮಿನಿಕನ್ ರಿಪಬ್ಲಿಕ್ ಪ್ರಧಾನ ಮಂತ್ರಿ ಶ್ರೀ ಲೂಯಿಸ್ ರುಡಾಲ್ಫ್ ಅಭಿನಾಡರ್ ಕೊರೋನ ಅವರನ್ನು ವಿಶ್ವಗುರು ಫ್ರಾನ್ಸಿಸ್ ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿದ್ದಾರೆ.
ವರದಿ: ವ್ಯಾಟಿಕನ್ ನ್ಯೂಸ್
ಸೋಮವಾರ ಡೊಮಿನಿಕನ್ ರಿಪಬ್ಲಿಕ್ ಪ್ರಧಾನ ಮಂತ್ರಿ ಶ್ರೀ ಲೂಯಿಸ್ ರುಡಾಲ್ಫ್ ಅಭಿನಾಡರ್ ಕೊರೋನ ಅವರನ್ನು ವಿಶ್ವಗುರು ಫ್ರಾನ್ಸಿಸ್ ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿದ್ದಾರೆ.
ವಿಶ್ವಗುರು ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ ನಂತರ ಲೂಯಿಸ್ ರುಡಾಲ್ಫ್ ಅಭಿನಾಡರ್ ಕೊರೋನ ಅವರು ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪೆರೋಲಿನ್ ಅವರನ್ನು ಹಾಗೂ ವ್ಯಾಟಿಕನ್ನಿನ ವಿದೇಶಾಂಗ ಸಂಪರ್ಕಗಳ ಕಾರ್ಯದರ್ಶಿ ಅರ್ಚ್ ಬಿಷಪ್ ಪೌಲ್ ರಿಚರ್ಡ್ ಗ್ಯಾಲಗರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಡೊಮಿನಿಕಲ್ ರಿಪಬ್ಲಿಕ್ ಪ್ರಧಾನ ಮಂತ್ರಿಗಳ ಭೇಟಿಯ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ವ್ಯಾಟಿಕನ್ ಮಾಧ್ಯಮ ಕಚೇರಿಯು ಉಭಯ ನಾಯಕರು ಮಾತುಕತೆ ಸೌಹಾರ್ದಯುತವಾಗಿತ್ತು. ಎರಡೂ ದೇಶಗಳ ನಡುವೆ ಇರುವ ಶಾಂತಿಯುತ ಸಂಬಂಧವು ಇನ್ನಷ್ಟು ವೃದ್ಧಿಯಾಯಿತು ಎಂದು ಹೇಳಿದೆ.
27 ಮೇ 2024, 18:09