ಪೋಪ್ ಫ್ರಾನ್ಸಿಸ್: ದಾನ ಎಂಬುದು ನಮ್ಮೊಳಗೆ ಪವಿತ್ರಾತ್ಮರ ಕಾರ್ಯವಾಗಿದೆ
ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್
ಈ ವಾರವೂ ಸಹ ತಮ್ಮ ಧರ್ಮೋಪದೇಶ ಸರಣಿಯನ್ನು ಮುಂದುವರೆಸಿರುವ ಪೋಪ್ ಫ್ರಾನ್ಸಿಸ್ ಅವರು, ತಮ್ಮ ಸಾರ್ವಜನಿಕ ದರ್ಶನದಲ್ಲಿ ದೈವಶಾಸ್ತ್ರೀಯ ಸದ್ಗುಣವಾದ "ದಾನ" ದ ಕುರಿತು ಮಾತನಾಡಿದ್ದಾರೆ. ಸಂತ ಪೌಲರ ಪತ್ರದ ವಾಕ್ಯಗಳ ಮೂಲಕ ತಮ್ಮ ಚಿಂತನೆಯನ್ನು ಆರಂಭಿಸಿದ ಪೋಪ್ ಫ‌್ರಾನ್ಸಿಸ್, ಕೊರಿಂಥದವರು ತಮ್ಮ ಕ್ರಿಸ್ತೀಯ ಆಚರಣೆಗಳು ವಿಶೇಷವಾಗಿ ಬಲಿಪೂಜೆ ಆಚರಣೆಯ ಕುರಿತೂ ಸಹ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ಇದನ್ನು ಉದ್ದೇಶಿಸಿ ಸಂತ ಪೌಲರು ಪತ್ರವನ್ನು ಬರೆದಿದ್ದಾರೆ ಎಂದು ಹೇಳಿದ್ದಾರೆ.
ದಾನ ಎಂಬುದು ದೇವರಿಂದ ಬರುವಂತದ್ದು ಎಂದು ಹೇಳಿರುವ ಪೋಪ್ ಫ್ರಾನ್ಸಿಸ್ ಅವರು, "ತಮ್ಮ ಕಾಲದಲ್ಲಿ ಕೊರಿಂಥದ ಕ್ರೈಸ್ತ ವಿಶ್ವಾಸಿಗಳು ತಾವು ಪಾಪ ಮಾಡುತ್ತಿಲ್ಲವೆಂದು ಭಾವಿಸಿದ್ದರು ಎನಿಸುತ್ತದೆ." ಏಕೆಂದರೆ ಅವರು ಒಳ್ಳೆಯ ಜನರಾಗಿದ್ದರೂ ಸಹ ಸಂತ ಪೌಲರು ದಾನದ ಕುರಿತು ಅವರಿಗೆ ಸವಾಲನ್ನು ಹಾಕಿದರು. ಇದೇ ರೀತಿ, ನಾವೂ ಸಹ ನಾವು ಒಳ್ಳೆಯವರು ಎಂದು ಭಾವಿಸಿರುವ ಹೊತ್ತಿನಲ್ಲೇ ಪಾಪಗಳನ್ನು ಮಾಡುತ್ತಿರಬಹುದು. ಆದುದರಿಂದ, ಸಂತ ಪೌಲರ ವಾಕ್ಯಗಳೂ ನಮಗೂ ಸಹ ಅನ್ವಯಿಸುತ್ತವೆ." ಎಂದು ಪೋಪ್ ಫ್ರಾನ್ಸಿಸ್ ನುಡಿದರು.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಜಗತ್ತಿನಲ್ಲಿ ಕ್ರೈಸ್ತರು ಎಲ್ಲಾ ವಿಧದ ಪ್ರೀತಿಯನ್ನು ಮಾಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ಉದಾಹರಣೆಗೆ ಪ್ರೀತಿ-ಪ್ರೇಮ, ಗೆಳೆತನದ ಪ್ರೇಮ, ದೇಶಪ್ರೇಮ, ಇತ್ಯಾದಿ. ಆದರೆ ಇದೆಲ್ಲಕ್ಕಿಂತ ಮಹತ್ವದ ಪ್ರೀತಿಯೊಂದಿದೆ: ಅದು ದೇವರ ಪ್ರೀತಿ. ದೇವರಿಂದ ಬಂದು ದೇವರೆಡೆಗೆ ಹೋಗುವ ಹಾಗೂ ನಮ್ಮನ್ನು ದೇವರೆಡೆಗೆ ಕರೆದೊಯ್ಯುವ ಪ್ರೀತಿಯಾಗಿದೆ" ಎಂದು ಹೇಳಿದರು.
ಯೇಸುಕ್ರಿಸ್ತರು ಬೆಟ್ಟದ ಮೇಲಿನ ನೀಡಿದ ಪ್ರಭೋದನೆಯನ್ನು ಉದಾಹರಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್, ದಾನ ಎಂಬುವ ಸದ್ಗುಣವು ಮಹಾನ್ ಸದ್ಗುಣವಾಗಿದ್ದು, ಆಚರಿಸಲು ಸಹ ಇದು ಅತ್ಯಂತ ಕಷ್ಟಕರ ಸದ್ಗುಣವಾಗಿದೆ ಎಂದು ಹೇಳಿದ್ದಾರೆ.