ಹುಡುಕಿ

ಅಫ್ಘಾನಿಸ್ಥಾನದ ಪ್ರವಾಹ ಸಂತ್ರಸ್ಥರಿಗೆ ನೆರವಾಗುವಂತೆ ಅಂತರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ ಪೋಪ್

ಬುಧವಾರ ತಮ್ಮ ಸಾರ್ವಜನಿಕ ದರ್ಶನದಲ್ಲಿ ಪೋಪ್ ಫ್ರಾನ್ಸಿಸ್ ಅವರು ದೊಡ್ಡ ಪ್ರಮಾಣದ ಪ್ರವಾಹದಿಂದ ಪೀಡಿತವಾಗಿರುವ ಅಫ್ಘಾನಿಸ್ಥಾನ ದೇಶದ ಜನರಿಗೆ ನೆರವು ನೀಡುವಂತೆ ಅಂತರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ. ಇದೇ ವೇಳೆ ಶಾಂತಿಗಾಗಿ ಪ್ರಾರ್ಥಿಸುವಂತೆ ಸಹ ಮನವಿ ಮಾಡಿದ್ದಾರೆ.

ವರದಿ: ಲಿಂಡಾ ಬೊರ್ಡೋನಿ, ಅಜಯ್ ಕುಮಾರ್

ಅಫ್ಘಾನಿಸ್ಥಾನದಲ್ಲಿ ಅನೇಕ ದಿನಗಳಿಂದ ಉಂಟಾಗಿರುವ ದೊಡ್ಡ ಮಟ್ಟದ ಪ್ರವಾಹವು ಈಗಾಗಲೇ ಮಕ್ಕಳು ಸೇರಿದಂತೆ ಅನೇಕ ಜನರನ್ನು ಬಲಿ ಪಡೆದಿದೆ. ಇದರಿಂದ ಸಾವಿರಾರು ಜನರು ನಿರಾಶ್ರಿತರಾಗಿದ್ದು, ತಮ್ಮಮಮನೆ ಮಠಗಳನ್ನು ಕಳೆದುಕೊಂಡಿದ್ದಾರೆ. ಅಪಾರ ಪ್ರಮಾಣದ ಆಸ್ತಿಪಾಸ್ತಿಯೂ ಸಹ ನಷ್ಟವಾಗಿದೆ. ಪೋಪ್ ಫ್ರಾನ್ಸಿಸ್ ಅವರು ಪ್ರವಾಹ ಸಂತ್ರಸ್ಥ ಅಫ್ಘಾನಿಸ್ತಾನದ ಜನರಿಗೆ ನೆರವಾಗುವಂತೆ ಅಂತರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

ಬುಧವಾರ ತಮ್ಮ ಸಾರ್ವಜನಿಕ ದರ್ಶನದಲ್ಲಿ ಮಾತನಾಡಿದ ಅವರು ಪ್ರವಾಹದಿಂದ ನೊಂದಿರುವವರಿಗಾಗಿ ವಿಶೇಷವಾಗಿ ಮಕ್ಕಳಿಗಾಗಿ ತಮ್ಮ ಐಕ್ಯತೆಯನ್ನು ವ್ಯಕ್ತಪಡಿಸಿ, ಅವರಿಗಾಗಿ ಪ್ರಾರ್ಥಿಸಿದರು.

ಕಳೆದ ಹಲವು ದಿನಗಳಿಂದ ಉಂಟಾಗಿರುವ ಈ ಪ್ರವಾಹಕ್ಕೆ ಸುಮಾರು ಮುನ್ನೂರು ಜನರು ಸಾವನ್ನಪ್ಪಿದ್ದಾರೆ.

ಈ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ತಮ್ಮ ಸಾರ್ವಜನಿಕ ಸಂದರ್ಶನದ ವೇಳೆ ಅಫ್ಘಾನಿಸ್ಥಾನದ ಪ್ರವಾಹ ಸಂತ್ರಸ್ಥ ಜನರಿಗೆ ನೆರವಾಗುವಂತೆ ಪೋಪ್ ಫ್ರಾನ್ಸಿಸ್ ಅವರು ಅಂತರಾಷ್ಟ್ರೀಯ ಸಮುದಾಯಕ್ಕೆ ಮನವಿಯನ್ನು ಮಾಡಿದ್ದಾರೆ.

ಇದೇ ವೇಳೆ ಯುದ್ಧಗ್ರಸ್ಥ ದೇಶಗಳ ಜನರನ್ನು ನೆನಪಿಸಿಕೊಂಡಿರುವ ಪೋಪ್ ಫ್ರಾನ್ಸಿಸ್ ಅವರು ಯುದ್ಧದಿಂದ ನೊಂದಿರುವವರಿಗಾಗಿ ವಿಶೇಷವಾಗಿ ಮಕ್ಕಳಿಗಾಗಿ ಮನ ಮಿಡಿದು ಅವರಿಗಾಗಿ ಪ್ರಾರ್ಥಿಸುವಂತೆ ಕರೆ ಮಾಡಿದ್ದಾರೆ.   

15 May 2024, 17:33