ಹುಡುಕಿ

ಕೆನ್ಯಾದ ಪ್ರವಾಹ ಸಂತ್ರಸ್ತರಿಗಾಗಿ ಪೋಪ್ ಪ್ರಾರ್ಥನೆ

ಪೂರ್ವ ಆಫ್ರಿಕಾದ ಕೆನ್ಯಾ ದೇಶದಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದ ತತ್ತರಿಸಿರುವ ಅಲ್ಲಿನ ಜನತೆಗೆ ಪೋಪ್ ಫ್ರಾನ್ಸಿಸ್ ಆಧ್ಯಾತ್ಮಿಕ ಸನಿಹವನ್ನು ವ್ಯಕ್ತಪಡಿಸಿ, ಅವರಿಗಾಗಿ ಪ್ರಾರ್ಥಿಸಿದ್ದಾರೆ.

ವರದಿ: ಲಿಂಡಾ ಬೋರ್ಡೋನಿ, ಅಜಯ್ ಕುಮಾರ್

ಬುಧವಾರ ಪ್ರೂಫ್ ಫ್ರಾನ್ಸಿಸ್ ಪೂರ್ವ ಆಫ್ರಿಕಾ ಖಂಡದಲ್ಲಿನ ಕೆನ್ಯಾ ದೇಶದಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದ ತತ್ತರಿಸಿರುವ ಸಂತ್ರಸ್ತರಿಗಾಗಿ ಪ್ರಾರ್ಥಿಸುವಂತೆ ಕರೆ ನೀಡಿದ್ದಾರೆ.

"ಭೀಕರ ಪ್ರವಾಹದಿಂದ ಬಂಧು ಬಾಂಧವರನ್ನು ಕಳೆದುಕೊಂಡಿರುವ ಹಾಗೂ ಅಪಾರ ಆಸ್ತಿಪಾಸ್ತಿಯ ನಷ್ಟವನ್ನು ಅನುಭವಿಸಿರುವ ಎಲ್ಲಾ ಸಂತ್ರಸ್ತ ನನ್ನ ಸಹೋದರ ಸಹೋದರಿಯರಿಗಾಗಿ ಇಂದು ನಾನು ಆಧ್ಯಾತ್ಮಿಕ ಸಾಮೀಪ್ಯ ವ್ಯಕ್ತಪಡಿಸುತ್ತಿದ್ದೇನೆ. ಜನರ ಬದುಕಿನಲ್ಲಿ ವಿನಾಶವನ್ನು ಸೃಷ್ಟಿಸಿರುವ ಈ ಪ್ರವಾಹದಿಂದ ಹಾನಿಗೊಳಗಾಗಿರುವ ಕೆನ್ಯಾ ದೇಶದ ಎಲ್ಲಾ ಸಹೋದರ ಸಹೋದರಿಯರಿಗಾಗಿ ನಾನು ಪ್ರಾರ್ಥಿಸುತ್ತೇನೆ." ಎಂದು ಪೋಪ್ ಫ್ರಾನ್ಸಿಸ್ ತಮ್ಮ ಸಾರ್ವಜನಿಕ ಭೇಟಿಯಲ್ಲಿ ಹೇಳಿದ್ದಾರೆ.

ಈ ನೋವಿನ ಸಂದರ್ಭದಲ್ಲಿ ನರಳುತ್ತಿರುವ ಸಹೋದರ ಸಹೋದರಿಯರೆಗಾಗಿ ಪ್ರಾರ್ಥಿಸುವಂತೆ ಎಲ್ಲಾ ಕ್ರೈಸ್ತರಿಗೆ ಅವರು ಕರೆ ನೀಡಿದರು.

ಮಾರ್ಚ್ ತಿಂಗಳಿಂದ ಈವರೆಗೂ ಉಂಟಾಗಿರುವ ಈ ಪ್ರಭಾಸದಲ್ಲಿ ಸುಮಾರು 150ಕ್ಕೂ ಹೆಚ್ಚು ಜನರು ಮರಣ ಹೊಂದಿದ್ದು, ಸುಮಾರು ರೂ.1,85,000 ಜನರು ನಿರಾಶ್ರಿತರಾಗಿದ್ದಾರೆ. ಈ ಪ್ರವಾಹ ಕೆನ್ಯಾ ದೇಶದಲ್ಲಿ ಮಾತ್ರವಲ್ಲದೆ ಪಕ್ಕದ ತಂಜಾನೀಯ ದೇಶಕ್ಕೂ ವ್ಯಾಪಿಸಿದೆ.

01 ಮೇ 2024, 16:47