ಹುಡುಕಿ

ಪೋಪ್: ಬರಿದಾದ ನಿಮ್ಮ ಭೂಮಿಯನ್ನು ದೇವರಿಂದ ತುಂಬಿರಿ

ಸ್ಪೇನ್ ದೇಶದ ಬರ್ಗೋಸ್ ಸೆಮಿನರಿಯ ಗುರು ಅಭ್ಯರ್ಥಿಗಳೊಂದಿಗೆ ಮಾತನಾಡುತ್ತಾ ಪೋಪ್ ಫ್ರಾನ್ಸಿಸ್, ನಕಲಿ ಮಾನವ ಸುರಕ್ಷತೆಗಳಿಂದ ಬಿಡಿಸಿಕೊಂಡು ಬರಿದಾಗಿರುವ ಗ್ರಾಮಾಂತರ ಪ್ರದೇಶಗಳನ್ನು ದೇವರಿಂದ ತುಂಬಬೇಕೆಂದು ಅವರಿಗೆ ಕರೆ ನೀಡಿದ್ದಾರೆ.

ವರದಿ: ಲೀಸಾ ಝೇಂಗಾರಿನಿ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಸ್ಪೇನ್ ದೇಶದ ಧರ್ಮಧ್ಯಕ್ಷರು ಗುರುಗಳು ಹಾಗೂ ಗುರು ಅಭ್ಯರ್ಥಿಗಳೊಂದಿಗೆ ಮಾತನಾಡುತ್ತಾ ಬರಿದಾಗಿರುವ ದೇಶದ ಗ್ರಾಮಾಂತರ ಪ್ರದೇಶಗಳಲ್ಲಿ ಸಮುದಾಯ ಕೇಂದ್ರಿತ ದೇವಾಲಯಗಳನ್ನು ಸ್ಥಾಪಿಸುವ ಮೂಲಕ, ಈ ಪ್ರದೇಶಗಳಿಗೆ ದೇವರ ಸಾನಿಧ್ಯವನ್ನು ತರಬೇಕೆಂದು ಅವರಿಗೆ ಕರೆ ನೀಡಿದ್ದಾರೆ.

ಶನಿವಾರ ಅವರು ಇವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಪ್ರೋತ್ಸಾಹವನ್ನು ನೀಡಿದರು.

ಬರಿದಾಗಿರುವ ಸ್ಟೇನ್ ದೇಶಕ್ಕೆ ಶುಭ ಸಂದೇಶವನ್ನು ತರುವುದು

ತಾವು ಮಾತನಾಡುತ್ತಿರುವವರ ಹಿನ್ನೆಲೆ ಹಾಗೂ ಇತಿಹಾಸವನ್ನು ಗಮನದಲ್ಲಿರಿಸಿಕೊಂಡು ಮಾತನಾಡಿದ ಪೋಪ್ ಫ್ರಾನ್ಸಿಸ್, ಐತಿಹಾಸಿಕವಾಗಿ ಹಾಗೂ ಪಾರಂಪರಿಕವಾಗಿ ಶ್ರೀಮಂತವಾಗಿರುವ ದೇಶದಲ್ಲಿ ಗುರುಗಳಾಗಲು ಅವರು ತರಬೇತಿಯನ್ನು ಪಡೆಯುತ್ತಿದ್ದಾರೆ ಎಂಬುದನ್ನು ನೆನಪಿಸಿದರು. ಹಾಗೆಯೇ, ಈ ದೇಶವು ಈಗ ಬರಿದಾಗಿದೆ ಎಂದು ಹೇಳಿದರು.

ಯುರೋಪಿನಾದ್ಯಂತ ಆಗುತ್ತಿರುವ ಗ್ರಾಮಾಂತರ ಪ್ರದೇಶಗಳಲ್ಲಿನ ಜನರು ಕಡಿಮೆಯಾಗುತ್ತಿದ್ದು, ನಗರೀಕರಣದ ಕಡೆಗೆ ತಿರುಗುತ್ತಿದ್ದಾರೆ. ಜಾತ್ಯತೀತತೆ ಎಂಬುದು ತೀವ್ರ ಮಟ್ಟದಲ್ಲಿ ಏರುತ್ತಿದ್ದು, ಕ್ರೈಸ್ತ ವಿಶ್ವಾಸವನ್ನು ಪಾಲಿಸುತ್ತಿರುವ ಕಥೋಲಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ನಾವು ಎಂದಿಗೂ ದೇವರ ಕರೆಯನ್ನು ಹಾಗೂ ನಮ್ಮ ಬದುಕಿನಲ್ಲಿ ಅವರ ಚಿತ್ತವೇನಿದೆ ಎಂಬುದನ್ನು ಧ್ಯಾನಿಸಬೇಕಾಗಿದೆ. ಅವರು ನಮ್ಮನ್ನು ಆರಿಸಿಕೊಂಡಿರುವ ಉದ್ದೇಶವನ್ನು ಪ್ರತಿದಿನ ಅವಲೋಕಿಸಬೇಕಿದೆ. ಪ್ರಾಪಂಚಿಕವಾದ ಎಲ್ಲವನ್ನು ತೊರೆದು, ನಮ್ಮ ಎಲ್ಲವನ್ನು ದೇವರ ಚಿತ್ತಕ್ಕೆ ಅರ್ಪಿಸಬೇಕಿದೆ. ದೇವರು ನಮ್ಮೊಡನೆ, ನಮ್ಮೊಳಗೆ ಇದ್ದಾಗ ಮಾತ್ರ ಅವರ ದೈವಿಕ ಶಾಂತಿಯನ್ನು ನಾವು ಪ್ರಪಂಚಕ್ಕೆ ಸಾರಬಹುದಾಗಿದೆ ಎಂದು ಹೇಳಿದರು.

ಬರಿದಾಗಿರುವ ಪ್ರದೇಶಗಳನ್ನು ದೇವರ ಅನುಗ್ರಹದಿಂದ ನಾವು ತುಂಬಿಸಬೇಕಿದೆ ಎಂದು ಹೇಳುತ್ತಾ ಪೋಪ್ ಫ್ರಾನ್ಸಿಸ್ ತಮ್ಮ ಮಾತುಗಳನ್ನು ಮುಗಿಸಿದರು.

27 April 2024, 16:39