ಲೆಬಾನನ್'ನಲ್ಲಿ ಮಾಲ್ಟಾ ಸಭೆಯ ಮಾನವೀಯ ಕಾರ್ಯ ಯೋಜನೆಗಳಿಗೆ ಭೇಟಿ ನೀಡಿದ ಕಾರ್ಡಿನಲ್ ಪರೋಲಿನ್
ಲೆಬಾನನ್ ದೇಶದಲ್ಲಿ ಮಾನವೀಯ ಕಾರ್ಯ ಯೋಜನೆಗಳನ್ನು ಮುನ್ನಡೆಸುತ್ತಿರುವ ಆರ್ಡರ್ ಆಫ್ ಮಾಲ್ಟಾ ಸಭೆಗೆ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಭೇಟಿ ನೀಡಿದ್ದಾರೆ.
ವರದಿ: ಡೆಲ್ಫೀನ್ ಅಲ್ಲೈರ್, ಲಿಂಡಾ ಬೊರ್ಡೋನಿ & ಅಜಯ್ ಕುಮಾರ್
ಲೆಬಾನನ್ ದೇಶದಲ್ಲಿ ಮಾನವೀಯ ಕಾರ್ಯ ಯೋಜನೆಗಳನ್ನು ಮುನ್ನಡೆಸುತ್ತಿರುವ ಆರ್ಡರ್ ಆಫ್ ಮಾಲ್ಟಾ ಸಭೆಗೆ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಭೇಟಿ ನೀಡಿದ್ದಾರೆ.
ಲೆಬಾನನ್ ದೇಶಕ್ಕೆ ತಮ್ಮ ಐದು-ದಿನದ ಭೇಟಿಯಲ್ಲಿ ಅವರು ಇಲ್ಲಿನ ಧರ್ಮಸಭೆಯ ಹಾಗೂ ಸಿವಿಲ್ ಅಧಿಕಾರಿಗಳನ್ನು ಭೇಟಿ ಮಾಡಿ, ಇಲ್ಲಿ ನಡೆಯುತ್ತಿರುವ ಮಾನವೀಯ ಕಾರ್ಯ ಯೋಜನೆಗಳ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಬೀರತ್ ನಗರದಲ್ಲಿ ಬಲಿಪೂಜೆಯನ್ನು ಅರ್ಪಿಸಿ ಮಾತನಾಡಿದ ಅವರು ಪೋಪ್ ಫ್ರಾನ್ಸಿಸ್ ಅವರ ಮನವಿಯನ್ನು ಪುನರುಚ್ಛರಿಸಿದರು. ಅತೀ ಶೀಘ್ರದಲ್ಲಿ ಲೆಬಾನನ್ ದೇಶದ ಅಧ್ಯಕ್ಷರ ಪದವಿಗೆ ಚುನಾವಣೆಗಳು ನಡೆದು, ಉತ್ತಮ ವ್ಯಕ್ತಿ ಆರಿಸಿ ಬರಲಿ ಎಂದು ಹೇಳಿದರು. ಇದಕ್ಕೆ ಎಲ್ಲರೂ ಸಹ ಒಳ್ಳೆಯ ನಿಟ್ಟಿನಲ್ಲಿ ಕೈಜೋಡಿಸುವಂತೆ ಮನವಿ ಮಾಡಿದರು.
25 ಜೂನ್ 2024, 18:47