ಹುಡುಕಿ

ನೊತ್ರೆ ಡೇಮ್‌ನಲ್ಲಿ ಆಧುನಿಕ ಬಣ್ಣದ ಗಾಜಿನ ಕಿಟಕಿಗಳ ಸ್ಥಾಪನೆ

ಏಪ್ರಿಲ್ 15, 2019 ರಂದು ವಿನಾಶಕಾರಿ ಬೆಂಕಿಯು ಪ್ಯಾರಿಸ್ ನಲ್ಲಿರುವ ಗೋಥಿಕ್ ಮೇರುಕೃತಿ ನೊತ್ರೆ ಡೇಮ್‌ ಮಹಾ ದೇವಾಲಯ ಧ್ವಂಸಗೊಳಿಸಿದ ನಂತರ ಅದರ ಪುನಃಸ್ಥಾಪನೆ ಸ್ಥಿರ ವೇಗದಲ್ಲಿ ನಡೆದಿದೆ. ಫ್ರೆಂಚ್ ಸರ್ಕಾರವು ಆರು ಪ್ರಾರ್ಥನಾ ಮಂದಿರಗಳಲ್ಲಿ ನವೀನ ಆಧುನಿಕ ಶೈಲಿಯ ಬಣ್ಣದ ಗಾಜಿನ ಕಿಟಕಿಗಳನ್ನು ಬದಲಾಯಿಸಲು ಮತ್ತು ಅದನ್ನು ಆಯ್ಕೆ ಮಾಡಲು ತಜ್ಞರ ಸಮಿತಿಯನ್ನು ನೇಮಿಸಿದೆ.

ವಿಯಾನಿ ಗ್ರೌಸಿನ್ ಮತ್ತು ಲಿಸಾ ಝೆಂಗಾರಿನಿ ಅವರಿಂದ / ಸೌಮ್ಯ

ಇದು ವಿಶ್ವಾದ್ಯಂತ ಫ್ರಾನ್ಸನ  ಧಾರ್ಮಿಕ, ಕಲಾತ್ಮಕ ಮತ್ತು ಸಾಂಸ್ಕೃತಿಕ ಪರಂಪರೆಯ ಸಾಂಪ್ರದಾಯಿಕ ಸಂಕೇತವಾಗಿದೆ.ಈ ಗೋಥಿಕ್ ವಾಸ್ತುಶಿಲ್ಪದ ಮೇರುಕೃತಿಯನ್ನು ತನ್ನ ಕೆನ್ನಾಲಗೆಯಿಂದ ಆಕ್ರಮಿಸಿಕೊಂಡ ಬೆಂಕಿಯ ಜ್ವಾಲೆಯ ಚಿತ್ರಣ ನಮ್ಮ ಮನದಲ್ಲಿ ಅಳಿಯದ ಛಾಪು ಮೂಡಿಸಿದೆ. ಏಪ್ರಿಲ್ 15, 2019 ರ ಸಂಜೆ ೬:೨೦ಕ್ಕೆ ಮೊದಲು ಕಾಣಿಸಿಕೊಂಡ ಬೆಂಕಿ ಕ್ಯಾಥೆಡ್ರಲ್ ನ ಪ್ರಸಿದ್ಧ ಗೋಪುರ "ಲಾ ಫ್ಲೆಚೆ" ಯನ್ನು ಉರುಳಿಸಿದ್ದಲ್ಲದೆ ಮರದ ಮೇಲ್ಛಾವಣಿಯನ್ನು ಬಹಳಷ್ಟು ನಾಶಪಡಿಸಿ ಕ್ಯಾಥೆಡ್ರಲ್  ಮೇಲಿನ ಗೋಡೆಯನ್ನು ತೀವ್ರವಾಗಿ ಹಾನಿಗೊಳಿಸಿತು

ಬೆಲ್ ಟವರ್ ಗಳ ಕುಸಿತದಿಂದ ಕಟ್ಟಡದ ಮುಂಭಾಗ ಬಹುತೇಖ ಧ್ವoಸವಾಗುತ್ತಿತ್ತೇನೋ

ಆದರೆ ಅಗ್ನಿಶಾಮಕ ದಳದವರು ಬಣ್ಣದ ಗಾಜಿನ ರೋಸೆಟ್ ಕಿಟಕಿಗಳ ಮೂಲಕ ತಮ್ಮ ಕ್ಷಿಪ್ರ ಕಾರ್ಯಾಚರಣೆಯಿಂದ ಬೆಂಕಿಯ ಕಬಳಿಕೆಯಿಂದ ಈ ಬೆಲ್ ಟವರ್ ಗಳು ರಕ್ಷಿಸಲ್ಪಟ್ಟವು. ಮೇಲ್ಛಾವಣಿಯ ಮೇಲಿನ ಜೇನುಗೂಡುಗಳು, ಬಹುತೇಕ ಕಲಾಕೃತಿಗಳು, ಪುರಾತನ ಪುಸ್ತಕಗಳು ಮತ್ತು ಧಾರ್ಮಿಕ ಅವಶೇಷಗಳನ್ನು ಅಗ್ನಿಶಾಮಕ ದಳಗಳು, ಪೊಲೀಸ್ ಮತ್ತು ನಗರ ಸಭೆಯ ಕೆಲಸಗಾರರು ಬೆಂಕಿ ಯ ಜ್ವಾಲೆಯಿಂದ ಕಾಪಾಡಿದರು. ಹೀಗಾಗ್ಯೂ ಕೆಲವರು ಹೊಗೆಯ ಹಾನಿಯನ್ನು ಅನುಭವಿಸಿದರು. ದುರಂತದ ಎರಡು ದಿನಗಳ ನಂತರ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಐದು ವರ್ಷಗಳಲ್ಲಿ ಈ ಮಧ್ಯಕಾಲೀನ ಕ್ಯಾಥೆಡ್ರಲ್ ಅನ್ನು ಪುನರ್ನಿರ್ಮಿಸುವ ಪ್ರತಿಜ್ಞೆ ಮಾಡಿದರು. ಸೆಪ್ಟೆಂಬರ್ 2021ರ ಹೊತ್ತಿಗೆ, ಈ ಬೃಹತ್ ಪುನರ್ನಿರ್ಮಾಣ ಪ್ರಯತ್ನಕ್ಕೆ ದಾನಿಗಳು 840 ಮಿಲಿಯನ್ ಯುರೋಗಳಷ್ಟು ಕೊಡುಗೆ ನೀಡಿದ್ದರು.ಐದು ವರ್ಷಗಳ ಕೆಲಸದ ನಂತರ  ಮಹಾದೇವಾಲಯವನ್ನು 8 ಡಿಸೆಂಬರ್ 2024 ರಂದು ಪುನಃ ತೆರೆಯಲಾಗುವುದು.

ಐದು ವರ್ಷಗಳ ಪುನರ್ನಿರ್ಮಾಣದ ನಂತರ ಶ್ರದ್ಧಾ ಭಕ್ತಿಯಿಂದ ಡಿಸೆಂಬರ್ 8 ರಂದು ಪುನರ್ ಉದ್ಘಾಟನೆ

ಐದು ವರ್ಷಗಳ ಪುನರ್ನಿರ್ಮಾಣದ ನಂತರ ಶ್ರದ್ಧಾ ಭಕ್ತಿಯಿಂದ ಡಿಸೆಂಬರ್ 8 ರಂದು ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಹಬ್ಬದಂದು ಪುನಃ ತೆರೆಯಲಾಗುವುದು. ಅಂದು ಪ್ಯಾರಿಸ್ ನ ಧರ್ಮಾಧ್ಯಕ್ಷರಾದ ಲಾರೆಂಟ್ ಉಲ್ರಿಚ್ ಅವರ ಅಧ್ಯಕ್ಷತೆಯಲ್ಲಿ ಬಲಿಪೀಠದ ಪವಿತ್ರೀಕರಣದ ಬಲಿಪೂಜೆ ನೆರವೇರಿಸಲಾಗುವುದು. ಡಿಸೆಂಬರ್ 2023 ರಲ್ಲಿ ಅವರು ಈ ಕಾರ್ಯಕ್ರಮಗಳ ಸರಣಿಯನ್ನು ಘೋಷಿಸುತ್ತಾ ಪುನರ್ ಉದ್ಘಾಟನೆಗೆ ಮುಂಚಿತವಾಗಿ ಕಾರ್ಯಕ್ರಮಗಳ ಸರಣಿ ಪ್ರಾರಂಭಗೊAಡು ಜುಬಿಲಿ ವರ್ಷ ಜೂನ್ ೨೦೨೫ ರ ಪವಿತ್ರಾತ್ಮರ ಹಬ್ಬದವರೆಗೆ  ನಡೆಸಲಾಗುವುದು ಎಂದು ತಿಳಿಸಿದ್ದರು.

ಆರು ಪ್ರಾರ್ಥನಾ ಮಂದಿರಗಳಲ್ಲಿ ಹೊಸ ಆಧುನಿಕ ಶೈಲಿಯ ಬಣ್ಣದ ಗಾಜಿನ ಕಿಟಕಿಗಳು

ಫ್ರೆಂಚ್ ಸರ್ಕಾರವು ಇತ್ತೀಚೆಗೆ ಪಾಂಪಿಡೌ ಸೆಂಟರ್ನಲ್ಲಿರುವ ನ್ಯಾಷನಲ್ ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್ನ ಮಾಜಿ ನಿರ್ದೇಶಕ ಬರ್ನಾರ್ಡ್ ಬ್ಲಿಸ್ಟೆನ್ ಅವರ ಅಧ್ಯಕ್ಷತೆಯಲ್ಲಿ ವಿಶೇಷ ತಜ್ಞರ ಸಮಿತಿಯನ್ನು ನೇಮಿಸಿ, ಕೆಲವು ನವೀನ ಆಧುನಿಕ ಶೈಲಿಯ ಬಣ್ಣದ ಗಾಜುಗಳನ್ನು ಅಳವಡಿಸಲು ಅನೇಕ ಕಲಾವಿದರು ಪ್ರಸ್ತುತಪಡಿಸಿದ ಪ್ರಸ್ತಾವನೆಗಳನ್ನು ಆಯ್ಕೆ ಮಾಡಲು ಸೇರಿದ್ದರು.

ಹಳೆಯ ಬಣ್ಣದ ಗಾಜಿನ ಕಿಟಕಿಗಳನ್ನು, ಸಮಕಾಲೀನ ಕಲಾವಿದರು ವಿನ್ಯಾಸಗೊಳಿಸಿದ ಬಣ್ಣದ ಗಾಜಿನಿಂದ ಬದಲಾಯಿಸುವ ಕಲ್ಪನೆಯನ್ನು ಕಳೆದ ವರ್ಷ ಧರ್ಮಾಧ್ಯಕ್ಷ ಉಲ್ರಿಚ್ ಅವರು ಪ್ರಸ್ತಾವಿಸಿದರು.  ಈ ಪ್ರಸ್ತಾಪವನ್ನು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅನುಮೋದಿಸಿದ್ದಕ್ಕಾಗಿ ಹಲವಾರು ಟೀಕೆಗಳನ್ನು ಎದುರಿಸಿದ್ದಾರೆ.

ಸರ್ಕಾರ ನೇಮಿಸಿದ ಸಮಿತಿಯು ನಿರ್ದಿಷ್ಟ ಮಾನದಂಡಗಳನ್ನು ಪೂರೈಸಬೇಕಾದ ವಿವಿಧ ಯೋಜನೆಗಳನ್ನು ಪರಿಶೀಲಿಸಲು ಮೇ 2024 ರ ಅಂತ್ಯದವರೆಗೆ ಸಮಯವನ್ನು ಹೊಂದಿದೆ. ಸಾರ್ವಜನಿಕ ಟೆಂಡರ್ ನ ನಿರ್ದಿಷ್ಟತೆಯ ಪ್ರಕಾರ, ಗಾಜಿನ ಕೆಲಸಗಳು ಪ್ರಸ್ತುತ ಕಿಟಕಿಗಳು ಒದಗಿಸುವ ಅದೇ ಪ್ರಕೃತಿ, ಬಣ್ಣ ಮತ್ತು ತೀವ್ರತೆಯ ತಟಸ್ಥ ಬೆಳಕನ್ನು ಒದಗಿಸುವ ಕಾರ್ಯದ ಮೇಲ್ವಿಚಾರಣೆ ನಡೆಯಬೇಕು.

ಪವಿತ್ರ ಆತ್ಮರ, ಚಿಹ್ನೆಯಡಿಯಲ್ಲಿ

ದಕ್ಷಿಣ ಮಾರ್ಗದಿಂದ ರೂಪುಗೊಂಡ “ಪವಿತ್ರ ಆತ್ಮ” ರನ್ನು ಅಲಂಕರಿಸುವ ಕಿಟಕಿಗಳು ಈ ಪರಿಕಲ್ಪನೆಗೆ ಅನುಗುಣವಾಗಿರಬೇಕು ಮತ್ತು ಬೈಬಲ್ಲಿನ ಘಟನೆಗಳ “ಸಮಗ್ರ ಪ್ರಾತಿನಿಧ್ಯ” ನೀಡಬೇಕೆಂದು ಸೂಚನೆಗಳನ್ನು ನೀಡಲಾಗಿದೆ.

ಬಣ್ಣಗಳನ್ನು ಆಯ್ಕೆಮಾಡುವಾಗ ಕಲಾವಿದರು ಜೆಸ್ಸಿಯ ಮರದ ಬಣ್ಣದ ಗಾಜಿನ ಕಿಟಕಿಯನ್ನು ಗಣನೆಗೆ ತೆಗೆದುಕೊಳ್ಳಲು ಸಲಹೆ ನೀಡಿದ್ದಾರೆ.(ರಾಜ ಡೇವಿಡ್ ನ ತಂದೆಯಿAದ ಮರಿಯಾಳವರೆಗೆ ಯೇಸುವಿನ ಮಾನವ ವಂಶಾವಳಿಯನ್ನು ಪ್ರತಿನಿಧಿಸುತ್ತದೆ) ಇದನ್ನು ಸಮಕಾಲೀನ ಬಣ್ಣದ ಗಾಜಿನ ಕಿಟಕಿಗಳ ಮತ್ತು ನೋಟ್ರೆ-ಡೇಮ್ ನ ಕಲ್ಲಿನ ಬೆಳಕಿನ ಹೊಂಬಣ್ಣದ ನಡುವೆ ಇರಿಸಲಾಗುತ್ತದೆ.

2026 ರಲ್ಲಿ ಹೊಸ ಕಿಟಕಿಗಳನ್ನು ಸ್ಥಾಪಿಸಲಾಗುವುದು

ಕಿಟಕಿಗಳ ಅಂತಿಮ ಆಯ್ಕೆ ನವೆಂಬರ್ನಲ್ಲಿ ನಡೆಯುವ ಮುಂಚೆ ಜೂನ್ 2024ರಲ್ಲಿ ಮೊದಲ ಆಯ್ಕೆ ನಡೆಯುತ್ತದೆ. ಹೊಸ ಕಿಟಕಿಗಳನ್ನು 2026ರ ಮೊದಲು ಸ್ಥಾಪಿಸಲಾಗುವುದಿಲ್ಲ, ಆದರೆ ಡಿಸೆಂಬರ್ ೮ ರಂದು ನೊಟ್ರೆ-ಡೇಮ್ ಅನ್ನು ಪುನಃ ತೆರೆಯಲು ಮೂಲ ಮಾದರಿಯನ್ನು ಪ್ರಸ್ತುತಪಡಿಸಲಾಗುತ್ತದೆ.

22 April 2024, 14:19