ಸಂತ ಪಿಯೋ ಫೌಂಡೇಶನ್ ಪಾದ್ರೆ ಪಿಯೋರವರ ಭಾವಚಿತ್ರಗಳನ್ನು ಅನಾವರಣಗೊಳಿಸಲಿದ್ದಾರೆ.
ಕ್ರಿಸ್ಟೊಫರ್ ವೆಲ್ಸ/ ಸ್ವಾಮಿ ವಿನಯ್ ಕುಮಾರ್
ಸೋಮವಾರ 29 ನೇ ಏಪ್ರಿಲ್ ರಂದು ಸಂವಹನ ಕಾರ್ಯದ ಕಚೇರಿ ಹಾಗೂ ವಿದ್ಯಾಭ್ಯಾಸ ಹಾಗೂ ಸಂಸ್ಕೃತಿಯ ಕಚೇರಿಯು ಜಂಟಿಯಾಗಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಿದ್ದಾರೆ. ಅಂದು ಸಂತ ಪಾದ್ರೆ ಪಿಯೋ ಫೌಂಡೇಶನ್ ಸಂತರ ಹತ್ತು ಅಧಿಕೃತ ಭಾವ ಚಿತ್ರಗಳನ್ನು ಅನಾವರಣಗೊಳಿಸಲಿದ್ದಾರೆ.
ಈ ಕಾರ್ಯಕ್ರಮದ ಶೀರ್ಷಿಕೆ ಹೀಗಿದೆ "ಸಂತ ಪಾದ್ರೆ ಪಿಯೋರವರ ಭಾವಚಿತ್ರಗಳು -ಸಂತರ ಸ್ಮರಣೆ" ಎಂಬುದಾಗಿದೆ. ಈ ಕಾರ್ಯಕ್ರಮವು ಅವರನ್ನು ಸಂತರನ್ನಾಗಿ ಘೋಷಿಸಿ 25ನೇ ವಾರ್ಷಿಕ ಮಹೋತ್ಸವವನ್ನು ಸ್ಮರಿಸಲು ಆಯೋಜಿಸಲಾಗಿದೆ.
ಇದರ ಜೊತೆಯಲ್ಲಿ ಸಂತ ಪಾದ್ರೆ ಪಿಯೋರವರ ಸ್ಮರಣಾರ್ಥವಾಗಿ ಸ್ಥಾಪಿಸಲ್ಪಟ್ಟಿರುವ ಈ ಫೌಂಡೇಶನ್ ಲಾಭದಾಯಕವಾದ ಸಂಸ್ಥೆಯಾಗಿರದೇ ಸಂತರ ಜ್ಞಾನ ಹಾಗೂ ಭಕ್ತಿಯನ್ನು ಹರಡುವ ಸಲುವಾಗಿ ಸ್ಥಾಪಿಸಲ್ಪಟ್ಟಿರುವ ಸಂಸ್ಥೆಯಾಗಿದೆ. ಇದು ಸ್ಥಾಪಿಸಲ್ಪಟ್ಟು ಹತ್ತನೇ ವಾರ್ಷಿಕ ಮಹೋತ್ಸವವನ್ನು ಕಂಡಿದೆ ಆದ್ದರಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಂತ ಪಾದ್ರೆ ಪಿಯೋರವರ ಭಕ್ತಿಯನ್ನ ಹರಡುವುದು.
ಈ ಫೌಂಡೇಶನ್ ತನ್ನ ಪತ್ರಿಕಾಗೋಷ್ಠಿಯಲ್ಲಿ ಸಂತ ಪಾದ್ರೆ ಪಿಯೋರವರ ಎಲ್ಲಿಯೂ ಪ್ರಕಟಿಸದೆ ಇರುವ ಭಾವಚಿತ್ರಗಳನ್ನು ಫೌಂಡೇಶನ್ ನ ಸಂಸ್ಥಾಪಕರಾದ ಲೂಸಿಯಾನೋ ಲಮೊನಾಕ್ರ ರವರು ಹಾಗೂ ಸಂತ ಪಾದ್ರೆ ಪಿಯೋರವರ ವೈಯಕ್ತಿಕ ಛಾಯಾಗ್ರಾಹಕರಾದ ಯೆಲಿಯ ಸ್ತೆಲುತೊ ರವರೊಂದಿಗೆ ಸೇರಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಹೆಚ್ಚಿನ ರೆಸಲ್ಯೂಶನ್ ಇರುವಂತಹ ಚಿತ್ರಗಳನ್ನು ಉಚಿತವಾಗಿ ವೆಬ್ಸೈಟ್ ಮುಖಾಂತರ ಎಲ್ಲಾ ಕಥೋಲಿಕ ಸಂಸ್ಥೆಗಳಿಗೆ, ಸಂಘ ಸಂಸ್ಥೆಗಳಿಗೆ ಹಾಗೂ ವೈಯಕ್ತಿಕವಾಗಿ ಎಲ್ಲರಿಗೂ ತಲುಪುವಂತೆ ಮಾಡಲಾಗುತ್ತದೆ. ಇದರ ಉದ್ದೇಶ ಸಂತ ಪಾದ್ರೆ ಪಿಯೋರವರ ಭಕ್ತಿ ಹರಡುವ ಸಲುವಾಗಿ ಮಾಡಲಾಗಿದೆ. ಇದನ್ನು ಯಾವುದೇ ಲಾಭದಾಯಕ ಉದ್ದೇಶಗಳಿಗೆ ಬಳಸಲು ಸಲ್ಲದು.