ಹುಡುಕಿ

ಪಶ್ಚಿಮ ಸುಮಾತ್ರಾದಲ್ಲಿ ಪ್ರವಾಹ ಪಶ್ಚಿಮ ಸುಮಾತ್ರಾದಲ್ಲಿ ಪ್ರವಾಹ  (AFP or licensors)

ಪಶ್ಚಿಮ ಸುಮಾತ್ರ ಬಿಷಪ್: ಹವಾಮಾನ ಬದಲಾವಣೆ ಪ್ರಾಕೃತಿಕ ವಿಕೋಪಕ್ಕೆ ಕಾರಣ

ವ್ಯಾಟಿಕನ್ ನ್ಯೂಸ್ ಸುದ್ದಿ ವಾಹಿನಿಯೊಂದಿಗೆ ಸಂದರ್ಶನವನ್ನು ನೀಡುತ್ತಾ ಮಾತನಾಡಿರುವ ಪಶ್ಚಿಮ ಸುಮಾತ್ರಾದ ಪಡಾಂಗ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ವೀಟಸ್ ರುಬಿಯಾಂತೋ ಸೊಲಿಚಿನ್ ಅವರು ತಮ್ಮ ಪ್ರಾಂತ್ಯದಲ್ಲಿ ಉಂಟಾಗಿರುವ ಪ್ರವಾಹ ಸ್ಥಿತಿಯ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಅವರು ಪ್ರಾಕೃತಿಕ ವಿಕೋಪಗಳಿಗೆ ಮೂಲ ಕಾರಣವೇ ಹವಾಮಾನ ಬದಲಾವಣೆ ಎಂದು ವಿಶ್ಲೇಷಿಸಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ಇಂಡೋನೇಷಿಯಾ ದೇಶದ ಪಶ್ಚಿಮ ಸುಮಾತ್ರಾ ದೇಶದಲ್ಲಿ ಉಂಟಾಗಿರುವ ಪ್ರವಾಹ ಹಾಗೂ ಭೂಕುಸಿತದಿಂದ ಸುಮಾರು 52 ಜನರು ಮೃತಹೊಂದಿದ್ದು 3,000 ಜನರನ್ನು ರಕ್ಷಿಸಲಾಗಿದೆ. 

ವ್ಯಾಟಿಕನ್ ನ್ಯೂಸ್ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಇಂಡೋನೇಷಿಯಾದ ಪಡಾಂಗ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ವೀಟಸ್ ರುಬಿಯಾಂತೋ ಸೋಲಿಚಿನ್, ಎಸ್. ಎಕ್ಸ್., ಅವರು ಪ್ರಸ್ತುತ ಉಂಟಾಗಿರುವ ವಿಕೋಪದ ಕುರಿತು ಮಾತನಾಡುತ್ತಾ, ಪ್ರಕೃತಿಯನ್ನು ನಾಶ ಮಾಡುತ್ತಿರುವುದರಿಂದ ಪದೇ ಪದೇ ಪ್ರಾಕೃತಿಕ ವಿಕೋಪಗಳು ನಡೆಯುತ್ತಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ರಾಯಿಟರ್ಸ್ ವರದಿಗಳ ಪ್ರಕಾರ ಶನಿವಾರ ಸುರಿದ ಭಾರೀ ಮಳೆಗೆ ಪ್ರವಾಹ ಉಂಟಾಗಿದ್ದು, ಪ್ರವಾಹದ ಜೊತೆ ಜೊತೆಗೆ ಭಾರೀ ಕೆಸರು ಸಹ ಹರಿದು ಬಂದಿದ್ದು ಜನಜೀವನ ಅಸ್ತವ್ಯಸ್ಥವಾಗಿದೆ ಮಾತ್ರವಲ್ಲದೆ ಹಲವೆಡೆ ಭೂಕುಸಿತ ಉಂಟಾಗಿದೆ ಎಂದು ವರದಿಯಾಗಿದೆ. 

ಮೃತ ಹೊಂದಿದ 52 ಜನರ ಪೈಕಿ 45 ಜನರನ್ನು ಸ್ಥಳೀಯ ಪೊಲೀಸರು ಹಾಗೂ ಜನರು ಗುರುತಿಸಿದ್ದು, ಕಾಣದೆ ಹೋಗಿರುವ ಇನ್ನೂ ಅನೇಕರಿಗಾಗಿ ಶೋಧ ಮುಂದುವರೆದಿದೆ. ಮುಂದಿನ ವಾರದವರೆಗೂ ಸಹ ಭಾರೀ ಮಳೆ ಮುಂದುವರೆಯುತ್ತದೆ ಎಂದು ವರದಿಯಾಗಿದೆ. 

ಪ್ರವಾಹ ಸ್ಥಿತಿಯ ಕುರಿತು ಮಾತನಾಡಿದ ಪಡಾಂಗ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಈ ಪ್ರವಾಹ, ಭೂಕುಸಿತ ಹಾಗೂ ಕೆಸರು ಶೇಖರಣೆಯ ಸಮಸ್ಯೆಗಳ ಕುರಿತು ಮಾತನಾಡಿ, ಈ ಭಾರೀ ಮಳೆಯಿಂದ ಬಹಳ ಅನಾಹುತವಾಗಿದ್ದು, ಅನೇಕರು ಮೃತಹೊಂದಿ, ಸಾವಿರಾರು ಜನರು ನೆಲೆಯನ್ನು ಕಳೆದುಕೊಂಡಿದ್ದಾರೆ. ಸರ್ಕಾರ ಹಾಗೂ ಪೊಲೀಸ್ ವ್ಯವಸ್ಥೆ ಒಟ್ಟಾಗಿ ಕಾರ್ಯನಿರ್ವಹಿಸಿದರೆ ಉಂಟಾಗಿರುವ ಅವ್ಯವಸ್ಥೆಯನ್ನು ಸರಿಪಡಿಸಿ, ಜನ ಜೀವನ ಸಹಜ ಸ್ಥಿತಿಗೆ ಮರಳುವಂತೆ ಮಾಡಬಹುದು ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಅವರು, "ಸರ್ಕಾರವು ಹೆದ್ದಾರಿಗಳನ್ನು ನಿರ್ಮಿಸುತ್ತಿಲ್ಲ" ಎಂದು ಹೇಳಿದ್ದಾರೆ. ಯಾವುದೇ ಹೆದ್ದಾರಿಗಳಿಲ್ಲದೆ ಕೇವಲ ಸಣ್ಣಪುಟ್ಟ ರಸ್ತೆಗಳು ಇರುವ ಕಾರಣ ಈ ಪರಿಸ್ಥಿತಿಯು ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ನೆರವನ್ನು ನೀಡುವ ಸಂಧರ್ಭದಲ್ಲಿ ನಾವು ಅನುಭವಿಸುವ ಸಮಸ್ಯೆ ಎಂದರೆ ಧಾರ್ಮಿಕ ಸಮಸ್ಯೆ. ಮುಸ್ಲೀಮರು ನಾವು ಕ್ರೈಸ್ತರು ಎಂದು ತಿಳಿದರೆ ನೆರವನ್ನು ಪಡೆದುಕೊಳ್ಳುವುದಿಲ್ಲ. ಆದುದರಿಂದ ನಾವು ರೆಡ್ ಕ್ರಾಸ್'ನಂತಹ ಸಾಮಾನ್ಯ ಹೆಸರುಗಳನ್ನು ಉಪಯೋಗಿಸುತ್ತೇವೆ ಎಂದು ಹೇಳಿದ್ದಾರೆ.   

14 May 2024, 17:17