ಹುಡುಕಿ

ರಷ್ಯಾ-ಉಕ್ರೇನ್ ಸಂಘರ್ಷ ಉದ್ವಿಘ್ನ ಬೆನ್ನಲ್ಲೇ ಪಾಶ್ಚಾತ್ಯ ರಾಷ್ಟ್ರಗಳಿಗೆ

ದ್ವಿತೀಯ ಮಹಾಯುದ್ಧದಲ್ಲಿ ನಾಜಿ ಜರ್ಮನಿ ವಿರುದ್ಧ ಸಾಧಿಸಿದ ವಿಜಯದ ನೆನಪನ್ನು ರಷ್ಯಾ ಆಚರಿಸಿದ ಹೊತ್ತಿನಲ್ಲೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪಾಶ್ಚಾತ್ಯ ದೇಶಗಳು ಜಾಗತಿಕ ಸಶಸ್ತ್ರ ಸಂಘರ್ಷಕ್ಕೆ ಗುರಿಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅತ್ತ ಉಕ್ರೇನ್ ದೇಶದಲ್ಲಿ ಯುದ್ಧ ಮುಂದುವರೆದಿದೆ.

ವರದಿ: ಸ್ಠೆಫಾನ್ ಜೆ ಬೊಸ್, ಅಜಯ್ ಕುಮಾರ್

ಉಕ್ರೇನ್ ಪ್ರದೇಶದೊಳಗೆ ರಷ್ಯಾ ದೇಶವು ಉಡಾಯಿಸಿದ ಇಪ್ಪತ್ತು ರಾಕೆಟ್ಗಳ ಪೈಕಿ, ಸುಮಾರು 17 ರಾಕೆಟ್ಟುಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ವಾಯುಸೇನೆ ಹೇಳಿಕೆಯನ್ನು ನೀಡಿದೆ. ದಕ್ಷಿಣ ಉಕ್ರೇನ್ ಪ್ರದೇಶದ ಒಡೆಸಾ ಎಂಬಲ್ಲಿ ಈ ರಾಕೆಟುಗಳನ್ನು ಹೊಡೆದುರುಳಿಸಲಾಗಿದೆ ಎಂದು ವರದಿಯಾಗಿದೆ.

ಉಕ್ರೇನಿನ ಪಾಶ‌್ಚಾತ್ಯ-ನೆರವು ಸೇನೆಗಳ ವಿರುದ್ಧ ರಷ್ಯಾ ದಾಳಿ ಮಾಡಿದ ಹೊತ್ತಲ್ಲೇ ಈ ದಾಳಿ ನಡೆದಿದೆ.

ದ್ವಿತೀಯ ಮಹಾಯುದ್ಧದಲ್ಲಿ ನಾಜಿ ಜರ್ಮನಿಯ ವಿರುದ್ಧ ರಷ್ಯಾ ಸಾಧಿಸಿದ ವಿಜಯದ ದಿನಾಚರಣೆಯನ್ನು ಆಚರಿಸುತ್ತಾ, ಸೇನೆಯೊಂದಿಗೆ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪಾಶ್ಚಾತ್ಯ ದೇಶಗಳು ದುರಂಹಕಾರವನ್ನು ಪ್ರದರ್ಶಿಸುತ್ತಿವೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ರಷ್ಯಾ ವಹಿಸಿದ ಪಾತ್ರವನ್ನು ಜಗತ್ತು ಮರೆಯಬಾರದು ಎಂದು ಹೇಳಿದ್ದಾರೆ. 

ಈ ವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಐದನೇ ಬಾರಿಗೆ ರಷ್ಯಾ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. 

ಉಕ್ರೇನ್ ದೇಶದೊಂದಿಗೆ ಸೇರಿ ರಷ್ಯಾ ವಿರುದ್ಧ ಯುದ್ಧವನ್ನು ಮಾಡಲು ಪಾಶ್ಚಾತ್ಯ ದೇಶಗಳು ಮಿಲಿಟರಿ ತರಭೇತಿ ಹಾಗೂ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದಾರೆ ಎಂದು ಹೇಳಿರುವ ರಷ್ಯಾ ದೇಶವು ಇದರಿಂದ ಬೆಲ್ಗೋರ್ಡ್ ಎಂಬ ಪ್ರದೇಶದ ಮೇಲೆ ಉಕ್ರೇನ್ ದೇಶವು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಎಂಟು ಜನರ ಮೃತಾಗಿದ್ದಾರೆ ಎಂದು ಹೇಳಿದೆ.

ಅನೇಕ ದೇಶಗಳು ಉಕ್ರೇನ್-ರಷ್ಯಾ ಯುದ್ಧವನ್ನು ನಿಲ್ಲಿಸಲು ಕರೆ ನೀಡಿ, ಸಂಧಾನ ಮಾತುಕತೆಗಳನ್ನು ಹೊಂದಲು ಮನವಿ ಮಾಡಿವೆ ಹಾಗೂ ಶಾಂತಿ ಸ್ಥಾಪನೆಗಾಗಿ ಒತ್ತಾಯಿಸಿವೆ.       

09 May 2024, 18:05