ಹುಡುಕಿ

VATICAN-SWITZERLAND-RELIGION-POPE-POLITICS-DIPLOMACY VATICAN-SWITZERLAND-RELIGION-POPE-POLITICS-DIPLOMACY 

ಸ್ವಿಸ್ ಕಾನ್ಫಿಡೆರೇಷನ್ ಅಧ್ಯಕ್ಷರನ್ನು ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್

ಶನಿವಾರ ಬೆಳಗ್ಗೆ ವಿಶ್ವಗುರು ಫ್ರಾನ್ಸಿಸ್ ಕಾನ್ಫಿಡೆರೇಷನ್ ಅಧ್ಯಕ್ಷರಾದ ವಿಯೋಲಾ ಅಮ್ಹರ್ಡ್ ಅವರನ್ನು ವ್ಯಾಟಿಕನ್ನಿನಲ್ಲಿ ಭೇಟಿ ಮಾಡಿದರು. ವಿಶ್ವಗುರು ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ ನಂತರ ಕ್ವಿಸ್ ಕಾಂಪಿಟೇಶನ್ ಅಧ್ಯಕ್ಷರಾದ ವಿಯೋಲಾ ಅವರು ವ್ಯಾಟಿಕನ್ನಿನ ರಾಜ್ಯಾಂಗ ಕಚೇರಿಗೆ ಭೇಟಿ ಮಾಡಿ, ಅಂತರರಾಷ್ಟ್ರೀಯ ಸಮಸ್ಯೆಗಳ ಕುರಿತು ಮಾತುಕತೆಯನ್ನು ನಡೆಸಿದರು.

ವರದಿ: ವ್ಯಾಟಿಕನ್ ನ್ಯೂಸ್

ಶನಿವಾರ ಬೆಳಗ್ಗೆ ಮೇ 4 ರಂದು ವಿಶ್ವಗುರು ಫ್ರಾನ್ಸಿಸ್ ಅವರು ಸ್ವಿಸ್ ಕಾನ್ಫಿಗರೇಷನ್ ಅಧ್ಯಕ್ಷರಾದ ವಿಯೋಲ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಉಭಯ ನಾಯಕರ 30 ನಿಮಿಷದ ಮಾತುಕತೆಯ ನಂತರ, ಸ್ವಿಸ್ ಕಾಂಪಿಟರೇಷನ್ ಅಧ್ಯಕ್ಷರು ವ್ಯಾಟಿಕನ್ ರಾಜ್ಯಾಂಗ ಕಚೇರಿಗೆ ಭೇಟಿ ನೀಡಿ, ಅಲ್ಲಿ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೇತ್ರೊ ಪರೋಲಿನ್ ಮತ್ತು ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಗರ್ ಅವರನ್ನು ಭೇಟಿ ಮಾಡಿದರು.

ಪೋಪ್ ಫ್ರಾನ್ಸಿಸ್ ಮತ್ತು ವಿಯೋಲಾ ಅಮ್ಹರ್ಡ್
ಪೋಪ್ ಫ್ರಾನ್ಸಿಸ್ ಮತ್ತು ವಿಯೋಲಾ ಅಮ್ಹರ್ಡ್

ವ್ಯಾಟಿಕನ್ನಿನ ಮಾಧ್ಯಮ ಕಚೇರಿಯ ಹೇಳಿಕೆಯ ಪ್ರಕಾರ ಉಭಯ ನಾಯಕರುಗಳು ಪ್ರಸ್ತುತ ಅಂತರರಾಷ್ಟ್ರೀಯ ವಿಚಾರಗಳನ್ನು ಹಾಗೂ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತುಕತೆಯನ್ನು ನಡೆಸಿದರು. ವಿಶೇಷವಾಗಿ ಉಕ್ರೇನ್ ಹಾಗೂ ರಷ್ಯಾ ದೇಶಗಳ ನಡುವೆ ನಡೆಯುತ್ತಿರುವ ಯುದ್ಧ ಮತ್ತು ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ದೇಶಗಳ ನಡುವಿನ ಸಮರದ ಕುರಿತು ಚರ್ಚಿಸಿದರು. ವಿಶ್ವಗುರು ಫ್ರಾನ್ಸಿಸ್ ಹಾಗೂ ಸ್ವಿಸ್ ಕಾನ್ಫಿಡೆರೆಶನ್ನ ಅಧ್ಯಕ್ಷರು ಸತ್ಯದ ಪರಿಸ್ಥಿತಿಯಲ್ಲಿ ಶಾಂತಿಯ ಮಹತ್ವ ಹಾಗೂ ಅದನ್ನು ಸ್ಥಾಪಿಸುವ ತೂರ್ತಿನ ಕುರಿತು ಚರ್ಚೆಯನ್ನು ನಡೆಸಿದರು.

ಇದರ ಜೊತೆಗೆ, ಪೊಂಟಿಫಿಕಲ್ ಸ್ವಿಸ್ ಗಾರ್ಡ್ಸ್ ಬರ್ರಾಕ್ಸ್ ಕುರಿತು ಸಂವಾದ ನಡೆಯಿತು. ಈ ವೇಳೆ ವಿಶ್ವಗುರು ಫ್ರಾನ್ಸಿಸ್ವರು ಸ್ವಿಸ್ ಗಾರ್ಡ್'ಗಳು ಪೋಪರಿಗೆ ಹಾಗೂ ವ್ಯಾಟಿಕನ್'ಗೆ ಸಲ್ಲಿಸುತ್ತಿರುವ ಸೇವೆಯನ್ನು ವಂದಿಸಿದರು.

ಅಂತಿಮವಾಗಿ ಉಭಯ ನಾಯಕರು ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು.

04 May 2024, 19:19