ಹುಡುಕಿ

2021.07.20 TALITHA KUM LOGO 2021.07.20 TALITHA KUM LOGO 

ಮುಂದಿನ ಸಾರ್ವಜನಿಕ ದರ್ಶನದಲ್ಲಿ 15 ವರ್ಷಗಳನ್ನು ಪೂರೈಸುತ್ತಿರುವ ತಲಿಥಾ ಕೂ

ಉತ್ತರ ರೋಮ್ ನಗರದ ಸಾಕ್ರೊಫಾನೋ ಎಂಬಲ್ಲಿ ತಲಿಥಾ ಕೂಮ್ ಪ್ರತಿಷ್ಟಾನವು ತನ್ನ ಎರಡನೇ ವಾರ್ಷಿಕ ಪ್ರಧಾನ ಸಭೆಯನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ. ಸುಮಾರು ನೂರು ದೇಶಗಳಿಂದ ಪ್ರತಿನಿಧಿಗಳು ಆಗಮಿಸಲಿದ್ದು, ಮಾನ ಕಳ್ಳಸಾಗಣೆಯ ವಿರುದ್ಧ ತಮ್ ಪ್ರತಿಜ್ಞೆಯನ್ನು ಮತ್ತೆ ನವೀಕರಿಸಲಿದ್ದಾರೆ. ಇದೇ ಸಂಧರ್ಭದಲ್ಲಿ ಈ ಕಾರ್ಯಕ್ರಮದಲ್ಲಿ ಮಾನವ ಕಳ್ಳಸಾಗಣೆಯ ಸಂತ್ರಸ್ಥರು ಹಾಗೂ ಆ ನಿಟ್ಟಿನಲ್ಲಿ ಹೋರಾಟ ನಡೆಸಿದವರು ತಮ್ಮ ಕಥೆಗಳನ್ನು ಹಂಚಿಕೊಳ್ಳಲಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ವಿಶ್ವದ ಸುಮಾರು ತೊಂಬತ್ತು ದೇಶಗಳ ಸುಮಾರು ಇನ್ನೂರು ತಲಿಥಾ ಕೂಮ್ ಕಾರ್ಯಕರ್ತರು ರೋಮ್ ನಗರಕ್ಕೆ ಆಗಮಿಸಲಿದ್ದು, ತಮ್ಮ ಸಂಘಟನೆ ತಲಿತಾ ಕೂಮ್ ನ ಹದಿನೈದನೇ ವಾರ್ಷಿಕೋತ್ಸವವನ್ನು ಆಚರಿಸಲಿದ್ದಾರೆ. ಇವರಲ್ಲಿ ಗುರುಗಳು, ಕನ್ಯಾಸ್ತ್ರೀಯರು, ಮಾನವ ಕಳ್ಳಸಾಗಣೆಯ ಕಾರ್ಯಕರ್ತರು ಹಾಗೂ ಮಾನವ ಕಳ್ಳಸಾಗಣೆಯ ಸಂತ್ರಸ್ಥರು ಭಾಗವಹಿಸಲಿದ್ದಾರೆ.

ಮೇ 18 ರಿಂದ 24 ರವರೆಗೆ ಸಾಕ್ರೋಫಾನೋದಲ್ಲಿನ ಫ್ರತೆರ್ನಾ ದೊಮುಸ್ ಎಂಬಲ್ಲಿ ನಡೆಯಲಿರು  ಈ ಕಾರ್ಯಕ್ರಮದ ಈ ವರ್ಷದ ಶೀರ್ಷಿಕೆಯು "ಮಾಣವ ಕಳ್ಳಸಾಗಣೆಯನ್ನು ನಿಲ್ಲಿಸಲು ಒಂದಾಗಿ ಪಯಣಿಸುವುದು" ಎಂಬುದಾಗಿದೆ.

ಈ ಕಾರ್ಯಕ್ರಮದಲ್ಲಿ ಮಾನವ ಕಳ್ಳಸಾಗಣಿಕೆಯ ಸಂತ್ರಸ್ಥರು ಹಾಗೂ ಅದನ್ನು ತಡೆಗಟ್ಟುವಲ್ಲಿ ಹೋರಾಡಿದವರು ಈ ಪ್ರಕ್ರಿಯೆಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಮಾನವ ಕಳ್ಳಸಾಗಣಿಕೆಯನ್ನು ಸಂಘಟಿತರಾಗಿ ಹೇಗೆ ತಡೆಗಟ್ಟುವುದು ಎಂಬ ಕುರಿತು ಚರ್ಚೆ ಹಾಗೂ ಸಂವಾದಗಳು ಸಹ ನಡೆಯಲಿವೆ.

ಈ ಸಂದರ್ಭದಲ್ಲಿ ವಿಶೇಷ ಧೈರ್ಯ ಹಾಗೂ ಪ್ರತಿಭೆಯನ್ನು ತೋರಿಸಿದ ಮೂರು ಕಥೋಲಿಕ ಕನ್ಯಾಸ್ತ್ರೀಯರನ್ನು ಸನ್ಮಾನಿಸಿ, ಅಭಿನಂದಿಸಲಾಗುತ್ತದೆ.

ಸಾಕ್ರೊಫಾನೋದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಾಗುತ್ತದೆ. 

 

15 May 2024, 18:42