ಹುಡುಕಿ

Pope Francis Pope Francis  (ANSA)

ಪೋಪ್ ಫ್ರಾನ್ಸಿಸ್: ಯೇಸುವಿನ ಪವಿತ್ರ ಹೃದಯಕ್ಕೆ ಪಾಪ ಪರಿಹಾರದ ಸಂಪ್ರದಾಯವನ್ನು ಮತ್ತೆ ಆರಂಭಿಸಿ

ದೈವಿಕ ದರ್ಶನದ ಜ್ಯುಬಿಲಿ ಆಚರಣೆಗಳ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಭಾಗವಹಿಸಿದ್ದವರನ್ನು ಉದ್ದೇಶಿಸಿ ಮಾತನಾಡಿದ ಫ್ರಾನ್ಸಿಸ್, ಪಾಪ ಪರಿಹಾರದ ಸಂಪ್ರದಾಯವನ್ನು ಮತ್ತೆ ಆರಂಭಿಸುವಂತೆ ಕರೆ ನೀಡಿದ್ದಾರೆ.

ವರದಿ: ಲೀಸಾ ಝೇಂಗಾರಿನಿ, ಅಜಯ್ ಕುಮಾರ್

ಪೂರ್ವ ಫ್ರಾನ್ಸ್ ದೇಶದಲ್ಲಿ ಸಂತ ಮೇರಿ ಮಾರ್ಗರೇಟ್ ಅಲಕೋಕೆ ಅವರಿಗೆ ಯೇಸುವಿನ ಪವಿತ್ರ ಹೃದಯದ ದರ್ಶನವಿತ್ತು 350 ವರ್ಷಗಳಾದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಧರ್ಮಸಭೆಯಲ್ಲಿ ಪಾಪ ಪರಿಹಾರ ಎಂಬುದರ ಅರ್ಥ ಪ್ರಮುಖ ಕೇಂದ್ರಬಿಂದುವಾಗಿದೆ.

ಯೇಸುವಿನ ಪವಿತ್ರ ಹೃದಯದ ಭಕ್ತಿ ಆಚರಣೆಯನ್ನು ಮೊದಲ ಬಾರಿಗೆ ಉತ್ತೇಜಿಸಿತ್ತು ಸಂತ ಮೇರಿ ಮಾರ್ಗರೇಟ್. ಈ ಆಚರಣೆಯನ್ನು ಪೋಪ್ 13ನೇ ಕ್ಲಮೆಂಟರು ಅಧಿಕೃತವಾಗಿ ಅನುಮೋದಿಸಿದರು.

ಸರಿಪಡಿಸಲಾಗದನ್ನು ಸರಿಪಡಿಸಬಹುದು ಎಂಬ ಶೀರ್ಷಿಕೆಯ ಮೇಲೆ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ಸುಮಾರು 150 ಜನರು ಭಾಗವಹಿಸಿ, ದೌರ್ಜನ್ಯಗಳಿಂದ ಬಾದಿತವಾಗಿರುವ ಧರ್ಮಸಭೆಯಲ್ಲಿ ಯೇಸುವಿನ ಪವಿತ್ರ ಹೃದಯಕ್ಕೆ ಪಾಪ ಪರಿಹಾರವನ್ನು ಮಾಡುವುದರ ಅವಶ್ಯಕತೆಯ ಕುರಿತು ತೀವ್ರವಾಗಿ ಚಿಂತನೆಯನ್ನು ನಡೆಸಿದರು.

ಪಾಪ ಪರಿಹಾರ ಎಂಬ ವಿಷಯವನ್ನು ಕುರಿತು ಮಾತನಾಡಿದ್ದ ವಿಶ್ವಗುರು ಫ್ರಾನ್ಸಿಸ್ ಈ ವಿಷಯವು ಬೈಬಲ್ ಗ್ರಂಥದಲ್ಲಿ ನಮೂದಿಸಲ್ಪಟ್ಟಿದೆ. ಹೊಸ ಒಡಂಬಡಿಕೆಯಲ್ಲಿ ಹೊಸ ರೂಪವನ್ನು ಪಡೆದುಕೊಳ್ಳುವ ಇದು ಅಲ್ಲಿ ಆಧ್ಯಾತ್ಮಿಕ ಪ್ರಕ್ರಿಯೆಗಾಗಿ ಮಾರ್ಪಡುತ್ತದೆ. ಯೇಸುಕ್ರಿಸ್ತರು ಶಿಲುಬೆಯ ಮೇಲೆ ಮಡಿಯುವ ಮೂಲಕ ಜಗತ್ತಿಗೆ ರಕ್ಷಣೆಯನ್ನು ತಂದುದನ್ನು ಇದು ಸೂಚಿಸುತ್ತದೆ ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದರು.

ಪಾಪ ಪರಿಹಾರ ಎಂಬುದು ಎರಡು ಮುಖಗಳನ್ನು ಒಳಗೊಂಡಿದೆ. ಮೊದಲನೆಯದಾಗಿ, ಇದು ಪಾಪಿಯೆಡೆಗಿನ ದೇವರ ಕರುಣೆಯನ್ನು ತೋರುತ್ತದೆ. ಎರಡನೆಯದಾಗಿ ನಮ್ಮ ನೆರೆಹೊರೆಯವರು ಮಾತ್ರವಲ್ಲದೆ ದೇವರೊಂದಿಗೂ ಸಹ ಸಂಧಾನವನ್ನು ಸಾಧ್ಯವಾಗಿಸುತ್ತದೆ. ವಿಶ್ವಗುರು ಫ್ರಾನ್ಸಿಸ್ ಪಾಪ ಪರಿಹಾರದ ಕುರಿತು ತಮ್ಮ ನುಡಿಗಳನ್ನು ಹಂಚಿಕೊಂಡರು.

ಪಾಪ ಪರಿಹಾರ ಅಥವಾ ಸಂಧಾನ ಪ್ರಕ್ರಿಯೆ ಎಂಬುದು ನಮ್ಮ ಪಾಪಗಳನ್ನು ಗುರುತಿಸುವ ಮೂಲಕ ಆರಂಭವಾಗುತ್ತದೆ. ಅದೇ ರೀತಿ ತೆರೆದ ಮನಸ್ಸಿನಿಂದ ಮಾಡಿದ ಪಾಪಗಳಿಗೆ ಕ್ಷಮಾಪಣೆಯನ್ನು ಕೇಳುವ ಅಥವಾ ಕ್ಷಮೆಯನ್ನು ಯಾಚಿಸುವ ಮೂಲಕ ಅದು ಅರ್ಥಪೂರ್ಣವಾಗುತ್ತದೆ ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದ್ದಾರೆ.

04 May 2024, 19:12