ಹುಡುಕಿ

ಉಗಾಂಡ ದೇಶದ ಮುಕೋನೊ ಜಿಲ್ಲೆಯಲ್ಲಿನ ಕಿಸೋಗ ಟೈಲರಿಂಗ್ ಶಾಲೆ ಉಗಾಂಡ ದೇಶದ ಮುಕೋನೊ ಜಿಲ್ಲೆಯಲ್ಲಿನ ಕಿಸೋಗ ಟೈಲರಿಂಗ್ ಶಾಲೆ 

ಸಮಾಂತರ ರೇಖೆಯ ಆಫ್ರಿಕಾ ದೇಶದ ಮಹಿಳೆಯರಿಗೆ ಮ್ಯಾಂಟೆಲ್ಲೇಟ್ ಸಿಸ್ಟರ್ಸ್ ಸೇವೆ

ಶತಮಾನಕ್ಕೂ ಹೆಚ್ಚಿನ ಕಾಲ ಆಫ್ರಿಕಾದಲ್ಲಿ ಸೇವೆ ಸಲ್ಲಿಸುತ್ತಿರುವ ಮ್ಯಾಂಟೆಲ್ಲೇಟ್ ಸಿಸ್ಟರ್ಸ್ ಅವರ ಸೇವೆಯನ್ನು ಸಿಸ್ಟರ್ ನೊರೆಟ್ಟಾ ಝೆಕ್ಕಿನೋನ್ ಅವರು ಸ್ಮರಿಸಿಕೊಳ್ಳುತ್ತಾರೆ. "ಪೋಪ್ ಫ್ರಾನ್ಸಿಸ್ ಅವರು ಹೇಳುವಂತೆ ಆಫ್ರಿಕಾದಲ್ಲಿ ಮನೆಯ ಆಧಾರಸ್ಥಂಭವಾಗಿರುವವರು ಮಹಿಳೆಯರೇ ಎಂಬ ಸತ್ಯದ ಕುರಿತು ನನಗೆ ಆಶ್ಚರ್ಯವಾಗಿದೆ" ಎಂದು ಹೇಳುತ್ತಾರೆ.

ವರದಿ: ಮರಿಯ ಮಿಲ್ವಿಯ ಮೋರ್ಸಿನಾವ್, ಅಜಯ್ ಕುಮಾರ್

ಸರ್ವೆಂಟ್ಸ್ ಆಫ್ ಮೇರಿ - ಮ್ಯಾಂಟೆಲ್ಲೇಟ್ ಸಿಸ್ಟರ್ಸ್ ಧಾರ್ಮಿಕ ಸಭೆಯು ಕಳೆದ ವರ್ಷ ಆಫ್ರಿಕಾ ದೇಶದಲ್ಲಿ ತನ್ನ ಇರುವಿಕೆಯ ನೂರು ವರ್ಷಗಳನ್ನು ಆಚರಿಸಿಕೊಂಡಿತು. ಈಗ ಅಲ್ಲಿ ಈ ಸಭೆಯನ್ನು ಇಸ್ವಟಿನಿ ಎಂದು ಕರೆಯಲಾಗುತ್ತಿದ್ದು, ಇದನ್ನು ಮೊದಲು ಸ್ವಾಝಿಲ್ಯಾಂಡ್ ಎಂದು ಕರೆಯುತ್ತಿದ್ದರು. ಉಗಾಂಡ ದೇಶದಲ್ಲಿ ಈ ಸಭೆಯು 2000 ಇಸವಿಯಿಂದ ಸೇವೆಯನ್ನು ಸಲ್ಲಿಸುತ್ತಿದೆ.

ಮಹಿಳೆಯರ ಸ್ಥಿತಿಗತಿಗಳ ದೃಷ್ಟಿಕೋನದಿಂದ ಉಗಾಂಡ ದೇಶದಲ್ಲಿನ ಸಾಮಾಜಿಕ ಸ್ಥಿತಿಯ ಕುರಿತು ಮಾತನಾಡಿದ  ಸರ್ವೆಂಟ್ಸ್ ಆಫ್ ಮೇರಿ - ಮ್ಯಾಂಟೆಲ್ಲೇಟ್ ಸಿಸ್ಟರ್ಸ್ ಧಾರ್ಮಿಕ ಸಭೆಯ ಸುಪೀರಿಯರ್ ಜನರಲ್ ಸಿಸ್ಟರ್ ನೊರೆಟ್ಟಾ ಝೆಕ್ಕಿನೋ ಆಫ್ರಿಕಾ ಸಮಾಜಕ್ಕೆ ತಮ್ಮ ಧಾರ್ಮಿಕ ಸಭೆಯು ನೀಡಿರುವ ಕೊಡುಗೆಯನ್ನು ಸ್ಮರಿಸಿಕೊಂಡರು.

 "ಪೋಪ್ ಫ್ರಾನ್ಸಿಸ್ ಅವರು ಹೇಳುವಂತೆ ಆಫ್ರಿಕಾದಲ್ಲಿ ಮಹಿಳೆಯರೇ ಕುಟುಂಬದ ಆಧಾರಸ್ಥಂಭವಾಗಿದ್ದಾರೆ ಎಂಬ ಸತ್ಯದಿಂದ ನಾನು ಆಶ್ಚರ್ಯಗೊಂಡಿದ್ದೇನೆ. ಅಂದಾಜು, ಉಗಾಂಡಾ ದೇಶದಲ್ಲಿ ಪ್ರತಿ ಮಹಿಳೆಯರೂ ಸುಮಾರು ಏಳು ಮಕ್ಕಳನ್ನು ಹೊಂದಿದ್ದಾರೆ." ಎಂದು ಹೇಳಿದ ಸಿಸ್ಟರ್ ನೊರೆಟ್ಟಾ, ಈ ದೇಶದಲ್ಲಿ ನಮ್ಮ ಮೂರು ಸಮುದಾಯಗಳಿವೆ. ಅವುಗಳಲ್ಲಿ ಮುಕೋನೊ ಜಿಲ್ಲೆಯಲ್ಲಿರುವ ಕಿಸೋಗ ಎಂಬುದು ಅತಿ ದೊಡ್ಡ ಸಮುದಾಯವಾಗಿದೆ. ಅದಾಗಲೇ ಕಳೆದ ಹಲವು ವರ್ಷಗಳ ಹಿಂದೆ ಫ್ರಯರ್ ಸರ್ವೆಂಟ್ಸ್ ಆಫ್ ಮೇರಿ ಸಭೆಯವರು ಆರಂಭಿಸಿದ ಪಾಲನಾ ಸೇವೆಯಲ್ಲಿ ಅವರ ಆಹ್ವಾನದ ಹಿನ್ನೆಲೆಯಲ್ಲಿ ನಾವು ನೆರವಾಗುತ್ತಿದ್ದೇವೆ. ಹಲವು ಸಿಸ್ಟರ್'ಗಳು ಧರ್ಮೋಪದೇಶಕರಾಗಿ, ಧರ್ಮಕೇಂದ್ರದ ಪಾಲನಾ ಸೇವೆಯ ಸಂಚಾಲಕರಾಗಿ ಹಾಗೂ ಶಿಕ್ಷಕರಾಗಿ ನಮಗೆ ಸಹಾಯ ಮಾಡಲು ನಮ್ಮನ್ನು ಸೇರಿಕೊಂಡಿದ್ದಾರೆ." ಎಂದು ಸಿಸ್ಟರ್ ನೊರೆಟ್ಟಾ ಮಾಹಿತಿಯನ್ನು ನೀಡುತ್ತಾರೆ.

ಈ ಪ್ರದೇಶದಲ್ಲಿ ಸಿಸ್ಟರ್ಸ್ ಆಫ್ ಮೇರಿ ಸಭೆಯ ಉಪಸ್ಥಿತಿ

ಇತರೆ ಆಫ್ರಿಕಾದ ದೇಶಗಳಂತೆ - ಉಗಾಂಡದಲ್ಲಿಯೂ ಸಹ - ಆರೋಗ್ಯ ಕ್ಷೇತ್ರದಲ್ಲಿನ ಅನಾನುಕೂಲತೆಗಳು - ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

"ಸಿಸ್ಟರ್'ಗಳು ಇಲ್ಲಿ ಒಂದು ಚಿಕ್ಕ ಚಿಕಿತ್ಸಾಲಯವನ್ನು ಆರಂಭಿಸಿದ್ದು, ಹೆರಿಗೆ ವಾರ್ಡನ್ನು ಹಾಕಿದ್ದಾರೆ. ಇದಕ್ಕೆ ಇಲ್ಲಿ ಹೆಚ್ಚು ಬೇಡಿಕೆ ಇದೆ. ಅದೇ ರೀತಿ, ಇಂತಹ ಸೇವೆಯನ್ನು ಮಾಡುವ ಸಿಸ್ಟರ್'ಗಳಿಗೆ ಬೇಡಿಕೆಯೂ ಸಹ ಹೆಚ್ಚಿದೆ" ಎಂದು ಮದರ್ ಸುಪೀರಿಯರ್ ಜನರಲ್ ಹೇಳುತ್ತಾರೆ.'

ಹೆರಿಗೆ ಆಸ್ಪತ್ರೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಅದರಂತೆ ಹೆರಿಗೆಯಲ್ಲಿ ಸಹಾಯ ಮಾಡುವ ನುರಿತ ಮಹಿಳೆಯರಿಗೂ ಬೇಡಿಕೆ ಇದೆ. ಅನೇಕ ಮಹಿಳೆಯರು ನಮ್ಮ ಸೇವೆಯನ್ನು ವಿಸ್ತರಿಸುವಂತೆ ಮನವಿಯನ್ನು ಮಾಡುತ್ತಿದ್ದಾರೆ. ಸರ್ವೆಂಟ್ಸ್ ಆಫ್ ಮೇರಿ ಸಭೆಯ ಸಿಸ್ಟರ್'ಗಳು ಈ ಹೆಣ್ಣು ಮಕ್ಕಳ ಕೌಶಲ್ಯಗಳನ್ನು ಸರಳ ರೀತಿಯಲ್ಲಾದರೂ ಉತ್ತಮಪಡಿಸಲು ಎಲ್ಲಾ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂದು ಸಿಸ್ಟರ್ ನೊರೆಟ್ಟಾ ಹೇಳುತ್ತಾರೆ.

"ಸದ್ಯಕ್ಕೆ ನಾವು ಹೊಲಿಗೆ ತರಭೇತಿ ಕೇಂದ್ರವನ್ನು ಆರಂಭಿಸಿದ್ದೇವೆ. ಇದು ಉತ್ತಮವಾಗಿ ನಡೆಯುತ್ತಿದ್ದು, ಇದರ ಜೊತೆಗೆ ಒಂದು ಸಣ್ಣ ಕ್ಷೌರಿಕ ತರಭೇತಿ ಕೇಂದ್ರವನ್ನು ಸ್ಥಾಪಿಸುವಂತೆ ಜನ ನಮ್ಮನ್ನು ವಿನಂತಿಸಿಕೊಳ್ಳುತ್ತಿದ್ದಾರೆ. ಇದನ್ನು ಕಲಿತು ಅವರು ವ್ಯಾಪಾರವನ್ನು ಮಾಡಬಹುದಾಗಿದೆ. ಅವರಿಗೆ ಕಂಪ್ಯೂಟರ್'ಗಳ ಮೂಲ ಜ್ಞಾನದ ಅವಶ್ಯಕತೆಯೂ ಇದೆ. ಇದೆಲ್ಲದರ ಹಿಂದಿನ ಉದ್ದೇಶ ಮಹಿಳೆಯರನ್ನು ಸಬಲೀಕರಣಗೊಳಿಸವ ಮೂಲಕ ಅವರು ತಮ್ಮ ತಮ್ಮ ಕುಟುಂಬಗಳನ್ನು ಸ್ವತಂತ್ರವಾಗಿ ನಡೆಸಲಿ ಎಂಬುದಾಗಿದೆ" ಎಂದು ಅವರು ಮಾಹಿತಿಯನ್ನು ಹಂಚಿಕೊಂಡರು.

ವಿಶ್ವಾಸ ಸಾಕ್ಷರತೆ

"ಶತಮಾನ ಆಚರಣೆಯ ಕೊನೆಯಲ್ಲಿ ಬಿಷಪ್ ಮನ್ಜಿನಿ ಅವರು ಕೇಳಿದ ಪ್ರಶ್ನೆ "ಒಂದು ನೂರು ವರ್ಷ; ಈಗೇನು?" ಬಗ್ಗೆ ಚಿಂತಿಸಲು ನಾನು ಬಯಸುತ್ತೇನೆ. ಅವರೊಂದಿಗೆ ಮಾತನಾಡುತ್ತಾ, ನಾವು ನಮ್ಮನ್ನೇ ಕೇಳಿಕೊಂಡೆವು ಪ್ರಸ್ತುತ ಯಾವ ರೀತಿಯ ಸಾಕ್ಷರತೆ ತುರ್ತಾಗಿದೆ ಎಂದು! ಖಂಡಿತವಾಗಿಯೂ, ಆಫ್ರಿಕಾದಲ್ಲಿ ಹಾಗೂ ಇನ್ನಿತರ ದೇಶಗಳಲ್ಲಿ ಓದುವುದು, ಬರೆಯುವುದು ಹಾಗೂ ಲೆಕ್ಕಿಸುವುದು ಎಂಬ ಮೂಲ ಸಾಕ್ಷರತೆಯ ಮೂಲ ಹಂತಗಳ ಅವಶ್ಯಕತೆ ಇದೆ. ಆದರೆ ನನ್ನ ಪ್ರಕಾರ ಇಡೀ ವಿಶ್ವದಲ್ಲಿ ಕ್ರೈಸ್ತ ವಿಶ್ವಾಸದ ಹಾಗೂ ಅದರ ಜ್ಞಾನದ ಕುರಿತ ಅಸಾಕ್ಷರತೆ ಹೆಚ್ಚಿದೆ. ನಾವು ಸಿಸ್ಟರ್'ಗಳು ನಮ್ಮೆಲ್ಲಾ ಶಕ್ತಿ ಹಾಗೂ ಸಂಪನ್ಮೂಲಗಳನ್ನು ಇದಕ್ಕೆ ವ್ಯಯಿಸಿ, ಧರ್ಮಸಭೆಯು ಹೇಳುವ ನೂತನ ಸುವಾರ್ತಾ ಪ್ರಸಾರ ಕಾರ್ಯವನ್ನು ಆರಂಭಿಸಬೇಕಿದೆ" ಎಂದು ಸಿಸ್ಟರ್ ನೊರೆಟ್ಟಾ ವಿವರವಾಗಿ ಹೇಳಿದರು.

ರಕ್ತಸಾಕ್ಷಿಗಳ ಮಾದರಿ ಉಗಾಂಡದಲ್ಲಿ ಭರವಸೆಯ ಬೆಳಕಾಗಿದೆ

ಉಗಾಂಡದಲ್ಲಿ ಸರ್ವೆಂಟ್ಸ್ ಆಫ್ ಮೇರಿ ಸಭೆಯು ಕನ್ಯಾಸ್ತ್ರೀಗಳಾಗಲು ಬರುವ ಅಭ್ಯರ್ಥಿಗಳ ತರಭೇತಿಯ ಜವಾಬ್ದಾರಿಯನ್ನು ಹೊಂದಿದೆ. ಉಗಾಂಡ ದೇಶದಿಂದ ಮಾತ್ರವಲ್ಲದೆ ದೂರದ ಕಾಂಗೋ ಹಾಗೂ ಕೆನ್ಯಾ ದೇಶದ ಗಡಿಗಳಿಂದ ಕನ್ಯಾಸ್ತ್ರೀಗಳಾಗಲು ಹುಡುಗಿಯರು ಬರುತ್ತಿದ್ದಾರೆ ಎಂದು ಸಿಸ್ಟರ್ ಸುಪೀರಿಯರ್ ಹೇಳುತ್ತಾರೆ.

"ನಾವು ಅಲ್ಲಿ ನಾಲ್ಕೂವರೆ ವರ್ಷಗಳ ಕಾಲ ಇದ್ದೆ. ಅದಕ್ಕೂ ಮುಂಚಿತವಾಗಿ ಹತ್ತೊಂಬತ್ತು ವರ್ಷಗಳು ಅಲ್ಲಿ ಸೇವೆ ಮಾಡಿದ್ದೇನೆ. ಉಗಾಂಡದಲ್ಲಿ ಸುಮಾರು ಇಪ್ಪತ್ತೆರಡು ಜನರು ರಕ್ತಸಾಕ್ಷಿಗಳಾಗಿ ಮಡಿದಿದ್ದಾರೆ. ಅದಕ್ಕೂ ಮುಂಚಿತವಾಗಿಯೂ ಸಹ ಹಲವು ರಕ್ತ ಸಾಕ್ಷಿಗಳಿದ್ದಾರೆ. ಈ ಕಾರಣದಿಂದಲೇ ತಮ್ಮ ಮಕ್ಕಳು ಕನ್ಯಾಸ್ತ್ರೀ ಆಗುತ್ತೇನೆ ಎಂದರೆ ಕುಟುಂಬಗಳಲ್ಲಿ ಜನರು ಸಂತೋಷಪಡುತ್ತಾರೆ. ಇದೆಲ್ಲವೂ ನಮ್ಮ ಪ್ರಭು ಯೇಸುಕ್ರಿಸ್ತರ ಮೇಲೆ ಅವರಿಗೆ ಇರುವ ಪ್ರೀತಿಯ ಸಂಕೇತವಾಗಿದೆ. ಇಡೀ ದೇಶದಲ್ಲಿ ಇದಕ್ಕೆ ಪ್ರೋತ್ಸಾಹವಿದೆ" ಎಂದು ಅವರು ಹೇಳುತ್ತಾರೆ.     

09 April 2024, 12:19