ಗಾಝಾ ರೆಡ್ ಕ್ರಾಸ್ ಕಟ್ಟಡದ ಬಳಿ ದಾಳಿ; 22 ಜನ ಮೃತ್ಯು
ಗಾಝಾದ ರೆಡ್ ಕ್ರಾಸ್ ಕಟ್ಟಡದ ಬಳಿ ನಡೆದ ಹೈ-ಕ್ಯಾಲಿಬರ್ ರಾಕೆಟ್ ದಾಳಿಯ ಪರಿಣಾಮ ಕಟ್ಟಡ ಧ್ವಂಸವಾಗಿದ್ದು, 22 ಜನರು ಮೃತ ಪಟ್ಟಿದ್ದಾರೆ.
ವರದಿ: ನೇಥನ್ ಮೊರ್ಲೆ, ಅಜಯ್ ಕುಮಾರ್
ಗಾಝಾದಲ್ಲಿನ ರೆಡ್ ಕ್ರಾಸ್ ಮಾನವ ನೆರವಿನ ಕಟ್ಟಡದ ಮೇಲೆ ರಾಕೆಟ್ ದಾಳಿ ಉಂಟಾದ ಪರಿಣಾಮ, ಕಟ್ಟಡದ ರಚನೆ ಧ್ವಂಸವಾಗಿದ್ದು, ಸುಮಾರು ಇಪ್ಪತ್ತೆರಡು ಜನರು ಅಸುನೀಗಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ ಇದು ಇಸ್ರೇಲಿ ಆರ್ಟಿಲರಿ ನಡೆಸಿದ ದಾಳಿಯಾಗಿದೆ.
ಶುಕ್ರವಾರ ಮಧ್ಯಾಹ್ನ ತಮ್ಮ ನಿವಾಸ ಹಾಗೂ ಕಚೇರಿಗೆ ಅಣತಿ ದೂರದಲ್ಲಿ ಹೆವಿ ಕ್ಯಾಲಿಬರ್ ಪ್ರಾಜೆಕ್ಟೈಲ್ ದಾಳಿಯಾದ ಕಾರಣ, ಅಪಾರ ಸಾವು ನೋವು ಸಂಭವಿಸಿದೆ ಎಂದು ಹೇಳಿದ್ದಾರೆ.
ಆದರೆ ಇಸ್ರೇಲ್ ಸೇನೆಯ ವಕ್ತಾರರು ನಾವು ನಡೆಸಲೇಬೇಕು ಎಂದು ನಡೆಸಿದ ದಾಳಿ ಇದಲ್ಲ. ನಮಗೆ ಇದು ನಡೆದಿರುವುದು ತಿಳಿದೇ ಇಲ್ಲ. ಈ ಕೃತ್ಯದ ಕುರಿತು ಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆ.
ಸುಮಾರು ೧೪೦ ಕ್ಕೂ ಹೆಚ್ಚು ದೇಶಗಳು ಪ್ಯಾಲೆಸ್ತೀನಿಯನ್ ಸರ್ಕಾರವನ್ನು ಗುರುತಿಸಿವೆ.
22 ಜೂನ್ 2024, 16:05