ಹುಡುಕಿ

ಪೋಪ್ ಫ್ರಾನ್ಸಿಸ್ ಮತ್ತು ಸ್ಲೋವಾಕಿಯಾ ದೇಶದ ಅಧ್ಯಕ್ಷರು ಉಕ್ರೇನ್ ಯುದ್ಧದ ಕುರಿತು ಮಾತುಕತೆ ನಡೆಸಿದ್ದಾರೆ

ಪೋಪ್ ಫ್ರಾನ್ಸಿಸ್ ಅವರು ಸ್ಲೋವಾಕಿಯಾ ದೇಶದ ಅಧ್ಯಕ್ಷರುನ್ನು ಶನಿವಾರ ವ್ಯಾಟಿಕನ್ ನಗರದಲ್ಲಿ ಬರಮಾಡಿಕೊಂಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ಶನಿವಾರ ವ್ಯಾಟಿಕನ್ ನಗರದಲ್ಲಿ ಸ್ಲೋವಾಕಿಯಾ ದೇಶದ ಅಧ್ಯಕ್ಷೆ ಝುಝಾನ ಕಪುತೋವಾ ಅವರನ್ನು ಭೇಟಿ ಮಾಡಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಝುಝಾನ ಕಪುತೋವಾ ಅವರು ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇದೇ ವೇಳೆ ವಿದೇಶಾಂಗ ಸಂಪರ್ಕಗಳ ರಾಜ್ಯ ಅಧೀನ-ಕಾರ್ಯದರ್ಶಿ ಮೊನ್ಸಿಜ್ಞೊರ್ ಮಿರೋಸ್ಲಾವ್ ವಾಚೋವ್ಸ್ಕಿ ಅವರು ಸಹ ಇದ್ದರು.

ವ್ಯಾಟಿಕನ್ ಮಾಧ್ಯಮ ಕಚೇರಿಯ ಹೇಳಿಕೆಯ ಪ್ರಕಾರ ಉಭಯ ನಾಯಕರ ಮಾತುಕತೆಯಲ್ಲಿ ಉಕ್ರೇನ್ ದೇಶದಲ್ಲಿ ನಡೆಯುತ್ತಿರುವ ಯುದ್ಧದ ಕುರಿತೂ ಸಹ ಪ್ರಸ್ತಾಪವಾಗಿದೆ.

ಇದೇ ವೇಳೆ ಅವರು ಇತ್ತೀಚೆಗಷ್ಟೇ ಸ್ಲೋವಾಕಿಯಾ ದೇಶದ ಪ್ರಧಾನಮಂತ್ರಿ ರಾಬರ್ಟ್ ಫೀಕೋ ಅವರ ಮೇಲೆ ಆದ ಹತ್ಯೆಯ ಪ್ರಯತ್ನದ ಕುರಿತೂ ಸಹ ಚರ್ಚೆಯನ್ನು ನಡೆಸಿದ್ದಾರೆ.

01 ಜೂನ್ 2024, 16:42