ಹುಡುಕಿ

Thailand christian unity prayer bangkok Thailand christian unity prayer bangkok  (LiCAS News)

ಥೈಲ್ಯಾಂಡ್‌: ಧರ್ಮಸಭೆಗಳು ಏಕತೆಯ ಬದ್ಧತೆಯನ್ನು ನವೀಕರಿಸುತ್ತವೆ

ಥೈಲ್ಯಾಂಡ್‌ನ ಕಥೋಲಿಕ ಧರ್ಮಸಭೆಗಳು, ಇತರ ಕ್ರೈಸ್ತ ಪಂಗಡಗಳ ಸಹಯೋಗದೊಂದಿಗೆ, ಜನವರಿ 19ರ ಭಾನುವಾರದಂದು ಬ್ಯಾಂಕಾಕ್‌ನ ಅತ್ಯಂತ ಹಳೆಯ ದೇವಾಲಯವಾದ ಪವಿತ್ರ ಜಪಮಾಲೆಯ ದೇವಾಲಯದಲ್ಲಿ (ಹೋಲಿ ರೋಸರಿ ಚರ್ಚ್‌) ಕ್ರೈಸ್ತರ ಏಕತೆಗಾಗಿ ಪ್ರಾರ್ಥನಾ ವಾರದ ವಿಶೇಷ ಸಾರ್ವತ್ರಿಕ (ಎಕ್ಯುಮೆನಿಕಲ್) ಆಚರಣೆಯನ್ನು ಆಯೋಜಿಸಿತು.

ಚೈನಾರಾಂಗ್ ಮೊಂಥಿಯೆನ್ವಿಚಿಯೆಂಚೈ - ಥೈಲ್ಯಾಂಡ್, ಲಿಕಾಸ್‌ ಸುದ್ಧಿ

"ಈ ವಾರ್ಷಿಕ ಕ್ರೈಸ್ತ ಧರ್ಮದವರ ಏಕತೆಗಾಗಿ, ಪ್ರಾರ್ಥನಾ ದಿನವು ವೈವಿಧ್ಯಮಯ ಕ್ರೈಸ್ತ ಪಂಗಡಗಳ ನಡುವೆ ಏಕತೆಯನ್ನು ಬೆಳೆಸುವ ಮಹತ್ವದ ಪ್ರಯತ್ನವಾಗಿದೆ" ಎಂದು ಥೈಲ್ಯಾಂಡ್‌ನ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದ (CBCT) ಅಧ್ಯಕ್ಷ ಹಾಗೂ ಸಾರ್ವತ್ರಿಕತೆ (ಎಕ್ಯುಮೆನಿಸಂ) ಮತ್ತು ಅಂತರಧರ್ಮೀಯ ಸಂವಾದಕ್ಕಾಗಿ ಧರ್ಮಾಧ್ಯಕ್ಷೀಯ(ಎಪಿಸ್ಕೋಪಲ್) ಆಯೋಗಗಳ ಮುಖ್ಯಸ್ಥ, ಧರ್ಮಾಧ್ಯಕ್ಷರಾದ ಜೋಸೆಫ್ ಚುಸಾಕ್ ಸಿರಿಸಟ್ ರವರು ಹೇಳಿದರು.

ಸಾರ್ವತ್ರಿಕ ಪ್ರಾರ್ಥನಾ ಸೇವೆಯಲ್ಲಿ ತಮ್ಮ ಆರಂಭಿಕ ನುಡಿಗಳಲ್ಲಿ, ಧರ್ಮಾಧ್ಯಕ್ಷರಾದ ಸಿರಿಸತ್ ರವರು, "ಎಲ್ಲರೂ ಒಂದಾಗಲಿ ಎಂದು ಪ್ರಾರ್ಥಿಸಿದ ಕ್ರಿಸ್ತರ ಚಿತ್ತವನ್ನು ನಿಷ್ಠೆಯಿಂದ ಪಾಲಿಸುತ್ತಾ, ಧರ್ಮಸಭೆಯ ಗೋಚರ ಏಕತೆಗಾಗಿ ಪ್ರಾರ್ಥಿಸಲು ನಾವು ಇಂದು ಒಟ್ಟುಗೂಡುತ್ತೇವೆ" ಎಂದು ಒತ್ತಿ ಹೇಳಿದರು.

ಜಾಗತಿಕವಾಗಿ, ಜನವರಿ 18 ರಿಂದ 25 ರವರೆಗೆ ಪ್ರಾರ್ಥನಾ ವಾರವನ್ನಾಗಿ ಆಚರಿಸಲಾಗುತ್ತದೆ, ಇದು ಕ್ರೈಸ್ತರಿಗೆ ಆತ್ಮಾವಲೋಕನ ಮತ್ತು ನವೀಕರಣದ ಸಮಯ ಎಂದು ಅವರು ಗಮನಿಸಿದರು.

ಪವಿತ್ರ ಜಪಮಾಲೆಯ ದೇವಾಲಯದಲ್ಲಿ ಕ್ರೈಸ್ತ ಧರ್ಮದವರ ಐಕ್ಯತೆಗಾಗಿ ಪ್ರಾರ್ಥನಾ ವಾರದಲ್ಲಿ ಧರ್ಮಾಧ್ಯಕ್ಷರಾದ ಜೋಸೆಫ್ ರವರ ಸಭೆಯ ನೇತೃತ್ವದಲ್ಲಿ ಪ್ರಾರ್ಥನೆ ನಡೆಯಿತು. “ನಾನೇ ಜಗಜ್ಯೋತಿ” ಎಂಬ ಯೇಸುವಿನ ಮಾತುಗಳನ್ನು ಧ್ಯಾನಿಸುತ್ತಾ, ಅವರು ಕ್ರಿಸ್ತರ ಪ್ರೀತಿ ಮತ್ತು ಸತ್ಯವನ್ನು ಸಾಕಾರಗೊಳಿಸುವಂತೆ, ತಮ್ಮ ಸಮುದಾಯಗಳಲ್ಲಿ ಭರವಸೆ ಮತ್ತು ಏಕತೆಯ ದೀಪಗಳಾಗುವಂತೆ ಭಕ್ತವಿಶ್ವಾಸಿಗಳನ್ನು ಪ್ರೋತ್ಸಾಹಿಸಿದರು.

ನೈಸಿಯಾ 1,700 ವರ್ಷಗಳ ವಾರ್ಷಿಕೋತ್ಸವನ್ನು ಆಚರಿಸುತ್ತಿದೆ
2025ರ ಆಚರಣೆಯು ಕ್ರಿ.ಶ. 325 ರಲ್ಲಿ ನೈಸಿಯಾದಲ್ಲಿ ನಡೆದ ಮೊದಲ ಸಾರ್ವತ್ರಿಕ ಪರಿಷತ್ತಿನ (ಎಕ್ಯುಮೆನಿಕಲ್ ಕೌನ್ಸಿಲ್‌) 1,700ನೇ ವಾರ್ಷಿಕೋತ್ಸವದೊಂದಿಗೆ ಹೊಂದಿಕೆಯಾಗುತ್ತದೆ.

ಈ ಮೈಲಿಗಲ್ಲು ಕ್ರೈಸ್ತರ ವಿಶ್ವಾಸದ ಹಂಚಿಕೆಯನ್ನು, ವಿಶೇಷವಾಗಿ ನೈಸಿಯಾದ ವಿಶ್ವಾಸ ಪ್ರಮಾಣವನ್ನು (Nicene Creed) ವ್ಯಕ್ತಪಡಿಸಿದಂತೆ ಪ್ರತಿಬಿಂಬಿಸಲು ಒಂದು ಅವಕಾಶವನ್ನು ನೀಡುತ್ತದೆ.

"ಪವಿತ್ರ ಜಪಮಾಲೆಯ ದೇವಾಲಯದಲ್ಲಿ ಈ ಸಾರ್ವತ್ರಿಕ ಸಭೆಯನ್ನು ನಡೆಸುವ ನಿರ್ಧಾರವು ಆಳವಾಗಿ ಸಾಂಕೇತಿಕವಾಗಿದೆ" ಎಂದು ಧರ್ಮಸಭೆಯ ಧರ್ಮಗುರು ಪಿಯಾಚಾರ್ಟ್ ಮಕೋರ್ನ್‌ಕನ್ ರವರು ವಿವರಿಸಿದರು.

"ಬ್ಯಾಂಕಾಕ್, ಥೈಲ್ಯಾಂಡ್‌ನ ರಾಜಧಾನಿಯಾಗುವ ಮೊದಲಿನಿಂದಲೂ ಈ ಐತಿಹಾಸಿಕ ದೇವಾಲಯವು ವಿಶ್ವಾಸದ ಒಂದು ಸಮುದಾಯವಾಗಿದೆ."

ವಿಶ್ವಾಸವನ್ನು ಗಾಢಗೊಳಿಸಲು ಕರೆ
ಥೈಲ್ಯಾಂಡ್‌ನ ಕ್ರೈಸ್ತ ಧರ್ಮಸಭೆಯ (ಚರ್ಚ್ ಆಫ್ ಕ್ರೈಸ್ಟ್‌) ಅಧ್ಯಕ್ಷರಾದ ಪೂಜ್ಯರಾದ ಬೂನ್ರಾಟ್ ಬುವಾಯೆನ್ ರವರು ಪ್ರಬೋಧನೆಯನ್ನು ನೀಡುತ್ತಾ, ಈ ವರ್ಷದ ಪ್ರಾರ್ಥನಾ ವಾರದ ವಿಷಯದ ಕುರಿತು ಚಿಂತಿಸಿದರು: “ನೀವು ಇದನ್ನು ವಿಶ್ವಾಸುತ್ತೀರಾ?” ಮಾರ್ಗದರ್ಶಿ ಬೈಬಲ್ ಪಠ್ಯವಾದ ಯೋವಾನ್ನರ 11:17-27, ಅಧ್ಯಾಯದಲ್ಲಿ, ಲಾಜರನ ಮರಣದ ನಂತರ ಯೇಸು ಮತ್ತು ಮಾರ್ಥಾಳ ನಡುವಿನ ಸಂಭಾಷಣೆಯನ್ನು ವಿವರಿಸುತ್ತದೆ.

"ಯೇಸುವು ಮಾರ್ಥಾಳಿಗೆ ಕೇಳಿದ ಪ್ರಶ್ನೆಯು ವಿಶ್ವಾಸಕ್ಕೆ ಒಂದು ಆಳವಾದ ಆಹ್ವಾನವಾಗಿದೆ" ಎಂದು ಪೂಜ್ಯರಾದ ಬುವಾಯೆನ್ ರವರು ಹೇಳಿದರು. "ನಾವು ಪ್ರತಿಯೊಬ್ಬರೂ ಈ ಪ್ರಶ್ನೆಯ ಬಗ್ಗೆ ಧ್ಯಾನಿಸಬೇಕು: 'ನೀವು ಇದನ್ನು ವಿಶ್ವಾಸುತ್ತೀರಾ?' ನಮ್ಮ ಉತ್ತರ ಹೌದು ಎಂದಾದರೆ, ಯಾವ ಸ್ಪಷ್ಟವಾದ ಕ್ರಮಗಳನ್ನು ಅನುಸರಿಸಬೇಕು?"

ಅವರು ಸಭೆಯು ಒಗ್ಗಟ್ಟಿನಿಂದ ಒಟ್ಟಿಗೆ ನಡೆದು ಪರಸ್ಪರ ಕಾಳಜಿ ವಹಿಸುವ ಮೂಲಕ ತಮ್ಮ ವಿಶ್ವಾಸವನ್ನು ಪ್ರದರ್ಶಿಸುವಂತೆ ಸವಾಲು ಹಾಕಿದರು. "ನಾವು ಕ್ರಿಸ್ತರಲ್ಲಿ ಒಂದೇ ದೇಹವಾಗಿದ್ದೇವೆ. ಪರಸ್ಪರ ಮತ್ತು ಕ್ರಿಸ್ತನೊಂದಿಗಿನ ಸಂಪರ್ಕ ನಮಗೆಲ್ಲರಿಗೂ ಅತ್ಯಗತ್ಯ" ಎಂದು ಅವರು ಒತ್ತಿ ಹೇಳಿದರು.

ಏಕತೆಯತ್ತ ಒಂದು ಮಾರ್ಗ
ಯೇಸು ಮತ್ತು ಮಾರ್ಥಾಳ ನಡುವಿನ ಸಂಭಾಷಣೆಯು ವಿಶ್ವಾಸ ಮತ್ತು ಸತ್ಯಕ್ಕಾಗಿ ಮಾನವೀಯತೆಯ ಸಾರ್ವತ್ರಿಕ ಹಂಬಲವನ್ನು ಎತ್ತಿ ತೋರಿಸುತ್ತದೆ ಎಂದು ಪೂಜ್ಯರಾದ ಬುವಾಯೆನ್ ರವರು ಅಲ್ಲಿ ನೆರೆದಿದ್ದ ಸಭೆ ಅಥವಾ ಜನರಿಗೆ ನೆನಪಿಸಿದರು.

ಶುಭಸಂದೇಶದ ಪ್ರೀತಿ ಮತ್ತು ಸತ್ಯತೆಯಿದಿಂದ ಪ್ರೇರಿತರಾಗಿ ಆಳವಾದ ಸಂಪರ್ಕಗಳನ್ನು ಹುಡುಕಲು ಮತ್ತು ಕ್ರಿಸ್ತರ ಶಿಷ್ಯರಾಗಿ ನಿಷ್ಠೆಯಿಂದ ಜೀವಿಸಲು ಅವರು ಕ್ರೈಸ್ತ ಭಕ್ತವಿಶ್ವಾಸಿಗಳನ್ನು ಒತ್ತಾಯಿಸಿದರು.

ಥೈಲ್ಯಾಂಡ್‌ನಲ್ಲಿ ಅರವತ್ತು ವರ್ಷಗಳಿಗೂ ಹೆಚ್ಚು ಕಾಲ ಕ್ರೈಸ್ತರ ಐಕ್ಯತೆಗಾಗಿ ಪ್ರಾರ್ಥನಾ ವಾರವನ್ನು ಆಚರಿಸಲಾಗುತ್ತಿದೆ, ಇದು ಸಂಭಾಷಣೆ, ತಿಳುವಳಿಕೆ ಮತ್ತು ಸಹಕಾರವನ್ನು ಉತ್ತೇಜಿಸಲು ಧರ್ಮಸಭೆಗಳ ಹಂಚಿಕೆಯ ಬದ್ಧತೆಗೆ ಸಾಕ್ಷಿಯಾಗಿದೆ.

ಈ ವರ್ಷದ ಸಭೆಯು ಕ್ರೈಸ್ತರಲ್ಲಿ ಏಕತೆಯ ನಿರಂತರ ಭರವಸೆ, ವಿಶ್ವಾಸ ಮತ್ತು ಪ್ರೀತಿಯಿಂದ ಶುಭಸಂದೇಶವನ್ನು ಜೀವಿಸಲು, ನಡೆಯುತ್ತಿರುವ ಕರೆಯ ಪ್ರಬಲ ಜ್ಞಾಪನೆಯಾಗಿದೆ.

20 ಜನವರಿ 2025, 15:02