ಪೂರ್ವದ ಸುದ್ಧಿ ಸಮಾಚಾರ - ಡಿಸೆಂಬರ್ 11, 2024
ಪೂರ್ವದ ಸುದ್ಧಿ ಸಮಾಚಾರದಿಂದ ಈ ವಾರದ ಸುದ್ದಿ:
ಸಿರಿಯಾದಲ್ಲಿ ಕ್ರೈಸ್ತರ ಭವಿಷ್ಯವೇನು?
ಸೋಮವಾರ, ಡಿಸೆಂಬರ್ 9ರಂದು, ಸಿರಿಯಾದಲ್ಲಿ ಬಶರ್ ಅಲ್-ಅಸ್ಸಾದ್ ರವರ ಆಡಳಿತದ ಪತನದ ಕೆಲವೇ ದಿನಗಳ ನಂತರ, ಅಲೆಪ್ಪೊದ ಕ್ರೈಸ್ತ ಧರ್ಮಸಭೆಗಳ ನಾಯಕರು ಈಗ ಸಿರಿಯಾವನ್ನು ಆಳುತ್ತಿರುವ ಗುಂಪುಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದರು.
ಕ್ಯಾಲ್ಡಿಯನಿನ ಧರ್ಮಾದ್ಯಕ್ಷರಾದ ಆಂಟೊಯಿನ್ ಆಡೊ ಸಭೆಯನ್ನು "ಅತ್ಯಂತ ಧನಾತ್ಮಕ" ಎಂದು ವಿವರಿಸಿದ್ದಾರೆ. ಚರ್ಚೆಗಳು ಸಿರಿಯಾದ ಕ್ರೈಸ್ತರಿಗೆ ಭದ್ರತೆಯ ಭರವಸೆ ಮತ್ತು ಧಾರ್ಮಿಕ ಆಚರಣೆಗಳ ಮುಂದುವರಿಕೆಯಿಂದ ಗುರುತಿಸಲ್ಪಟ್ಟವು.
ಕ್ರೈಸ್ತ ಶಾಲೆಗಳು ತೆರೆದಿರುತ್ತವೆ ಎಂದು ಹೊಸ ಅಧಿಕಾರಿಗಳು ಘೋಷಿಸಿದರು. ಈ ಬೆಳವಣಿಗೆಗಳ ಹೊರತಾಗಿಯೂ, ಮಾನವೀಯ ಸವಾಲುಗಳು ಮುಂದುವರಿಯುತ್ತವೆ ಮತ್ತು ಕ್ರೈಸ್ತರು ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆ ಜಾಗರೂಕರಾಗಿರುತ್ತಾರೆ.
ಇರಾಕ್‌ನಲ್ಲಿ ಮಾರ್ ಬೆಹ್ನಾಮ್ ಮತ್ತು ಸಾರಾರವರ ಹಬ್ಬ
ಮಂಗಳವಾರ, ಡಿಸೆಂಬರ್ 10ರಂದು, ಇರಾಕ್‌ನ ಕರಾಕೋಶ್ ಬಳಿಯ ಖಿದರ್ ಇಲ್ಯಾಸ್‌ನಲ್ಲಿರುವ ಅವರ ಮಠದಲ್ಲಿ ಮಾರ್ ಬೆಹ್ನಾಮ್ ಮತ್ತು ಸಾರಾ ಹಬ್ಬವನ್ನು ಆಚರಿಸಲಾಯಿತು.
ಹೊಸದಾಗಿ ಪುನಃಸ್ಥಾಪಿಸಲಾದ ಕಟ್ಟಡದ ಉದ್ಘಾಟನೆಯೊಂದಿಗೆ ದಿನವು ಪ್ರಾರಂಭವಾಯಿತು, ಮಹಾಧರ್ಮಾಕ್ಷರಾದ ಹನೋ, ಮೊಸುಲ್ ಮತ್ತು ಕರಾಕೋಶ್‌ನ ಸಿರಿಯಾದ ಕಥೋಲಿಕ ಮಹಾಧರ್ಮಾಕ್ಷರು ಮತ್ತು ಅನೇಕ ಯಾಜಕರೊಂದಿಗೆ ಹಾಜರಿದ್ದರು. ಮಹಾಧರ್ಮಾಕ್ಷರಾದ ಹ್ಯಾನೊರವರ ಅಧ್ಯಕ್ಷತೆಯಲ್ಲಿ ದೈವಾರಾಧನೆಯ ವಿಧಿಯನ್ನು ಆಚರಿಸಲಾಯಿತು ಮತ್ತು ಡುಹೋಕ್‌ನ ಅಸಿರಿಯಾದ ಮಹಾಧರ್ಮಾಕ್ಷರಾದ ಮತ್ತು ಕುಲಸಚಿವ ಮಾರ್ ಆವಾ III ರ ಪ್ರತಿನಿಧಿಯಾದ ಮಾರ್ ಅಬ್ರಿಸ್ ರವರು ಸಹ ಈ ದೈವಾರಾಧನೆಯ ವಿಧಿಯಲ್ಲಿ ಭಾಗಿಯಾಗಿದ್ದರು.
ಮಾರ್ ಬೆಹ್ನಮ್ ಮತ್ತು ಸಾರಾರವರ, ಸಹೋದರ ಮತ್ತು ಸಹೋದರಿ, ವಿಶೇಷವಾಗಿ ಇರಾಕ್‌ನಲ್ಲಿ ಗೌರವಕ್ಕೆ ಬದ್ಧರಾಗಿದ್ದಾರೆ. ಅವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಕ್ಕಾಗಿ 4ನೇ ಶತಮಾನದಲ್ಲಿ ಹುತಾತ್ಮರಾದರು ಮತ್ತು ಅವರ ಮರಣದ ಅಲ್ಫಾವಧಿಯಲ್ಲಿಯೇ ಅವರ ಮಠವನ್ನು ನಿರ್ಮಿಸಲಾಯಿತು.
ಸಿರೋ-ಮಲಬಾರ್ ಧರ್ಮಸಭೆಗೆ ಹೊಸ ಕಾರ್ಡಿನಲ್
ಸಿರೋ-ಮಲಬಾರ್ ಧರ್ಮಸಭೆಗೆ ಹೊಸ ಕಾರ್ಡಿನಲ್ ನ್ನು ಹೊಂದಿದೆ. ಕಾರ್ಡಿನಲ್ ಜಾರ್ಜ್ ಜಾಕೋಬ್ ಕೂವಕಾಡ್ ರವರು, ವಿಶ್ವಗುರುರವರ ಪ್ರೇಷಿತ ಪ್ರವಾಸದ ಸಂಯೋಜಕ, ವಿಶ್ವಗುರು ಫ್ರಾನ್ಸಿಸ್ ರವರು ಡಿಸೆಂಬರ್ 7ರಂದು ಈ ಹೊಸ ಕಾರ್ಡಿನಲ್ ಅನ್ನು ಆರ್ಶೀವದಿಸಿದರು.
ಭಾರತದ ಕೇರಳ ರಾಜ್ಯದ ಚೇತಿಪುಳದಲ್ಲಿ ಜನಿಸಿದ ಇವರು 2004ರಲ್ಲಿ ಚಂಗನಾ-ಚೆರ್ರಿ ಮಹಾಧರ್ಮಕ್ಷೇತ್ರದಲ್ಲಿ ಯಾಜಕದೀಕ್ಷೆಗೆ ನೇಮಕಗೊಂಡರು. ಸಂತ ಪೇತ್ರರ ಮಹಾದೇವಾಲಯದಲ್ಲಿ ನಡೆದ ಸಮಾರಂಭದಲ್ಲಿ ಅವರು ಕಾರ್ಡಿನಲ್ ಹುದ್ದೆಯ ಶಿರಸ್ತ್ರಾಣ ಮತ್ತು ಉಂಗುರವನ್ನು ಪಡೆದರು. ಈ ಒಂದು ಕಾರ್ಯಕ್ರಮವು ಎಲ್ಲಾ 21 ಹೊಸ ಕಾರ್ಡಿನಲ್‌ಗಳನ್ನು ಒಟ್ಟುಗೂಡಿಸಿತು.