ಹುಡುಕಿ

POPE-AFRICA/SOUTHSUDAN

ಕೃತಕ ಬುದ್ಧಿಮತ್ತೆಯ ಕುರಿತ ನೀತಿ ಸಂಹಿತೆಯನ್ನು ಅನುಮೋದಿಸಿದ ಕ್ಯಾಂಟರ್ಬರಿ ಮಹಾಧರ್ಮಧ್ಯಕ್ಷ ಜಸ್ಟಿನ್ ವೆಲ್ಬಿ

ಕೃತಕ ಬುದ್ಧಿಮತ್ತೆಯನ್ನು ನೈತಿಕ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಬೇಕು ಎಂಬ ವ್ಯಾಟಿಕನ್ನಿನ ಕರೆಯನ್ನು ಅನುಮೋದಿಸಿದ ಕ್ಯಾಂಟರ್ಬರಿ ಮಹಾಧರ್ಮಧ್ಯಕ್ಷ ಜಸ್ಟಿನ್ ವೇಲ್ಬಿ ಅವರು "ದೇವರು ಉಂಟು ಮಾಡಿರುವ ಮನುಷ್ಯನ ಘನತೆಯನ್ನು ಲಾಭ ಮಾಡಿಕೊಳ್ಳಲು ಉಪಯೋಗಿಸುವುದಿಲ್ಲ" ಎಂಬುದನ್ನು ಖಾತ್ರಿ ಪಡಿಸಬೇಕಿದೆ ಎಂದು ಹೇಳಿದರು.

ವರದಿ: ವ್ಯಾಟಿಕನ್ ನ್ಯೂಸ್

ಕೃತಕ ಬುದ್ಧಿಮತ್ತೆಯನ್ನು ನೈತಿಕ ನೆಲೆಗಟ್ಟಿನಲ್ಲಿ ಅಭಿವೃದ್ಧಿಪಡಿಸಬೇಕು ಎಂಬ ವ್ಯಾಟಿಕಣ್ಣಿನ ಕರೆಯನ್ನು ವಿಶ್ವದ ಅನೇಕ ನಾಯಕರು ಪ್ರಾಧ್ಯಾಪಕರುಗಳು ಹಾಗೂ ಚಿಂತಕರು ಅನುಮೋದಿಸಿದ ಬೆನ್ನಲ್ಲೇ ಕ್ಯಾಂಟರ್ಬರಿ ಮಹಾಧರ್ಮಧ್ಯಕ್ಷ ಜಸ್ಟಿನ್ ವಿಲ್ಬಿ ಅವರು ವ್ಯಾಟಿಕನ್ನಿನ ಈ ಕರೆಯನ್ನು ಅನುಮೋದಿಸಿ ಮಾತನಾಡಿದ್ದಾರೆ.

ಆಂಗ್ಲಿಕನ್ ಕ್ರೈಸ್ತಪಂಥದ ಪರಮೋಚ್ಚ ಗುರುವಾಗಿರುವ ಮಹಾಧರ್ಮಧ್ಯಕ್ಷ ಜಸ್ಟಿನ್ ವೇಲ್ಬಿ, ವ್ಯಾಟಿಕನ್ ನಗರದಲ್ಲಿ ಜೀವನದ ಕುರಿತ ಪೊಂಟಿಫಿಕಲ್ ಆಯೋಗವು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೃತಕ ಬುದ್ಧಿಮತ್ತೆಯ ಕುರಿತ ವ್ಯಾಟಿಕನ್ನಿನ ದಾಖಲೆಗೆ ಸಹಿ ಹಾಕುತ್ತಾ ಮಾತನಾಡಿದ ಇವರು ಪ್ರತಿಯೊಬ್ಬ ಮನುಷ್ಯನ ಘನತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯ ಕುರಿತು, ವ್ಯಾಟಿಕನ್ ರೂಪಿಸಿರುವ ಅಭಿಪ್ರಾಯವೂ ನನ್ನ ಅಭಿಪ್ರಾಯವೂ ಸಹ ಆಗಿದ್ದು ಇದಕ್ಕೆ ನನ್ನ ಸಂಪೂರ್ಣ ಸಹಮತವಿದೆ ಎಂದು ಹೇಳಿದರು.

ಭವಿಷ್ಯದ ಕುರಿತು ನಾವು ಈಗಲೇ ಏನನ್ನು ಹೇಳಲು ಆಗುವುದಿಲ್ಲವಾದರೂ ಸಹ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅನೇಕ ಅಭಿವೃದ್ಧಿಗಳಾಗುತ್ತವೆ. ಇವೆಲ್ಲದಕ್ಕೂ ನಾವು ಸಿದ್ದರಾಗಿರಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ವ್ಯಾಟಿಕನ್ನಿನ ಜೀವನದ ಕುರಿತ ಪೊಂಠಿಪಿಕಲ್ ಆಯೋಗವು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದರ ಉದ್ದೇಶ ನಾನು ಘನತೆಯನ್ನು ಹಾಗೂ ಮನುಷ್ಯತ್ವಕ್ಕೆ ಸಂಬಂಧಿಸಿದ ಹಕ್ಕುಗಳನ್ನು ರಕ್ಷಿಸುವುದಾಗಿದೆ.

01 May 2024, 16:53