ಹುಡುಕಿ

VATICAN JORDAN DIPLOMACY

ಜೋರ್ಡನ್ ದೇಶದ ರಾಜ ದ್ವಿತೀಯ ಅಬ್ದುಲ್ಲ ಅವರನ್ನು ವ್ಯಾಟಿಕನ್ನಿಗೆ ಬರಮಾಡಿಕೊಂಡ ಪೋಪ್ ಫ್ರಾನ್ಸಿಸ್

ಜೋರ್ಡನ್ ದೇಶದ ರಾಜ ದ್ವಿತೀಯ ಅಬ್ದುಲ್ಲ ಅವರನ್ನು ಪೋಪ್ ಫ್ರಾನ್ಸಿಸ್ ಗುರುವಾರ ವ್ಯಾಟಿಕನ್ ನಗರದಲ್ಲಿ ಬರಮಾಡಿಕೊಂಡರು.

ವರದಿ: ಡಿಬೋರ ಕಾಸ್ತೆಲ್ಲಿನೊ ಲೂಬೋ, ಅಜಯ್ ಕುಮಾರ್

ವ್ಯಾಟಿಕನ್ನಿನ ಪ್ರೇಷಿತ ಅರಮನೆಗೆ ಜೋರ್ಡನ್ ದೇಶದ ರಾಜ ದ್ವಿತೀಯ ಅಬ್ದುಲ್ಲಾ ಅವರನ್ನು ಪೋಪ್ ಫ್ರಾನ್ಸಿಸ್ ಸ್ವಾಗತಿಸಿದರು.

ಪವಿತ್ರ ಪೀಠದ ಮಾಧ್ಯಮ ಕಚೇರಿಯ ನಿರ್ದೇಶಕ ಮತ್ತಿಯೋ ಬ್ರೂನಿ "ಉಭಯ ನಾಯಕರುಗಳ ನಡುವೆ ಫಲಪ್ರದವಾದ ಸಂವಾದ ನಡೆಯಿತು. ಇದು ಸುಮಾರು 20 ನಿಮಿಷಗಳ ಕಾಲ ನಡೆಯಿತು" ಎಂದು ಪತ್ರಕರ್ತರಿಗೆ ಮಾಹಿತಿಯನ್ನು ನೀಡಿದರು.

ತಮ್ಮ ಮಾತುಕತೆಯ ನಂತರ ಉಭಯ ಪಕ್ಷಗಳು ಪರಸ್ಪರ ಸಾಂಪ್ರದಾಯಿಕ ಉಡುಗೆಗಳನ್ನು ವಿನಿಮಯ ಮಾಡಿಕೊಂಡರು.

ಪೋಪ್ ಫ್ರಾನ್ಸಿಸ್ ಮೊಸಾಯಿಕ್ ಶೈಲಿಯಲ್ಲಿ ಸಿದ್ಧಪಡಿಸಿದ "ಪೇಪಲ್ ಬ್ಲೆಸಿಂಗ್" ಪತ್ರವನ್ನು ನೀಡಿದರೆ, ಇದಕ್ಕೆ ಬದಲಾಗಿ ಜೋರ್ಡನ್ ದೇಶದ ರಾಜ ಅರೇಬಿಕ್ ಪತ್ರಗಳಿಂದ ಮಾಡಿರುವ ಪ್ರತಿಮೆಯನ್ನು ನೀಡಿದರು.

ಜೋರ್ಡನ್ ದೇಶದ ರಾಜ ದ್ವಿತೀಯ ಅಬ್ದುಲ್ಲ ಅವರಿಗೆ ಪೋಪ್ ಫ್ರಾನ್ಸಿಸ್ 2014 ರಿಂದ ಪರಿಚಿತರಾಗಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ವಿಶ್ವಗುರುವಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಪವಿತ್ರ ನಾಡಿಗೆ ಪ್ರೇಷಿತ ಭೇಟಿಯನ್ನು ನೀಡಿದ ಸಂದರ್ಭದಲ್ಲಿ, ಜೋರ್ಡನ್ ದೇಶದ ರಾಜಧಾನಿ ಅಮ್ಮಾನ್ ನಗರಕ್ಕೆ ಭೇಟಿ ನೀಡಿದ್ದರು. ಈ ವೇಳೆ ರಾಜ ದ್ವಿತೀಯ ಅಬ್ದುಲ್ಲಾ ಅವರನ್ನು ಭೇಟಿ ಮಾಡಿದ್ದರು.

02 May 2024, 18:48