ಹುಡುಕಿ

A Palestinian family returns to Khan Younis after Israeli forces withdrew from the city, southern Gaza Strip A Palestinian family returns to Khan Younis after Israeli forces withdrew from the city, southern Gaza Strip 

ಇಸ್ರೇಲ್ ಸೇನೆ ನಿರ್ಗಮನದ ಬೆನ್ನಲ್ಲೇ ಖಾನ್ ಯೂನಿಸ್ ನಗರಕ್ಕೆ ಹಿಂದಿರುಗುತ್ತಿರುವ ಪ್ಯಾಲೆಸ್ತೀನಿಯರು

ಇಸ್ರೇಲ್ ಸೇನೆಯು ತನ್ನ ಸೈನಿಕರನ್ನು ದಕ್ಷಿಣ ಗಾಜಾದ ಖಾನ್ ಯೂನಿಸ್ ನಗರದಿಂದ ಹೊರ ತೆಗೆಯುತ್ತಿದೆ ಎಂದು ಹೇಳಿದ ಬೆನ್ನಲ್ಲೇ, ಪ್ಯಾಲೆಸ್ತೀನಿಯರು ವಿನಾಶವಾಗಿರುವ ಖಾನ್ ಯೂನಿಸ್ ನಗರಕ್ಕೆ ಬರುತ್ತಿದ್ದಾರೆ.

ವರದಿ: ನೇಥನ್ ಮೋರ್ಲೆ, ಅಜಯ್ ಕುಮಾರ್

ಖಾನ್ ಯೂನಿಸ್ ನಗರವು ಈವರೆಗೂ ಇಸ್ರೇಲ್ ದಾಳಿಯ ಕೇಂದ್ರಬಿಂದುವಾಗಿತ್ತು. ಪ್ರಸ್ತುತ ಇಲ್ಲಿ ಎಲ್ಲವೂ ನಾಶವಾಗಿದ್ದು, ಮೂಲಸೌಕರ್ಯ ಎಂಬುದೇ ಉಳಿದಿಲ್ಲ.

ಅದಾಗ್ಯೂ, ದೊಡ್ಡ ಮಟ್ಟದ ಸೇನೆಯು ಗಾಜಾದಲ್ಲಿ ಇರಲಿದೆ. ಇಸ್ರೇಲ್ ರಕ್ಷಣಾ ಮಂತ್ರಿ ಹೇಳುವಂತೆ ಮುಂದಿನ ಕಾರ್ಯಾಚರಣೆಯನ್ನು ಯೋಜಿಸುವ ಭಾಗವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಹೀಗಾಗಿ, ಈ ನಡೆಯನ್ನು ತಜ್ಞರು ಒಂದು ರೀತಿಯ "ಕಾರ್ಯಾಚರಣೆ" ಎಂದು ಹೇಳುವ ಮೂಲಕ ಇದು ಯುದ್ಧ ಮುಗಿಯುವ ಸೂಚನೆಯಲ್ಲ ಎಂದು ಹೇಳಿದ್ದಾರೆ. 

ಶಾಂತಿ ಮಾತುಕತೆಗಳು

ಗಾಜಾದಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಕುರಿತು ಮಾತುಕತೆಗಳು ನಡೆದಿದೆ ಎಂಬ ಈಜಿಪ್ಟ್ ಮಾಧ್ಯಮ ವರದಿಗಳನ್ನು ಇಸ್ರೇಲಿ ಅಧಿಕಾರಿಗಳು ತಳ್ಳಿಹಾಕಿದ್ದಾರೆ. 

ಇಸ್ರೇಲ್ ಮತ್ತು ಹಮಾಸ್ ತಂಡಗಳು ಕದನವಿರಾಮದ ಕುರಿತಾಗಿ ಚರ್ಚಿಸಲು ಈಜಿಪ್ಟಿನ ಕೈರೋದಲ್ಲಿ ಸಂಧಿಸಿ, ಮಾತುಕತೆಗಳನ್ನು ನಡೆಸಿವೆ.

ಈ ನಡುವೆ ಹೊಸದಾಗಿ ಬಿಡುಗಡೆಯಾಗಿರುವ ಅಂಕಿಅಂಶಗಳು ಕಳವಳಕಾರಿ ಮಾಹಿತಿಯನ್ನು ನೀಡುತ್ತವೆ. ಈ ಅಂಕಿಅಂಶಗಳ ಪ್ರಕಾರ ಕಳೆದ ಆರು ತಿಂಗಳಲ್ಲಿ ಗಾಜಾದಲ್ಲಿ 13,800 ಮಕ್ಕಳು ಅಸುನೀಗಿದ್ದಾರೆ ಹಾಗೂ 12,000 ಮಕ್ಕಳು ಗಾಯಗೊಂಡಿದ್ದಾರೆ. ಯೂನಿಸೆಫ್ ವರದಿಯ ಪ್ರಕಾರ ಕನಿಷ್ಟ 1000 ಮಕ್ಕಳು ತಮ್ಮ ಎರಡು ಕಾಲುಗಳಲ್ಲಿ ಒಂದನ್ನು ಕಳೆದುಕೊಂಡಿದ್ದಾರೆ. 

08 April 2024, 19:25