ಹುಡುಕಿ

Pope Francis visits Portugal

"ಪರಿವರ್ತನಾತ್ಮಕ ಸಂವಾದ": ಪೋರ್ಚುಗಲ್ ದೇಶದಲ್ಲಿ ಸಭೆ ಸೇರಲಿರುವ ರಾಜಕೀಯ ಹಾಗೂ ಧಾರ್ಮಿಕ ನಾಯಕರು

ಪೋರ್ಚುಗಲ್ ನಗರದಲ್ಲಿ ಉನ್ನತ ಮಟ್ಟದ ರಾಜಕೀಯ ಹಾಗೂ ಧಾರ್ಮಿಕ ನಾಯಕರು ಜಾಗತಿಕ ಶಾಂತಿ ಸ್ಥಾಪನೆ, ಹವಾಮಾನ ಬದಲಾವಣೆ ಹಾಗೂ ನಗರ ಪರಿಸರದ ಕುರಿತು ಸಮಾವೇಶವನ್ನು ಹಮ್ಮಿಕೊಂಡಿರುವುದನ್ನು ವರದಿ ಮಾಡಲು ವ್ಯಾಟಿಕನ್ ನ್ಯೂಸ್ ಲಿಸ್ಬನ್ ನಗರಕ್ಕೆ ತಲುಪಿದೆ.

ವರದಿ: ಜೋಸೆಫ್ ಟಲ್ಲೋಚ್-ಲಿಸ್ಬನ್

ಈ ವಾರ ಲಿಸ್ಬನ್ ನಗರದಲ್ಲಿ ವಿಶ್ವದ ಪ್ರಮುಖ ರಾಜಕೀಯ ಹಾಗೂ ಧಾರ್ಮಿಕ ನಾಯಕರು ಶಾಂತಿ ಸಮಾವೇಶಕ್ಕೆಂದು ಸಭೆ ಸೇರಲಿದ್ದಾರೆ. ಇದರಲ್ಲಿ ಕಾನ್ಸ್'ಟಾಂಟಿನೋಪಲ್ ಪೇಟ್ರಿಯಾರ್ಕ್ಕಅವರು ಹಾಗೂ ಮೆಕ್ಕಾದ ಗ್ರಾಂಡ್ ಇಮಾಮ್ ಅವರೂ ಸಹ ಭಾಗವಹಿಸಲಿದ್ದಾರೆ. 

ಈ ಧಾರ್ಮಿಕ ನಾಯಕರುಗಳ ಜೊತೆಗೆ ಯುರೋಪಿಯನ್ ಯೂನಿಯನ್, ಆಫ‌್ರಿಕಾ ಯೂನಿಯನ್, ವಿಶ್ವಸಂಸ್ಥೆ ಸೇರಿದಂತೆ ವಿವಿಧ ದೇಶದ ರಾಜಕೀಯ ನಾಯಕರೂ ಸಹ ಆಗಮಿಸಿ, ಭಾಗವಹಿಸಲಿದ್ದಾರೆ. 

ಕಿಂಗ್ ಅಬ್ದುಲ್ಲಾ ಬಿನ್ ಅಬ್ದುಲಾಝೀಜ್ ಇಂಟರ್ನಾಷ್ಯನಲ್ ಸೆಂಟರ್ ಫಾರ್ ಇಂಟರ್-ರಿಲೀಜಿಯಸ್ ಆಂಡ್ ಇಂಟರ್ಕಲ್ಚರಲ್ ಸೆಂಟರ್ ಈ ಸಮಾವೇಶವನ್ನು ಆಯೋಜಿಸಿದೆ. ಇದನ್ನು 2011 ರಲ್ಲಿ ಸ್ಪೇನ್, ಸೌದಿ ಅರೇಬಿಯಾ, ಆಸ್ಟ್ರೀಯಾ ದೇಶಗಳು ಇದರ ಸ್ಥಾಪಕ ದೇಶಗಳಾಗಿ ಇದನ್ನು ಆರಂಭಿಸಲಾಯಿತು. ವ್ಯಾಟಿಕನ್ ಪವಿತ್ರ ಪೀಠವು ಇದರ ವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದೆ. 

ಇದರ ಇತ್ತೀಚಿನ ಶೀರ್ಷಿಕೆ "ಪರಿವರ್ತನಾತ್ಮಕ ಸಂವಾದ: ಬದಲಾಗುತ್ತಿರುವ ಜಗತ್ತಿನಲ್ಲಿ ಶಾಂತಿಗಾಗಿ ಮೈತ್ರಿಗಳನ್ನು ಮಾಡಿಕೊಳ್ಳುವುದು" ಎಂಬುದಾಗಿದೆ. ಇದು ಇದೇ ತಿಂಗಳ 14 ರಿಂದ 16 ರವರೆಗೆ ನಡೆಯಲಿದೆ.

ಇದರಲ್ಲಿ ಕ್ರೈಸ್ತ, ಪ್ರಾಟೆಸ್ಟೆಂಟ್, ಹಿಂದೂ, ಮುಸಲ್ಮಾನ, ಪಾರ್ಸಿ, ಸಿಖ್, ಬುದ್ಧಿಸ್ಟ್ ಸೇರಿದಂತೆ ಇನ್ನೂ ಅನೇಕ ಧಾರ್ಮಿಕ ಪಂಥಗಳ ಧಾರ್ಮಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ವಿವಿಧ ದೇಶಗಳ ಪ್ರಮುಖ ರಾಜಕೀಯ ನಾಯಕರೂ ಸಹ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ. 

14 May 2024, 17:57