ಹುಡುಕಿ

UKRAINE-RUSSIA-CONFLICT-WAR-PRISONERS UKRAINE-RUSSIA-CONFLICT-WAR-PRISONERS 

ಪೋಪ್ ಫ್ರಾನ್ಸಿಸ್: ರಷ್ಯಾ ಮತ್ತು ಉಕ್ರೇನ್ ಯುದ್ಧ ಖೈದಿಗಳ ಬಿಡುಗಡೆಗೆ ಮಧ್ಯಸ್ಥಿಕೆ ವಹಿಸಲು ಪವಿತ್ರಪೀಠ ಸಿದ್ಧವಿವೆ

ಪೋಪ್ ಫ್ರಾನ್ಸಿಸ್ ಅವರು ರಷ್ಯಾ ಹಾಗೂ ಉಕ್ರೇನ್ ದೇಶದ ಯುದ್ಧ ಖೈದಿಗಳನ್ನು ಬಿಡುಗಡೆಗೊಳಿಸುವಂತೆ ಮತ್ತೆ ಒತ್ತಾಯಿಸಿದ್ದಾರೆ ಹಾಗೂ ರಷ್ಯಾ ಮತ್ತು ಉಕ್ರೇನ್ ಯುದ್ಧ ಖೈದಿಗಳ ಬಿಡುಗಡೆಗೆ ಮಧ್ಯಸ್ಥಿಕೆ ವಹಿಸಲು ಪವಿತ್ರಪೀಠ ಸಿದ್ಧವಿವೆ ಎಂದೂ ಸ

ವರದಿ: ಲಿಂಡಾ ಬೊರ್ಡೋನಿ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ರಷ್ಯಾ ಹಾಗೂ ಉಕ್ರೇನ್ ದೇಶದ ಯುದ್ಧ ಖೈದಿಗಳನ್ನು ಬಿಡುಗಡೆಗೊಳಿಸುವಂತೆ ಮತ್ತೆ ಒತ್ತಾಯಿಸಿದ್ದಾರೆ ಹಾಗೂ ರಷ್ಯಾ ಮತ್ತು ಉಕ್ರೇನ್ ಯುದ್ಧ ಖೈದಿಗಳ ಬಿಡುಗಡೆಗೆ ಮಧ್ಯಸ್ಥಿಕೆ ವಹಿಸಲು ಪವಿತ್ರಪೀಠ ಸಿದ್ಧವಿವೆ ಎಂದೂ ಸಹ ಹೇಳಿದ್ದಾರೆ.

ಸ್ವರ್ಗಾರೋಹಣ ಭಾನುವಾರದಂದು ತಮ್ಮ ರೆಜೀನಾ ಚೇಲಿ ಪ್ರಾರ್ಥನೆಯಲ್ಲಿ ಮಾತನಾಡುತ್ತಾ ಪೋಪ್ ಫ್ರಾನ್ಸಿಸ್, ನಾನು ಮತ್ತೆ ಈ ವಿಶೇಷ ದಿನವಾದ ಸ್ವರ್ಗಾರೋಹಣ ಭಾನುವಾರದಂದು ಯುದ್ಧ ಖೈದಿಗಳನ್ನು ಪರಸ್ಪರ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದೇನೆ ಏಕೆಂದರೆ ಪ್ರಭು ನಾವೆಲ್ಲರೂ ಸ್ವತಂತ್ರರಾಗಿರಲು ಬಯಸುತ್ತಾರೆ ಎಂದು ಹೇಳಿದ್ದಾರೆ.

ಯುದ್ಧ ಖೈದಿಗಳ ಪರಸ್ಪರ ಬಿಡುಗಡೆಗೆ ಮಧ್ಯಸ್ಥಿಕೆಯನ್ನು ವಹಿಸಲಿ ಎಲ್ಲಾ ರೀತಿಯ ನೆರವು ಹಾಗೂ ಮಧ್ಯಸ್ಥಿಕೆಯನ್ನು ವಹಿಸಲು ಪವಿತ್ರಪೀಠದ ಎಲ್ಲಾ ಅಧಿಕಾರಿಗಳು ಸಿದ್ಧರಿದ್ದಾರೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.

ಇದೇ ರೀತಿ, ಯುದ್ಧಗ್ರಸ್ಥ ದೇಶಗಳಿಗಾಗಿ ಎಲ್ಲರೂ ಸಹ ಎಡೆಬಿಡದೆ ಪ್ರಾರ್ಥಿಸಬೇಕೆಂದು ಎಲ್ಲಾ ಕ್ರೈಸ್ತರಿಗೆ ಕರೆ ನೀಡಿದ್ದಾರೆ.

ಯುದ್ಧ ಆರಂಭವಾದಾಗಿನಿಂದ ಈವರೆಗೂ ಸುಮಾರು 50 ಬಾರಿ ಯುದ್ಧ ಖೈದಿಗಳ ವಿನಿಮಯ ನಡೆದಿದ್ದು, ರಷ್ಯಾ ಹಾಗೂ ಉಕ್ರೇನ್ ದೇಶಗಳು ಸಾವಿರಾರು ಖೈದಿಗಳನ್ನು ವಿನಿಮಯ ಮಾಡಿಕೊಂಡಿವೆ.

12 May 2024, 18:06