ಹುಡುಕಿ

2024.04.28 Visita pastorale a Venezia -Trasferimento e Incontro con i Giovani 2024.04.28 Visita pastorale a Venezia -Trasferimento e Incontro con i Giovani  (VATICAN MEDIA Divisione Foto)

ಪೋಪ್: ನಿಮ್ಮ ಫೋನುಗಳನ್ನು ಬಿಟ್ಟು ಇತರರಿಗೆ ಗಮನವನ್ನು ನೀಡಿರಿ

ಫೋಪ್ ಫ್ರಾನ್ಸಿಸ್ ಅವರು ಇಟಲಿಯ ವೆನಿಸ್ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯುವ ಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಾ, ಫೋನುಗಳಲ್ಲಿ ಮುಳುಗಿರುವುದನ್ನು ಬಿಟ್ಟು, ಇತರರಿಗೆ ನಾವು ಹೇಗೆ ಸಹಾಯ ಮಾಡಬಹುದು ಹಾಗೂ ಅವರಿಗೆ ನಮ್ಮನ್ನೇ ಹೇಗೆ ಕೊಡುಗೆಯನ್ನಾಗಿ ನೀಡಬಹುದು ಎಂಬುದರ ಕುರಿತು ಚಿಂತಿಸುವಂತೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ನಾವು ಒಬ್ಬಂಟಿ ಅಥವಾ ನಮ್ಮನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗುತ್ತದೆ ಎಂದು ದೂರುವುದನ್ನು ಬಿಟ್ಟು ಇತರರಿಗೆ ಗಮನವನ್ನು ನೀಡುವಂತೆ ಪ್ರೋತ್ಸಾಹಿಸಿದರು.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ಇಟಲಿ ದೇಶದ ವೆನಿಸ್ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಆರೋಗ್ಯ ಮಾತೆಯ ಬಸಿಲಿಕಾ ದೇವಾಲಯದ ಆವರಣದಲ್ಲಿ ಯುವ ಸಮೂಹದೊಂದಿಗೆ ಮಾತುಕತೆಯನ್ನು ನಡೆಸಿದರು. "ನಾವೆಲ್ಲರೂ ದೇವರ ಪ್ರಿಯ ಮಕ್ಕಳಾಗುವ ವರದಾನವನ್ನು ಪಡೆದುಕೊಂಡಿದ್ದೇವೆ. ಆದುದರಿಂದ, ಈ ಸಂತೋಷವನ್ನು ಇತರರೊಂದಿಗೆ ಹಂಚಿಕೊಳ್ಳಲು ಕರೆಯನ್ನು ಹೊಂದಿದ್ದೇವೆ" ಎಂದು ಹೇಳಿದರು.

"ನಾವೆಲ್ಲರೂ ಇಂದು ಇಲ್ಲಿ ನೆರೆದಿದ್ದೇವೆ. ನಾವು ಯುವ ದೇವರಾದ ಏಸುಕ್ರಿಸ್ತರ ನಾಮದಲ್ಲಿ ಸಂತೋಷ ಪಡಬೇಕು. ಏಸುಕ್ರಿಸ್ತರು ಯುವಜನತೆಯನ್ನು ಹೆಚ್ಚಾಗಿ ಪ್ರೀತಿಸುತ್ತಾರೆ" ಎಂದು ಪೋಪ್ ಫ್ರಾನ್ಸಿಸ್ ನುಡಿದರು.

ಫೋನುಗಳಲ್ಲಿ ಮುಳುಗಿರುವುದನ್ನು ಬಿಟ್ಟು, ಇತರರಿಗೆ ನಾವು ಹೇಗೆ ಸಹಾಯ ಮಾಡಬಹುದು ಹಾಗೂ ಅವರಿಗೆ ನಮ್ಮನ್ನೇ ಹೇಗೆ ಕೊಡುಗೆಯನ್ನಾಗಿ ನೀಡಬಹುದು ಎಂಬುದರ ಕುರಿತು ಚಿಂತಿಸುವಂತೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ನಾವು ಒಬ್ಬಂಟಿ ಅಥವಾ ನಮ್ಮನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗುತ್ತದೆ ಎಂದು ದೂರುವುದನ್ನು ಬಿಟ್ಟು ಇತರರಿಗೆ ಗಮನವನ್ನು ನೀಡುವಂತೆ ಪ್ರೋತ್ಸಾಹಿಸಿದರು.

ಬೆಳಿಗ್ಗೆ ಎದ್ದ ತಕ್ಷಣ ದೇವರ ಚಿತ್ರವನ್ನು ನೋಡಿ ಈ ಪ್ರಾರ್ಥನೆಯನ್ನು ಹೇಳಿರಿ: ಪ್ರಭುವೇ, ನನ್ನ ಜೀವನಕ್ಕಾಗಿ ನಾನು ನಿಮಗೆ ಧನ್ಯವಾದಗಳು ತಿಳಿಸುತ್ತೇನೆ. ನನ್ನ ಜೀವನವನ್ನು ಹೆಚ್ಚಾಗಿ ಪ್ರೀತಿಸುವಂತೆ ಅನುಗ್ರಹಿಸಿರಿ. ನೀನೇ ನನ್ನ ಜೀವನವಾಗಿತ್ತೀರಿ. ಈ ಪ್ರಾರ್ಥನೆಯನ್ನು ಹೇಳುವ ಮೂಲಕ ನಿಮ್ಮ ದಿನವನ್ನು ದೇವರಿಗೆ ಕೃತಜ್ಞತಾ ಸ್ತೋತ್ರವನ್ನು ಸಲ್ಲಿಸುತ್ತಾ ಆರಂಭಿಸಿರಿ ಎಂದು ಯುವ ಜನತೆಗೆ ಪೋಪ್ ಫ್ರಾನ್ಸಿಸ್ ಕರೆ ನೀಡಿದರು.

ಹೆಚ್ಚಿನ ಸಮಯ ಮೊಬೈಲ್ ಫೋನ್ಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಿಡಿಯೋ ಗೇಮ್ ಗಳನ್ನು ಆಡುವ ಮೂಲಕ ಸಮಯ ಕಳೆಯುವುದರಿಂದ ಆಚೆಗೆ ಬಂದು ಅಕ್ಕಪಕ್ಕದಲ್ಲಿರುವ ಜನತೆಗೆ ಅಥವಾ ಸಹೋದರ ಸಹೋದರಿಯರಿಗೆ ನೆರವಾಗಲು ಪ್ರಯತ್ನಿಸಬೇಕು. ಒಮ್ಮೆ ನೀವು ಹೇಳಬಹುದು ನನ್ನ ಅಕ್ಕ ಪಕ್ಕದಲ್ಲಿರುವವರೆಲ್ಲರೂ ಅವರ ಪಾಡಿಗೆ ಅವರು ಮೊಬೈಲ್ ಫೋನಿನಲ್ಲಿ ಬಿಜಿಯಾಗಿದ್ದಾರೆ. ನಮ್ಮೊಡನೆ ಸನ್ಮಾನಿಸಲು ಅವರಿಗೆ ಸಮಯವಿಲ್ಲ. ಅಂತಹ ಸಂದರ್ಭದಲ್ಲಿ ನಾನು ನಿಮಗೆ ಹೇಳುವುದೇನೆಂದರೆ, ಬದುಕಿನ ನಿಜವಾದ ವಿರುದ್ಧ ಹೋರಾಡಬೇಕು. ಎಡಬಿಡದೆ ಪ್ರಯತ್ನವನ್ನು ಮಾಡಬೇಕು. ಆ ಮೂಲಕ ಪ್ರಭುವಿನ ತಾಳ್ಮೆಯನ್ನು ನಮ್ಮ ಜೀವನದಲ್ಲಿ ರೂಪಿಸಿಕೊಳ್ಳಬೇಕು ಎಂದು ಅವರು ಯುವ ಜನತೆಗೆ ಕಿವಿ ಮಾತನ್ನು ಹೇಳಿದರು.

29 April 2024, 04:03