ಹುಡುಕಿ

Il Papa prega per la pace, 'cresca la volont� di dialogo' Il Papa prega per la pace, 'cresca la volont� di dialogo'  (ANSA)

ವೆನಿಸ್ ನಗರದಲ್ಲಿ ಬಲಿಪೂಜೆ ಅರ್ಪಿಸಿದ ಪೋಪ್ ಫ್ರಾನ್ಸಿಸ್; ಒಳಗೊಳ್ಳುವಿಕೆ ಮತ್ತು ಸತ್ಕಾರಕ್ಕಾಗಿ ಕರೆ

ಇಟಲಿ ದೇಶದ ವೆನಿಸ್ ನಗರದ ಸೇಂಟ್ ಮಾರ್ಕ್ಸ್ ಸ್ಕ್ವೇರ್ನಲ್ಲಿ ಭಾನುವಾರ ಬಲಿಪೂಜೆಯನ್ನು ಅರ್ಪಿಸುತ್ತಾ, ಒಳಗೊಳ್ಳುವಿಕೆ, ನಮ್ಮ ಸಾಮಾನ್ಯ ಮನೆಯ ಕುರಿತು ಆರೈಕೆ, ಹಾಗೂ ಎಲ್ಲರಿಗೂ ದೊರಕುವಂತಹ ಸೌಂದರ್ಯದ ಕುರಿತು ಮಾತನಾಡಿದರು.

ವರದಿ: ಲಿಂಡಾ ಬೋರ್ಡೋನಿ, ಅಜಯ್ ಕುಮಾರ್

"ಸೋದರತೆಯ ಸಂಕೇತವಾಗಿ, ನಮ್ಮ ಸಾಮಾನ್ಯ ಮನೆಯ ಆರೈಕೆಗಾಗಿ, ವೆನಿಸ್ ನಗರವು ಎಲ್ಲರಿಗೂ ದೊರಕುವಂತಹ ಸೌಂದರ್ಯದ ಸಂಕೇತವಾಗಲು ಕರೆ ಹೊಂದಿದೆ" ಎಂದು ಪೋಪ್ ಫ್ರಾನ್ಸಿಸ್ ಇಟಲಿ ದೇಶದ ವೆನಿಸ್ ನಗರದ ಸೇಂಟ್ ಮಾರ್ಕ್ಸ್ ಸ್ಕ್ವೇರ್ನಲ್ಲಿ ಭಾನುವಾರ ಬಲಿಪೂಜೆಯನ್ನು ಅರ್ಪಿಸುತ್ತಾ ನೆರೆದಿದ್ದ 10,500 ಜನರಿಗೆ ಈ ಮಾತನ್ನು ಹೇಳಿದರು. 

ವೆನಿಸ್ ನಗರಕ್ಕೆ ಅರ್ಧ ದಿನದ ಭೇಟಿಯನ್ನು ನೀಡಿದ ಪೋಪ್ ಫ್ರಾನ್ಸಿಸ್, ವಿಶ್ವವಿಖ್ಯಾತ ಸೈಂಟ್ ಮಾರ್ಕ್ಸ್ ಸ್ಕ್ವೇರ್'ನಲ್ಲಿ ಬಲಿ ಪೂಜೆಯನ್ನು ಅರ್ಪಿಸಿ, "ಕ್ರಿಸ್ತನ ಪ್ರೀತಿಯಲ್ಲಿ ಒಂದಾಗಿರುವುದು" ಎಂಬ ಶೀರ್ಷಿಕೆಯ ಕುರಿತು ತಮ್ಮ ಚಿಂತನೆಯನ್ನು ಹಂಚಿಕೊಂಡರು.

ಕ್ರಿಸ್ತನ ಪ್ರೀತಿಯಲ್ಲಿ ಒಂದಾಗಿರುವ ಮೂಲಕ ಮಾತ್ರವೇ ನಾವು ಶುಭ ಸಂದೇಶದ ಫಲಗಳನ್ನು ಈ ಜಗತ್ತಿಗೆ ನೀಡಬಹುದು ಎಂದು ಪೋಪ್ ಫ್ರಾನ್ಸಿಸ್ ಹೇಳಿದರು. ನ್ಯಾಯ, ನೀತಿ, ಶಾಂತಿ, ಐಕ್ಯತೆ ಎಂಬ ಫಲಗಳ ಮೂಲಕ ನಮ್ಮ ಸಾಮಾನ್ಯ ಮನೆಯಾಗಿರುವ ಪ್ರಕೃತಿಯನ್ನು ಹಾಗೂ ಮಾನವ ಪರಂಪರೆಯನ್ನು ನಾವು ರಕ್ಷಿಸಬಹುದು ಎಂದು ಹೇಳಿದರು.

ಸಂತ ಯೊವನ್ನರ ಶುಭ ಸಂದೇಶದಲ್ಲಿ ಯೇಸುಕ್ರಿಸ್ತರು ಹೇಳುವ ನಾನೇ ನಿಜವಾದ ದ್ರಾಕ್ಷ ಬಳ್ಳಿ ನೀವೆಲ್ಲರೂ ನನ್ನ ಕವಲುಗಳು ಎಂಬ ವಾಕ್ಯಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ಮಾತನಾಡಿದ ಅವರು ನಾನು ನಿಮ್ಮಲ್ಲಿ ನೆಲೆಗೊಳ್ಳುವಂತೆ ನೀವು ಸಹ ನನ್ನಲ್ಲಿ ನೆಲೆಗೊಳ್ಳಿರಿ. ಹೀಗೆ ನೆಲೆಗೊಳ್ಳುವ ಮೂಲಕ ಕ್ರಿಸ್ತರೊಂದಿಗಿನ ಸಂಪರ್ಕವನ್ನು ಎಂದಿಗೂ ಕಡಿತಗೊಳಿಸದಂತೆ ಪೋಪ್ ಫ್ರಾನ್ಸಿಸ್ ಭಕ್ತಾದಿಗಳಿಗೆ ಕರೆ ನೀಡಿದರು. ದ್ರಾಕ್ಷಾ ತೋಟಕ್ಕೆ ವಿಶೇಷವಾದ ಆರೈಕೆ ಬೇಕಾದಂತೆ ನಮಗೂ ಸಹ ದೇವರ ಪ್ರೀತಿಯ ಆರೈಕೆಯ ಅಗತ್ಯವಿದೆ ಎಂದು ಹೇಳಿದರು.

ವೆನಿಸ್ ನಗರದ ಕುರಿತು ಹಾಗೂ ದ್ರಾಕ್ಷಾತೋಟಗಳಿಗೆ ಅದು ಹೆಸರುವಾಸಿಯಾಗಿರುವ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್, ಈ ನಗರದ ಭೌತಿಕ ಹಾಗೂ ಐತಿಹಾಸಿಕ ಸೌಂದರ್ಯದ ಕುರಿತ ಮಾತನಾಡಿದರು. ನಾವು ಏಸುಕ್ರಿಸ್ತರಲ್ಲಿ ನೆಲೆಯಾಗುವುದರ ಅರ್ಥ ನಮ್ಮ ಸ್ವಾತಂತ್ರವನ್ನು ಕಳೆದುಕೊಳ್ಳುವುದಲ್ಲ. ಬದಲಿಗೆ ನಮಗೆ ನಿಜ ಸ್ವಾತಂತ್ರ್ಯ ಎಂಬುವುದು ತೆರೆಯುತ್ತದೆ. ಆ ಮೂಲಕ ನಾವು ಮಹದಾನಂದವನ್ನು ಪಡೆದುಕೊಳ್ಳುವಂತಾಗುತ್ತದೆ ಎಂದು ಹೇಳಿದರು. 

ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್, ಕ್ರಿಸ್ತನಲ್ಲಿ ನೆಲೆಯಾಗುವುದು ಎಂದರೆ ಆತನೊಂದಿಗೆ ಆಧ್ಯಾತ್ಮಿಕತೆಯಲ್ಲಿ ಬೆಳೆಯುವುದು, ಆತನೊಂದಿಗೆ ಸಂಭಾಷಿಸುವುದು, ಆತನ ವಾಕ್ಯಗಳನ್ನು ಅಪ್ಪಿಕೊಳ್ಳುವುದು ಹಾಗೂ ದೇವರ ಸಾಮ್ರಾಜ್ಯಕ್ಕೆ ಆತನ ಹೆಜ್ಜೆಗಳಲ್ಲಿ ನಡೆಯುವುದು ಎಂದರ್ಥ ಎಂದು ಅವರು ನೆರೆದಿದ್ದ ಭಕ್ತಾದಿಗಳಿಗೆ ನುಡಿದರು. 

ಕೊನೆಗೆ, ನಮ್ಮ ಕ್ರೈಸ್ತ ಸಮುದಾಯಗಳು ನೆರೆಹೊರೆಯವರು ಹಾಗೂ ಕ್ರೈಸ್ತ ನಗರಗಳು ಎಲ್ಲರನ್ನು ಸ್ವಾಗತಿಸುವ, ಒಳಗೊಳ್ಳುವ ಹಾಗೂ ಆರೈಕೆ ಮಾಡುವ ನಗರಗಳಾಗಬೇಕು ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

29 April 2024, 03:48