ಹುಡುಕಿ

US-ISRRAEL-PALESTINIAN-CONFLICT-PROTEST US-ISRRAEL-PALESTINIAN-CONFLICT-PROTEST  (AFP or licensors)

ಪ್ಯಾಲೆಸ್ತೆನ್ ಹಾಗೂ ಇಸ್ರೇಲ್ ನಡುವೆ ಶಾಂತಿ ಹಾಗೂ ದ್ವಿರಾಷ್ಟ್ರೀಯ ಪರಿಹಾರಕ್ಕಾಗಿ ಪೋಪ್ ಫ್ರಾನ್ಸಿಸ್ ಪ್ರಾರ್ಥನೆ

ಪೋಪ್ ಫ್ರಾನ್ಸಿಸ್ ಜಾಗತಿಕ ಶಾಂತಿಗಾಗಿ ಮತ್ತೊಮ್ಮೆ ಮನವಿಯನ್ನು ಮಾಡಿದ್ದಾರೆ. ಯುದ್ಧದ ವಿನಾಶಕಾರಿ ಪರಿಣಾಮಗಳ ಕುರಿತು ಮಾತನಾಡಿರುವ ಅವರು ಇಸ್ರೇಲ್, ಪ್ಯಾಲೆಸ್ತೀನ್, ಉಕ್ರೇನ್, ರಷ್ಯಾ ದೇಶಗಳು ಸೇರಿದಂತೆ ಯುದ್ಧ ಸನ್ನಿವೇಶವಿರುವ ಎಲ್ಲಾ ರಾಷ್ಟ್ರಗಳಿಗಾಗಿ ಪ್ರಾರ್ಥಿಸುವಂತೆ ಭಕ್ತಾದಿಗಳಿಗೆ ಕರೆ ನೀಡಿದ್ದಾರೆ.

ವರದಿ: ಫ್ರಾಂಚೆಸ್ಕ ಮೆರ್ಲೋ, ಅಜಯ್ ಕುಮಾರ್

ಬುಧವಾರ ಏಪ್ರಿಲ್ 24ರಂದು ಪೋಪ್ ಫ್ರಾನ್ಸಿಸ್ ವ್ಯಾಟಿಕಲ್ ನಗರದಲ್ಲಿ ತಮ್ಮ ಸಾರ್ವಜನಿಕ ಭೇಟಿಯಲ್ಲಿ ಮತ್ತೊಮ್ಮೆ ಜಾಗತಿಕ ಶಾಂತಿಗಾಗಿ ಹಾಗೂ ಯುದ್ಧದ ನಿಲುಗಡೆಗಾಗಿ ಮನವಿ ಮಾಡಿಕೊಂಡಿದ್ದಾರೆ.

"ಯುದ್ಧ ಎಂಬುದು ಎಂದಿಗೂ ಸೋಲು" ಎಂದು ಹೇಳಿರುವ ಪೋಪ್ ಫ್ರಾನ್ಸಿಸ್ "ಈ ಯುದ್ಧದಿಂದ ಅಥವಾ ಯಾವುದೇ ಯುದ್ಧದಿಂದ ಲಾಭವಾಗುವುದು ಶಸ್ತ್ರಾಸ್ತ್ರ ವ್ಯಾಪಾರಿಗಳಿಗೆ ಮಾತ್ರ" ಎಂದು ಮತ್ತೊಮ್ಮೆ ಯುದ್ಧದ ಕುರಿತ ತಮ್ಮ ಮಾತುಗಳನ್ನು ಪುನರಾವರ್ತಿಸಿದ್ದಾರೆ.

ದಯವಿಟ್ಟು ಶಾಂತಿಗಾಗಿ ಪ್ರಾರ್ಥಿಸೋಣ ಎಂದು ಹೇಳಿರುವ ಫ್ರಾನ್ಸಿಸ್, ಯುದ್ಧಗ್ರಸ್ಥ ಉಕ್ರೇನ್ ದೇಶವನ್ನು ನೆನಪಿಸಿಕೊಂಡು, ಅಲ್ಲಿ ಪ್ರತಿದಿನ ಯುವ ಸೈನಿಕರು ಸಾಯಲು ಹೋಗುತ್ತಾರೆ ಎಂದು ಹೇಳಿದ್ದಾರೆ. ಮುಂದುವರೆದು ಮಾತನಾಡಿರುವ ಅವರು ಮಧ್ಯಪ್ರಾಚ್ಯಕ್ಕಾಗಿ, ವಿಶೇಷವಾಗಿ ಗಾಜಾಪ್ರದೇಶಕ್ಕಾಗಿ ಪ್ರಾರ್ಥಿಸಬೇಕು ಏಕೆಂದರೆ ಅದು ಬಹಳ ನೋವನ್ನು ಅನುಭವಿಸುತ್ತಿದೆ ಎಂದು ಹೇಳಿದ್ದಾರೆ.

ಅಂತಿಮವಾಗಿ ಪಾಲಿಸ್ತೀನ್ ಮತ್ತು ಇಸ್ರೇಲ್ ದೇಶಗಳು ಯುದ್ಧವನ್ನು ನಿಲ್ಲಿಸಿ ಪರಸ್ಪರ ಒಳ್ಳೆಯ ನೆರೆಹೊರೆಯವರಾಗಿ ಉತ್ತಮ ಬಾಂಧವ್ಯವನ್ನು ಹೊಂದಿ ಮುನ್ನಡೆಯುವಂತೆ ಪ್ರಾರ್ಥಿಸಿದ್ದಾರೆ. "ಎಡೆಬಿಡದೆ ಶಾಂತಿಗಾಗಿ ಪ್ರಾರ್ಥಿಸೋಣ" ಎಂದು ಹೇಳುವ ಮೂಲಕ ಪೋಪ್ ಪ್ರಾನ್ಸಿಸ್ ತಮ್ಮ ಮಾತುಗಳನ್ನು ಮುಗಿಸಿದರು.

24 April 2024, 17:02