ಹುಡುಕಿ

First General Congregation of the Synod First General Congregation of the Synod  (Vatican Media)

"ಕಾನ್ವರ್ಸೇಶನ್ ಇನ್ ದಿ ಸ್ಪಿರಿಟ್" ಪುಸ್ತಕಕ್ಕೆ ಮುನ್ನುಡಿ ಬರೆದ ಪೋಪ್ ಫ್ರಾನ್ಸಿಸ್

ಜುವಾನ್ ಆಂಟೋನಿಯೊ ಗುರ್ರೆರೋ ಆಲ್ವೇಸ್, ಎಸ್ ಜೆ, ಹಾಗೂ ಆಸ್ಕರ್ ಮಾರ್ಟಿನ್ ಲೋಪೆಜ್, ಎಸ್ ಜೆ., ಎಂಬ ಇಬ್ಬರು ಯೇಸು ಸಭೆಯ ಗುರುಗಳು ರಚಿಸಿರುವ ಮತ್ತು ವ್ಯಾಟಿಕನ್ ಪಬ್ಲಿಶಿಂಗ್ ಹೌಸ್ ಪ್ರಕಟಿಸಿರುವ "ಕಾನ್ವರ್ಸೇಶನ್ ಇನ್ ದಿ ಸ್ಪಿರಿಟ್": ದಿ ಆರ್ಟ್ ಆಫ್ ಡಿಸರ್ನಿಂಗ್ ಆಂಡ್ ದಿ ಪ್ರಾಕ್ಟೀಸ್ ಆಫ್ ಸಿನೋಡಾಲಿಟಿ" ಎಂಬ ಪುಸ್ತಕಕ್ಕೆ ಪೋಪ್ ಫ್ರಾನ್ಸಿಸ್ ಮುನ್ನುಡಿ ಬರೆದಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ತಮ್ಮ ಮುನ್ನುಡಿಯ ಆರಂಭದಲ್ಲಿ ಈ ಪುಸ್ತಕದ ಲೇಖಕರನ್ನು ಕುರಿತು ಮಾತನಾಡಿರುವ ಪೋಪ್ ಫ್ರಾನ್ಸಿಸ್, ಲೇಖಕರ ಆಧ್ಯಾತ್ಮಿಕ ಸಂಭಾಷಣೆಯಿಂದ ಪ್ರೇರಿತರಾಗಿ "ಕಾನ್ವರ್ಸೇಶನ್ ಇನ್ ದಿ ಸ್ಪಿರಿಟ್" ಪುಸ್ತಕವು ರೂಪುಗೊಂಡಿರುವುದು ಬಹಳ ಸುಂದರವಾಗಿದೆ ಎಂದು ಹೇಳಿದ್ದಾರೆ.

ಸಿನೊಡಾಲಿಟಿಯ ಕುರಿತು ಕೇವಲ ಅದರ ಪ್ರಕ್ರಿಯೆಯನ್ನು ಮಾತ್ರ ವಿವರಿಸದೆ, ಆದರೂ ಕುರಿತು ಐತಿಹಾಸಿಕ ಉಲ್ಲೇಖಗಳನ್ನು ನೀಡಿರುವುದು, ಓದುಗರು ಈ ಕುರಿತು ಸ್ಪಷ್ಟವಾಗಿ ಹಾಗೂ ಆಳವಾಗಿ ಗ್ರಹಿಸಿಕೊಳ್ಳಲು ನೆರವಾಗುತ್ತದೆ. ಈ ಪುಸ್ತಕವು ಧರ್ಮಸಭೆಯು ಆಲಿಸುವ ಧರ್ಮಸಭೆಯಾಗಿ ವೈಯಕ್ತಿಕ, ಸಮುದಾಯಿಕ, ಹಾಗೂ ಧಾರ್ಮಿಕ ಆಧ್ಯಾತ್ಮಿಕ ಅನುಭೂತಿಯನ್ನು ಹೊಂದುವ ಕುರಿತು ಬೆಳಕು ಚೆಲ್ಲುತ್ತದೆ.

ಈ ಪುಸ್ತಕದಲ್ಲಿನ ಆಂತರಿಕ ಇತ್ಯರ್ಥಗಳು ಎಂಬ ಅಧ್ಯಾಯವು ನಿರ್ದಿಷ್ಟವಾಗಿ ನನಗೆ ಅವಶ್ಯಕ ಎನಿಸಿತು. ನಾನು ಅನೇಕ ಬಾರಿ ಹೇಳಿರುವಂತೆ, ನಮ್ಮ ಉದ್ದೇಶ ಸಂಸತ್ತನ್ನು ನಡೆಸುವುದಲ್ಲ ಅಥವಾ ಅಭಿಪ್ರಾಯಗಳನ್ನು ಸಂಗ್ರಹಿಸುವುದಿಲ್ಲ; ಬದಲಿಗೆ, ಸಹೋದರ ಸಹೋದರಿಯರಾಗಿ ಪವಿತ್ರಾತ್ಮರ ಪ್ರೇರಣೆಯಿಂದ ಜೊತೆಯಾಗಿ ನಡೆಯುವುದು. ಸಿನೋಡ್ ಪ್ರಕ್ರಿಯೆಯ ನಾಯಕರು ಪವಿತ್ರಾತ್ಮರೇ ಆಗಿದ್ದಾರೆ.

ತಮ್ಮ ಮುನ್ನುಡಿಯಲ್ಲಿ, ಕೊನೆಗೆ, ಲೇಖಕರ ಶ್ಲಾಘಿಸಿರುವ ಪೋಪ್ ಫ್ರಾನ್ಸಿಸ್, ಧಾರ್ಮಿಕ ಸಮುದಾಯಗಳಲ್ಲಿ ಇದೊಂದು ಅದ್ಭುತ ಸಹಾಯವಾಗಿರಲಿದೆ ಎಂದು ಹೇಳಿದ್ದಾರೆ.

ನನಗಾಗಿ ಪ್ರಾರ್ಥಿಸುವುದನ್ನು ಮರೆಯಬೇಡಿ ಎಂದೂ ಸಹ ಪೋಪ್ ಫ್ರಾನ್ಸಿಸ್ ನಮೂದಿಸಿದ್ದಾರೆ.

29 April 2024, 17:08