ಹುಡುಕಿ

ಡ್ರಾಟ್ಸ್ ಬೋರ್ಡ್ ಗೇಮ್ ಆಟದ ಸಾಮಾಜಿಕ ಮೌಲ್ಯದ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್

ಇಟಾಲಿಯನ್ ಡ್ರಾಟ್ಸ್ ಅಸೋಸಿಯೇಶನ್ನಿನ ಸದಸ್ಯರು ತಮ್ಮ ಅಸೋಸಿಯೇಶನ್ ನೂರು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದರು.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್ 

ಕ್ಲೆಮೆಂಟೀನ್ ಸಭಾಂಗಣದಲ್ಲಿ ಇವರನ್ನು ಬರಮಾಡಿಕೊಂಡ ಪೋಪ್ ಫ್ರಾನ್ಸಿಸ್, ಪೌರಾಣಿಕ ಆಟದ ಮಹತ್ವದ ಕುರಿತು ಮಾತನಾಡಿದರು. ಈ ಆಟದ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್, ಇದು ಸರಳ ಆಟವಾಗಿದ್ದು, ಇದನ್ನು ಎಲ್ಲರೂ ಆಡಬಹುದಾಗಿದೆ ಹಾಗೂ ಜಗತ್ತಿನ ಅತ್ಯಂತ ಈ ಆಟವನ್ನು ಜನರು ಇಷ್ಟಪಟ್ಟು ಆಡುವುದನ್ನು ನೋಡಬಹುದಾಗಿದೆ ಎಂದು ಹೇಳಿದರು. 

ಈ ಆಟವು ವಲಸಿಗರ ನಡುವೆ ಪ್ರಸಿದ್ಧವಾದ ಆಟವಾಗಿದ್ದು ವಿವಿಧ ದೇಶಗಳಿಂದ ಬೇರೆ ದೇಶಗಳಿಗೆ ವಲಸೆ ಹೋಗುವ ವಲಸಿಗರು ತಮ್ಮ ಪ್ರಯಾಣದ ಮಧ್ಯೆ ಈ ಆಟವನ್ನು ಆಡುತ್ತಾರೆ. ತಮ್ಮೆಲ್ಲ ಅನಿಶ್ಚಿತತೆ, ಕಷ್ಟಗಳ ನಡುವೆ ಸಮಾಧಾನವನ್ನು ಕಂಡುಕೊಳ್ಳಲು ಈ ಆಟವನ್ನು ಆಡುತ್ತಾರೆ ಎಂದು ತೂತ್ ಫ್ರಾನ್ಸಿಸ್ ಹೇಳಿದರು. 

ಮುಂದುವರೆದು ಮಾತನಾಡಿದ ಅವರು, ಈ ಆಟವು ಯೋಚಿಸುವ ಆಟವಾಗಿರುವ ಕಾರಣ, ಇದು ನಮ್ಮ ಯೋಚನಾ ಶಕ್ತಿಯನ್ನು ವೃದ್ಧಿಸುತ್ತದೆ ಹಾಗೂ ಒಬ್ಬ ವ್ಯಕ್ತಿ ತರ್ಕಬದ್ಧವಾಗಿ ಆಲೋಚಿಸುವಂತೆ ಮಾಡುತ್ತದೆ ಎಂದು ಹೇಳಿದರು.

ಅಂತಿಮವಾಗಿ ಈ ಟ್ರ್ಯಾಕ್ಸ್ ಅಸೋಸಿಯೇಷನ್ನಿನ ಸದಸ್ಯರ ಕಾರ್ಯಗಳನ್ನು ಶ್ಲಾಘಿಸಿದ ಪೋಪ್ ಫ್ರಾನ್ಸಿಸ್, ವೈಯಕ್ತಿಕತನದಿಂದ ಹೊರಬಂದು, ಸಾಮಾಜಿಕ ವ್ಯಕ್ತಿಗಳಾಗುವುದಕ್ಕೆ ಈ ಆಟವು ನೆರವಾಗುತ್ತದೆ ಎಂದು ಹೇಳಿದರು.

26 April 2024, 18:08