ಹುಡುಕಿ

ಪೋಪ್: ಕ್ರೀಡೆ ಸೋದರತೆ ಮತ್ತು ಬೆರೆಯುವಿಕೆಯ ತಾಣವಾಗಿದೆ

ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಆನ್ ಸ್ಪೋರ್ಟ್ಸ್ ಆ್ಯಂಡ್ ಸ್ಪಿರಿಚ್ವಾಲಿಟಿ ಸಮಾವೇಶಕ್ಕೆ ಸಂದೇಶವನ್ನು ಕಳುಹಿಸಿರುವ ಪೋಪ್ ಫ್ರಾನ್ಸಿಸ್, ನಿಜವಾದ ಮೌಲ್ಯಗಳು ಹಾಗೂ ಸ್ಪರ್ಧೆಯನ್ನು ಜೀವಂತವಾಗಿರಿಸುವ ಕಾರಣ, ಎಂದಿಗೂ ಸಹ ಕ್ರೀಡೆಯನ್ನು ಕಡೆಗಣಿಸಬಾರದು ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ರೋಮ್ ನಗರದಲ್ಲಿ ಮೇ ೧೬ ರಿಂದ ೧೮ ರವರೆಗೆ ನಡೆಯುತ್ತಿರುವ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಆನ್ ಸ್ಪೋರ್ಟ್ಸ್ ಆ್ಯಂಡ್ ಸ್ಪಿರಿಚ್ವಾಲಿಟಿ ಸಮಾವೇಶಕ್ಕೆ ಸಂದೇಶವನ್ನು ಕಳುಹಿಸಿರುವ ಪೋಪ್ ಫ್ರಾನ್ಸಿಸ್, ನಿಜವಾದ ಮೌಲ್ಯಗಳು ಹಾಗೂ ಸ್ಪರ್ಧೆಯನ್ನು ಜೀವಂತವಾಗಿರಿಸುವ ಕಾರಣ, ಎಂದಿಗೂ ಸಹ ಕ್ರೀಡೆಯನ್ನು ಕಡೆಗಣಿಸಬಾರದು ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮವನ್ನು ವ್ಯಾಟಿಕನ್ನಿನ ಸಂಸ್ಕೃತಿ ಪೀಠ ಮತ್ತು ಪವಿತ್ರ ಪೀಠದ ಫ್ರೆಂಚ್ ರಾಯಭಾರ ಕಚೇರಿಯ ಸಹಯೋಗದಲ್ಲಿ ಆಯೋಜಿಸಲಾಗಿದೆ.

"ಕ್ರೀಡೆ ಎಂಬುದು ಈ ಜಗತ್ತಿನಲ್ಲಿ ಅತ್ಯಂತ ಪ್ರಮುಖಾಂಶವಾಗಿರುವ ಕಾಲಘಟ್ಟದಲ್ಲಿ ನಾವು ಜೀವಿಸುತ್ತಿದ್ದೇವೆ. ಇದು ಸಮಾಜದಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಕ್ರೀಡಾಪಟುಗಳ ಶಿಸ್ತು, ಸಮಚಿತ್ತ ಹಾಗೂ ಆರೋಗ್ಯಕರ ಸ್ಪರ್ಧೆ ಉತ್ತಮ ಕ್ರಿಸ್ತೀಯ ಜೀವನದ ಮಾದರಿಯಾಗಿದೆ" ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

ಕ್ರೀಡೆ ಹಾಗೂ ಶಿಕ್ಷಣವನ್ನು ಪಾಲನಾತ್ಮಕವಾಗಿ ಮುನ್ನಡೆಸಬೇಕು ಎಂದಿರುವ ಪೋಪ್ ಫ್ರಾನ್ಸಿಸ್, ಇದಕ್ಕಾಗಿ ನಾವು ಶುಭಸಂದೇಶದ ಮೌಲ್ಯಗಳನ್ನು ಆಳವಡಿಸಿಕೊಳ್ಳಬೇಕು ಎಂದಿದ್ದಾರೆ. ಮುಂದುವರೆದು ಮಾತನಾಡಿರುವ ಅವರು ಪೋಪ್ ಸಂತ ದ್ವಿತೀಯ ಜಾನ್ ಪೌಲರ ಕ್ರೀಡಾ ಜ್ಯೂಬಿಲಿಯಂದು ತಮ್ಮ ಪ್ರಭೋದನೆಯಲ್ಲಿ ಹೇಳಿರುವ 'ಯೇಸುಕ್ರಿಸ್ತರು ದೇವರ ನಿಜವಾದ ಕ್ರೀಡಾಪಟು" ಎಂಬ ವಾಕ್ಯವನ್ನು ನೆನಪಿಸಿಕೊಂಡರು.

ಈ ಸಮಾವೇಷವು ಕ್ರೀಡಾಪಟುಗಳ, ವ್ಯವಸ್ಥಾಪಕರ, ತರಭೇತುದಾರರ ಹಾಗೂ ಇದರ ಭಾಗವಾಗಿರುವ ಎಲ್ಲರ ಜವಾಬ್ದಾರಿಯ ಕುರಿತು ಹೇಳುತ್ತದೆ. ಯುವ ಜನರ ಸಮಗ್ರರಮಾನವ ಅಭಿವೃದ್ಧಿಗೆ ನೈತಿಕ ಮೌಲ್ಯಗಳನ್ನು ಹಾಗೂ ಸೂಕ್ತವಾದ ವಾತಾವರಣವನ್ನು ಕ್ರೀಡೆ ಒಳಗೊಳ್ಳಬೇಕು ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

16 May 2024, 17:54