ಹುಡುಕಿ

ಕಾರ್ಡಿನಲ್ ತಾಗ್ಲೆ ಅವರನ್ನು ಯುಎಸ್ ಯುಕರಿಸ್ಟಿಕ್ ಕಾಂಗ್ರೆಸ್ ಗೆ ತಮ್ಮ ವಿಶೇಷ ಪ್ರತಿನಿಧಿಯನ್ನಾಗಿ ನೇಮಿಸಿದ ಪೋಪ್ ಫ್ರಾನ್ಸಿಸ್

ಯುನೈಟೆಡ್ ಸ್ಟೇಟ್ಸ್ ನ ಇಂಡಿಯನಪೊಲೀಸ್ ನಗರದಲ್ಲಿ ನಡೆಯಲಿರುವ ಯುಕರಿಸ್ಟಿಕ್ ಕಾಂಗ್ರೆಸ್ ಗೆ ತಮ್ಮ ವಿಶೇಷ ಪ್ರತಿನಿಧಿಯನ್ನಾಗಿ ಕಾರ್ಡಿನಲ್ ಲೂಯಿಸ್ ಆಂಟೋನಿಯೊ ಜಿ. ತಾಗ್ಲೆ ಅವರನ್ನು ಪೋಪ್ ಫ್ರಾನ್ಸಿಸ್ ನೇಮಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ವ್ಯಾಟಿಕನ್ನಿನ ಸುವಾರ್ತಾ ಪ್ರಸಾರ ಪೀಠದ ಪ್ರೋ-ಪ್ರಿಫೆಕ್ಟ್ ಆಗಿರುವ ಕಾರ್ಡಿನಲ್ ಲೂಯಿಸ್ ಆಂಟೋನಿಯೊ ಜಿ. ತಾಗ್ಲೆ ಅವರನ್ನು ಪೋಪ್ ಫ್ರಾನ್ಸಿಸ್ ಯುನೈಟೆಡ್ ಸ್ಟೇಟ್ಸ್ ನ ಇಂಡಿಯನಪೊಲೀಸ್ ನಗರದಲ್ಲಿ ನಡೆಯಲಿರುವ ಯುಕರಿಸ್ಟಿಕ್ ಕಾಂಗ್ರೆಸ್ ಗೆ ತಮ್ಮ ವಿಶೇಷ ಪ್ರತಿನಿಧಿಯನ್ನಾಗಿ ನೇಮಿಸಿದ್ದಾರೆ.

ಯುಕರಿಸ್ಟಿಕ್ ಕಾಂಗ್ರೆಸ್ ಜುಲೈ 17, 2024 ರಿಂದ ಜುಲೈ 21, 2024 ರವರೆಗೆ ನಡೆಯಲಿದೆ.

ಇದರ ಜಾಲತಾಣದ ಪ್ರಕಾರ, ಯುಕರಿಸ್ಟಿಕ್ ಕಾಂಗ್ರೆಸ್ (ಬಲಿಪೂಜಾ ಸಮಾವೇಶ) ಮಹಾನ್ ವೈಯಕ್ತಿಕ ನವೀಕರಣವನ್ನು ಪಡೆದುಕೊಳ್ಳುವ ಹಾಗೂ ಆ ಮೂಲಕ ಪ್ರಭುವಿನ ಶುಭ ಸಂದೇಶವನ್ನು ಜಗತ್ತಿಗೆ ಸಾರಲು ಪ್ರೇಷಿತರಾಗುವ ಕರೆಯಾಗಿದೆ.

18 May 2024, 16:50